ಕಲಬುರಗಿ ಜಿಲ್ಲೆಯ ಜಯದೇವ ಆಸ್ಪತ್ರೆ ಆವರಣದಲ್ಲಿರುವ ಆಳವಾದ ಗುಂಡಿಗೆ ಬಿದ್ದು, ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ನಗರದ ಜಯದೇವ ಆಸ್ಪತ್ರೆಯಲ್ಲಿ ಔಷಧಿ ಪಡೆಯಲು ಹೋದ ಪಾಂಡುರಂಗ ಜಗನ್ನಾಥ ಮೌರ್ಯ (35) ಆಳವಾದ ಗುಂಡಿಗೆ ಬಿದ್ದು ಗಾಯಗೊಂಡಿರುವ ವ್ಯಕ್ತಿ ಎನ್ನಲಾಗಿದೆ.
ಪಾಂಡುರಂಗ ಜಗನ್ನಾಥ ಮೌರ್ಯ ಹಾಗೂ ಹೆಂಡತಿ ಪೂಜಾ ದಂಪತಿ ತಾರ್ಫೈಲ್ ಸ್ಲಂ ನಿವಾಸಿಗಳು ಕೂಲಿ ಕಾರ್ಮಿಕರಾಗಿದ್ದು, ಇವರಿಗೆ ಮೂರು ಜನ ಮಕ್ಕಳಿದ್ದಾರೆ. ಒಬ್ಬಳು ಪುತ್ರಿ, ಇಬ್ಬರು ಪುತ್ರರಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಗರ್‌ಹುಕುಂ ಭೂರಹಿತರಿಗೆ ಹಕ್ಕುಪತ್ರ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ
ಆಸ್ಪತ್ರೆ ಆವರಣದಲ್ಲಿ 15 ಅಡಿ ಆಳವಾದ ಅವೈಜ್ಞಾನಿಕ ಗುಂಡಿ ಬಿಟ್ಟಿದ್ದು, ಗುಂಡಿ ಮೇಲೆ ಯಾವುದೇ ತಡೆ ಅಸ್ತ್ರಗಳ ನಿರ್ವಹಣೆ ಇಲ್ಲದಿರುವುದು ಅನಾಹುತಕ್ಕೆ ಕಾರಣವಾಗಿದೆ. ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.