ಶಿವಮೊಗ್ಗ | ಬಫರ್ ಝೋನ್ ವ್ಯಾಪ್ತಿಯಲ್ಲಿ ರೆಸಾರ್ಟ್; ನೈಜ ಹೋರಾಟಗಾರರ ವೇದಿಕೆಯಿಂದ ಜಿಲ್ಲಾಧಿಕಾರಿಗೆ ದೂರು

Date:

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ತಾಲೂಕು ಭಾರತಿಪುರದ ತುಂಗಾ ನದಿಯ ದಡದಲ್ಲಿರುವ ವಿಹಂಗಮ ಹಾಲಿಡೇ ರೆಸಾರ್ಟ್ ಬಫರ್ ಝೋನ್ ಒಳಗೆ ಕಾರ್ಯಾಚರಿಸುತ್ತಿದ್ದು, ಕೃಷಿ ಚಟುವಟಿಕೆಗಳ ಒಳಗೊಂಡಿರುವ ರೆಸಾರ್ಟ್ ಜೊತೆಗೆ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆ ಅನುಮತಿ ನೀಡಿದವರು ಯಾರು ಎಂದು ನೈಜ ಹೋರಾಟಗಾರರ ವೇದಿಕೆಯು ಜಿಲ್ಲಾಡಳಿತವನ್ನು ಪ್ರಶ್ನಿಸಿದೆ.

ನೈಜ ಹೋರಾಟಗಾರರ ವೇದಿಕೆಯ ಮುಖಂಡ ಬೆಂಗಳೂರಿನ ಎಚ್ ಎಂ ವೆಂಕಟೇಶ್ ಈ ಬಗ್ಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ಸಲ್ಲಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಭಾರತಿಪುರದ ತುಂಗಾ ನದಿಯ ದಡದಲ್ಲಿರುವ ವಿಹಂಗಮ ಹಾಲಿಡೇ ರೆಸಾರ್ಟ್ ಕವಿಶೈಲ, ಆಗುಂಬೆ, ಕವಲೆದುರ್ಗ, ಕೊಡಚಾದ್ರಿ ಮತ್ತಿತರ ಪ್ರವಾಸಿ ತಾಣಗಳು ಜನರನ್ನು ಆಕರ್ಷಿಸುವ ತಾಣಗಳಾಗಿವೆ. ಈ ರೆಸಾರ್ಟ್ ತುಂಗಾ ನದಿಯ ದಂಡೆಯ ಮೇಲಿದೆ. ಇದು ಬಫರ್ ಝೋನ್ ಒಳಗೆ ನಿರ್ಮಿಸಲಾಗಿದ್ದು, ರೆಸಾರ್ಟ್ ಮಾಲೀಕರು ಕಾಟೇಜ್‌ಗಳನ್ನು ನಿರ್ಮಾಣ ಮಾಡಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈಗ ಮಳೆಗಾಲವಾಗಿರುವುದರಿಂದ ತುಂಗಾ ನದಿ ತುಂಬಿ ಹರಿಯುತ್ತಿದೆ. ಪ್ರವಾಸಿಗರು ಉಳಿದುಕೊಳ್ಳುವ ಕಾಟೇಜ್ ಕೆಳಗೆ ನದಿದಂಡೆಯು ಕುಸಿತಗೊಂಡಿದ್ದು, ಕಾಟೇಜ್‌ಗಳು ಅಪಾಯದ ಅಂಚಿನಲ್ಲಿವೆ. ಕೃಷಿ ಚಟುವಟಿಕೆಗಳನ್ನೂ ಒಳಗೊಂಡಿರುವ ರೆಸಾರ್ಟ್ ಇದಾಗಿದ್ದು, ಅಡಿಕೆ ತೋಟ ಕೃಷಿ ಜೊತೆ ಜೊತೆಗೆ ಕಮರ್ಷಿಯಲ್ ಚಟುವಟಿಕೆಗಳೂ ಇಲ್ಲಿ ನಡೆಯುತ್ತಿವೆ. ಇದಕ್ಕೆ ಅನುಮತಿ ನೀಡಿದವರು ಯಾರು? ಎಂದು ದೂರಿನಲ್ಲಿ ಪ್ರಶ್ನಿಸಿದ್ದಾರೆ.

“ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಅನುಮತಿ ನೀಡಿದ್ದಾರ? ತುಂಬಿ ಹರಿಯುತ್ತಿರುವ ತುಂಗಾ ನದಿಯ ದಡದಲ್ಲಿಯೇ ರೆಸಾರ್ಟ್ ನಿರ್ಮಾಣವಾಗಿದೆ. ಅದು ಬಫರ್ ಝೋನ್ ಒಳಗೆ ಇದೆ. ಇದಕ್ಕೆ ಅವಕಾಶವನ್ನು ನೀಡಿದ ಅಧಿಕಾರಿಗಳು ಯಾರು? ಈ ಬಗ್ಗೆ ತನಿಖೆಯ ಅಗತ್ಯವಿದೆ” ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.

ರೆಸಾರ್ಟ್‌

ಈ ರೆಸಾರ್ಟ್‌ಗೆ ಬರುವವರು ಆನ್‌ಲೈನ್‌ ಬುಕಿಂಗ್‌ ಮಾಡಲೇಬೇಕು. ಪ್ರಕೃತಿಯ ಸೊಬಗಿನ ಒಳಗೆ ಜೀವಕ್ಕೆ ಅಪಾಯ ಒಡ್ಡುವ ನದಿ ದಡದಲ್ಲಿ ನಾವಿದ್ದೇವೆ ಎಂಬ ಅರಿವು ಪ್ರವಾಸಿಗರಿಗೆ ಇರುವುದಿಲ್ಲ. ಶಿವಮೊಗ್ಗ ಜಿಲ್ಲಾಡಳಿತವು ಈ ಕೃಷಿ ಭೂಮಿಯಲ್ಲಿ ಮತ್ತು ಬಫರ್ ಝೋನ್‌ನಲ್ಲಿ ರೆಸಾರ್ಟ್ ನಡೆಸಲು ಅನುಮತಿ ಕೊಡಲು ಹೇಗೆ ಸಾಧ್ಯ? ಕಾನೂನಿಗೆ ವಿರುದ್ಧವಾಗಿ ರೆಸಾರ್ಟ್ ನಡೆಸಲು ಅವಕಾಶ ನೀಡಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಅರಣ್ಯ ಸಚಿವರನ್ನು ಆಗ್ರಹಿಸಿದ್ದಾರೆ.

ಒಂದು ವೇಳೆ ರೆಸಾರ್ಟ್ ಮಾಲೀಕರು ಎಲ್ಲ ಕಾನೂನು ಪ್ರಕ್ರಿಯೆಗಳ ಮುಖಾಂತರವೇ ರೆಸಾರ್ಟ್ ನಡೆಸುತ್ತಿದ್ದರೆ ನಮ್ಮದು ಯಾವುದೇ ಅಭ್ಯಂತರವಿರುವುದಿಲ್ಲ. ಆದರೆ ತುಂಬಿ ಹರಿಯುತ್ತಿರುವ ತುಂಗಾನದಿಯ ತಟದಲ್ಲಿ ಮಳೆಗಾಲದ ಕಾರಣ ನೀರಿನ ಹರಿವು ಜಾಸ್ತಿಯಾಗಿ ತುಂಗಾನದಿಯ ದಂಡೆ ಕುಸಿಯುತ್ತಿದೆ. ಅದು ರೆಸಾರ್ಟ್‌ನಲ್ಲಿ ಉಳಿದುಕೊಳ್ಳುವ ಪ್ರವಾಸಿಗರು ಕಾಟೇಜಿನ ಹೊರಗೆ ನದಿ ನೀರು ನೋಡಿ ಖುಷಿಪಡುತ್ತಿದ್ದಾರೆ. ಇದರ ಹಿಂದಿನ ಅಪಾಯದ ಅರಿವಿಲ್ಲ. ಒಂದಲ್ಲ ಒಂದು ದಿನ ನದಿಯ ನೀರು ಉಕ್ಕಿ ನದಿ ದಂಡೆಯ ಮಣ್ಣು ಕುಸಿದು ಉಳಿದುಕೊಳ್ಳುವ ಪ್ರವಾಸಿಗರ ಜೀವಕ್ಕೆ ಅಪಾಯ ಒಡ್ಡುವುದಂತೂ ಸತ್ಯ. ಬೇಸಿಗೆ ಸಮಯದಲ್ಲಿ ನದಿಯ ನೀರು ಕಡಿಮೆಯಾದಾಗ ನದಿಯಲ್ಲಿ ಬೋಟಿಂಗ್ ಕೂಡ ನಡೆಯುತ್ತಿದೆ. ನದಿಯು ಸಾರ್ವಜನಿಕರ ಸ್ವತ್ತಾಗಿದ್ದು, ಇದಕ್ಕೆಲ್ಲ ಅವಕಾಶ ಕೊಟ್ಟ ಅಧಿಕಾರಿಗಳು ಯಾರು? ಎಂದು ಎಚ್ ಎಂ ವೆಂಕಟೇಶ್ ಕೇಳಿದ್ದಾರೆ.

ಈ ಹಿಂದೆ ಕೂಡ ಅರಣ್ಯ ಮತ್ತು ಪ್ರಾಣಿಗಳ ಅಂಗಾಂಗಗಳನ್ನು ರೆಸಾರ್ಟ್ ಅಲ್ಲಿ ಇರಿಸಿದ ಬಗ್ಗೆ ತೀರ್ಥಹಳ್ಳಿಯ ಸ್ಥಳೀಯ ಪೊಲೀಸರು ರೆಸಾರ್ಟ್ ಮೇಲೆ ದಾಳಿ ನಡೆಸಿದ್ದು, ಈ ಬಗ್ಗೆ ಎಫ್ ಐ ಆರ್ ದಾಖಲಾಗಿರುವ ಬಗ್ಗೆ ಮಾಧ್ಯಮಗಳೂ ಕೂಡಾ ವರದಿ ಮಾಡಿವೆ. ತೀರ್ಥಹಳ್ಳಿಯ ಪ್ರಕೃತಿಯ ಸೊಬಗನ್ನು ಸವಿಯಲು ಬರುವ ಪ್ರವಾಸಿಗರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಹಾಗೂ ಪ್ರಕೃತಿ, ಪರಿಸರ, ನದಿಯನ್ನು ದುರುಪಯೋಗಪಡಿಸಿಕೊಂಡ ರೆಸಾರ್ಟ್ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೈಜ ಹೋರಾಟಗಾರರ ವೇದಿಕೆಯು ಒತ್ತಾಯಿಸಿದೆ.

ಸಚಿವರಿಗೆ ಕಳುಹಿಸಿದ ದೂರಿನ ಪ್ರತಿಯನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ತೀರ್ಥಹಳ್ಳಿ ತಾಲೂಕು ತಹಶೀಲ್ದಾರ್ ಜಕ್ಕಣ್ಣವನರ್ ಅವರಿಗೆ ಇ-ಮೇಲ್ ಮಾಡಿದ್ದಾಗಿ ಈ ದಿನ.ಕಾಮ್ಗೆ ನೈಜ ಹೋರಾಟಗಾರರ ವೇದಿಕೆಯ ಎಚ್ ಎಂ ವೆಂಕಟೇಶ್ ತಿಳಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ತೀರ್ಥಹಳ್ಳಿ ತಹಶೀಲ್ದಾರ್ ಅವರನ್ನು ಸಂಪರ್ಕಿಸಿದಾಗ, “ನೈಜ್ಯ ಹೋರಾಟಗಾರರ ವೇದಿಕೆಯು ನೀಡಿದ ದೂರಿನ ಹಿನ್ನೆಲೆಯಲ್ಲಿ ರೆಸಾರ್ಟ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಲಿದ್ದೇವೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ತದ ನಂತರ ನಾವು ನಿಮಗೆ ಮಾಹಿತಿ ನೀಡುತ್ತೇವೆ” ಎಂದು ತಿಳಿಸಿದ್ದಾರೆ.

ನೈಜ್ಯ ಹೋರಾಟಗಾರರ ವೇದಿಕೆಯ ದೂರಿನ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿ ತಹಶೀಲ್ದಾರ್ ಅವರಿಗೆ ಬರೆದಿರುವ ಪತ್ರದ ಪ್ರತಿ

ಇದರ ಕುರಿತು ಈ ದಿನ.ಕಾಮ್ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರನ್ನು ಸಂಪರ್ಕಿಸಿದಾಗ, “ನೈಜ ಹೋರಾಟಗಾರರ ವೇದಿಕೆಯು ಅರಣ್ಯ ಸಚಿವರಿಗೆ ನೀಡಿದ ದೂರಿನ ಪ್ರತಿಯು ಜಿಲ್ಲಾಡಳಿತಕ್ಕೂ ತಲುಪಿದೆ. ಈ ಬಗ್ಗೆ ಪರಿಶೀಲನೆ ಮಾಡುವಂತೆ ತಹಶೀಲ್ದಾರ್ ಅವರಿಗೆ ಈಗಾಗಲೇ ತಿಳಿಸಲಾಗಿದೆ. ಅವರ ವರದಿಯ ನಂತರ, ರೆಸಾರ್ಟ್‌ಗೆ ಅನುಮತಿ ನೀಡಲಾಗಿದೆಯೇ? ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.

ರಾಘವೇಂದ್ರ ಭರದ್ವಾಜ್, ಶಿವಮೊಗ್ಗ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರ ಗುರುತಿಸಿರುವ ಜಾಗದಲ್ಲಿ ಶೀಘ್ರವೇ ನಿವೇಶನಗಳನ್ನು ಹಂಚಿಕೆ ಮಾಡಲು ಒತ್ತಾಯ

ದಲಿತ ಹಾಗೂ ಹಿಂದುಳಿದ ವರ್ಗದ ವಸತಿ ರಹಿತ ಕುಟುಂಬಗಳಿಗೆ ಕಡ್ಲೆಗೊಂದಿ ಗ್ರಾಮದಲ್ಲಿ...

ಹಾಸನ | ಸಮಗ್ರ ಅಭಿವೃದ್ಧಿ ಕುರಿತು ಅ.20ರಂದು ಬೃಹತ್ ವಿಚಾರ ಸಂಕಿರಣ

ಹಾಸನ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿ ಕುರಿತು ನಗರದ ಡಾ....

ರಾಯಚೂರು | ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ದಸಂಸದಿಂದ ಪ್ರತಿಭಟನೆ

ಸುಪ್ರೀಂ ಕೋರ್ಟ್ ಅದೇಶದಂತೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ...

ಯಾದಗಿರಿ | ಗುಂಡಿಗಳಿಗೆ ಕಾಂಕ್ರೀಟ್ ಸುರಿದು ರಸ್ತೆ ದುರಸ್ತಿಗೊಂಡಿದೆ‌ ಎಂದು ತಿಳಿಸಿದ ಅಧಿಕಾರಿಗಳು!

ನೆರೆಯ ರಾಜ್ಯ ತೆಲಂಗಾಣದ ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುವ ಯಾದಗಿರಿ ಜಿಲ್ಲೆಯ ದೋರನಹಳ್ಳಿಯ...