ಕಲಬುರಗಿ ಜಿಲ್ಲೆಯಯ ಜೀವರ್ಗಿಯಲ್ಲಿ ಕರ್ತವ್ಯನಿರತ ಕೆಎಸ್‌ಆರ್‌ಟಿಸಿ ನಿರ್ವಾಹಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಲಬುರಗಿ ಡಿಪೊ 2ರ ಕಲಬುರಗಿ–ಹರವಾಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ನ ನಿರ್ವಾಹಕರಾದ ಮಲ್ಲಯ್ಯ ಸ್ವಾಮಿ ಮೃತ ಪಟ್ಟಿದ್ದಾರೆ.
ಇಂದು ಬೆಳಿಗ್ಗೆ ಅಂಬೇಡ್ಕರ್ ಸರ್ಕಲ್ ಬಳಿ ಘಟನೆ ಸಂಭವಿಸಿದೆ. ಜೀವರ್ಗಿಯಿಂದ ಹರವಾಳು ಮಾರ್ಗವಾಗಿ ಸಂಚರಿಸುವಾಗ ಲಘುವಾದ ಎದೆನೋವು ಕಾಣಿಸಿಕೊಂಡಿದೆ, ತಕ್ಷಣವೇ ಜೀವರ್ಗಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮಲ್ಲಯ್ಯ ಸ್ವಾಮಿ ಸಾವನ್ನಪ್ಪಿರುವುದಾಗಿ ಧೃಡಪಡಿಸಿದ್ದಾರೆ.
ಮೃತ ಮಲ್ಲಯ್ಯ ಸ್ವಾಮಿ ಅವರು ಜೇವರ್ಗಿ ತಾಲ್ಲೂಕಿನ ರಾಜವಾಳ ಗ್ರಾಮದ ನಿವಾಸಿ ಎಂಬ ಮಾಹಿತಿ ತಿಳಿದು ಬಂದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಜೇವರ್ಗಿ ಡಿಪೋ ವ್ಯವಸ್ಥಾಪಕ ಹಾಗೂ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ತಿಳಿದು ಬಂದಿದೆ.
ಕಲಬುರಗಿ | ಹೃದಯಾಘಾತದಿಂದ ಕೆಎಸ್‌ಆರ್‌ಟಿಸಿ ನಿರ್ವಾಹಕ ಸಾವು
ಪೋಸ್ಟ್ ಹಂಚಿಕೊಳ್ಳಿ:





