ಕಲಬುರಗಿ | ಖಾಜಕೋಟನೂರ್ ಶಾಲೆಗಿಲ್ಲ ತಡೆಗೋಡೆ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ

Date:

Advertisements

ಕಲಬುರಗಿ ಗ್ರಾಮಾಂತರ ವಲಯದ ಶಾಸಕ ಬಸವರಾಜ ಮತ್ತಿಮುಡ್ ವ್ಯಾಪ್ತಿಗೆ ಒಳಪಡುವ ಖಾಜಕೋಟನೂರ್ ಶಾಲೆಗೆ ತಡೆಗೋಡೆ ಇಲ್ಲದಿರುವುದರಿಂದ ರಾತ್ರಿ ವೇಳೆ ದನ, ಕರು, ಕುರಿಗಳು ವಿಶ್ರಾಂತಿ ಪಡೆದು ಶಾಲೆಯ ಅಂಗಳದಲ್ಲಿ ಗಲೀಜು ಮಾಡುತ್ತಿರುತ್ತವೆ. ಅಲ್ಲದೆ ಕುಡುಕರು ಪುಂಡರು ಸಾರಾಯಿ ಕುಡಿದು ಬಟಲಿಗಳನ್ನು ಶಾಲೆಯ ಆವರಣದಲ್ಲಿ ಬಿಸಾಡಿರುತ್ತಾರೆ. ಅದನ್ನು ಅಡುಗೆ ಸಿಬ್ಬಂದಿಗಳು, ಶಿಕ್ಷಕರು ಸೇರಿಕೊಂಡು ಬೆಳಗ್ಗೆ ಸ್ವಚ್ಛಮಾಡಿ ತರಗತಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಖಾಜಕೋಟನೂರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಲಾಗಿದ್ದು, ಬಳಕೆಗೆ ಮುನ್ನ ಪಾಳು ಬಿದ್ದಿದೆ. ಇದರಿಂದ ನಾಯಿ-ಹಂದಿಗಳ ವಿಶ್ರಾಂತಿ ತಾಣವಾಗಿದೆ. ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಪಾಳು ಬಿದ್ದ ಅಂಗನವಾಡಿ ಕೇಂದ್ರದಲ್ಲಿ ಸಾರ್ವಜನಿಕರು ರಾತ್ರಿ ವೇಳೆ ಮಲಮೂತ್ರ ವಿಸರ್ಜನೆ ಮಾಡಲು ಬಳಸುತ್ತಿರುವುದು ಕಂಡುಬಂದಿದೆ.

ಈ ಶಾಲೆ 1960ರಲ್ಲಿ ಪ್ರಾರಂಭವಾಗಿದ್ದು, ದಾಖಲಾತಿ ಪ್ರಕಾರ 95 ಮಂದಿ ಮಕ್ಕಳು ಇದ್ದಾರೆ. 2005ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಆದೇಶ ಹೊರಡಿಸಿಲಾಯಿತು. ಒಂದರಿಂದ ಏಳನೇ ತರಗತಿಗಳವರೆಗೆ ಶಾಲೆ ನಡೆಸಲಾಗುತ್ತಿದ್ದು, ತರಗತಿಗೆ ತಕ್ಕಂತೆ ಕೊಠಡಿಗಳ ಲಭ್ಯವಿಲ್ಲ. ಇರುವ ಕೆಲವು ಕೊಠಡಿಗಳು ಮಳೆ ಬಂದರೆ ಸೋರುತ್ತವೆ.

Advertisements
ಖಾಜಕೋಟನೂರ್ ಶಾಲೆಗಿಲ್ಲ ತಡೆಗೋಡೆ

ಶಾಲೆ ಪ್ರಾರಂಭವಾದಾಗಿನಿಂದ ಶಾಲೆಗೆ ಕಾಂಪೌಂಡ್ ಗೋಡೆ ಇಲ್ಲ. ಶಾಲೆಯ ಮುಂದೆ ಮುಖ್ಯ ರಸ್ತೆಯಿದ್ದು, ನಿತ್ಯವೂ ವಾಹನಗಳು ಸಂಚಾರವಿದೆ. ಇದರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಅನಾಹುತ ಸಂಭವಿಸಿದರೆ ಯಾರು ಹೊಣೆ? ಇಷ್ಟುವರ್ಷ ಕಳೆದರೂ ಜನಪ್ರತಿನಿಧಿ, ಗ್ರಾಮ ಅಭಿವೃದ್ಧಿ ಅಧಿಕಾರಿಗಳು, ಸ್ಥಳೀಯ ಶಾಸಕರು ಶಾಲೆಗೆ ತಡೆಗೋಡೆ ನಿರ್ಮಾಣ ಮಾಡಲು ಮನಸ್ಸು ಮಾಡಿಲ್ಲ.

ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್ ಸತತ ಎರಡು ಬಾರಿ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ಆದರೆ, ಗ್ರಾಮದ ಶಾಲೆಗಳ ಅಭಿವೃದ್ಧಿ ಕುರಿತು ಚಿಂತಿಸದೆ ಅನ್ಯಾಯ ಧೋರಣೆ ಮಾಡುತ್ತಿದ್ದಾರೆ. ಈಗಲಾದರೂ ಇತ್ತ ಲಕ್ಷ್ಯ ಹರಿಸಿ ಆದಷ್ಟು ಬೇಗ ಶಾಲೆಗೆ ತಡೆಗೋಡೆ ಕಟ್ಟಿಸಿಕೊಡಬೇಕು ಎಂಬುವುದು ಶಾಲೆಯ ಶಿಕ್ಷಕರು ಮತ್ತು ಪೋಷಕರ ಬೇಡಿಕೆಯಾಗಿದೆ.

ಖಾಜಕೋಟನೂರ್ ಶಾಲೆ

ಮುಖ್ಯ ಶಿಕ್ಷಕಿ ಹೇಮಲತಾ ಜಾಗಿರ್ದಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಾಲೆಯ ಕೋಣೆಗಳು ಮೊದಲು ಸೋರುತ್ತಿದವು. ಎರಡು ವರ್ಷದ ಹಿಂದೆ ಸಿಮೆಂಟ್ ಹಾಕಿ ದುರಸ್ತಿ ಮಾಡಿದ್ದಾರೆ. ಆದರೆ ನಮ್ಮ ಶಾಲೆಯಲ್ಲಿದ್ದ ಮೂರು ಕೊಠಡಿಗಳನ್ನು ಕೆಡವಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಿಕೊಡಬೇಕು. ಶಾಲೆಗೆ ತಡೆಗೋಡೆ ಇಲ್ಲದಿರುವುದರಿಂದಾಗಿ ಪುಂಡ ಪೋಕರಿಗಳು ಸಾರಾಯಿ, ಗುಟಕ ತಿಂದು ಶಾಲೆಯ ಗೋಡೆಗಳ ಮೇಲೆ, ಕಟ್ಟೆಯ ಮೇಲೆ ಉಗುಳುತ್ತಾರೆ. ಅಲ್ಲದೆ ಶಾಲೆಯ ಆವರಣದಲ್ಲಿ ಪಾಳು ಬಿದ್ದ ಅಂಗನವಾಡಿ ಕೇಂದ್ರದಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಕ್ರಿಮಿಕೀಟಗಳಾಗಿ ಶಾಲೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನಮ್ಮ ಶಾಲೆಗೆ ತಡೆಗೋಡೆ ಜತೆಗೆ ಹೊಸ ಮೂರು ತರಗತಿ ಕೊಠಡಿಗಳನ್ನು ಕಟ್ಟಿಸಿಕೊಡಬೇಕು” ಎಂದು ಶಾಸಕರಿಗೆ ಮನವಿ ಮಾಡಿದರು.

ಸ್ಥಳೀಯ ನಿವಾಸಿ ಶಂಭುಲಿಂಗಯ್ಯ ಈ ದಿನ.ಕಾಮ್ ನೊಂದಿಗೆ ಮಾತನಾಡಿ, “ಖಾಜಕೋಟನೂರ್ ಗ್ರಾಮ ಕಲಬುರಗಿಯಿಂದ 12 ಕಿಮೀ ದೂರದಲ್ಲಿದೆ. ಸಿಟಿಗೆ ಹತ್ತಿರವಿದ್ದರೂ ಕೂಡಾ ನಮ್ಮ ಗ್ರಾಮ ಬೆಳಕಿಗೆ ಬಂದಿಲ್ಲ. ಗ್ರಾಮದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಅತ್ಯಂತ ಹಿಂದುಳಿದ ಗ್ರಾಮವಾಗಿದೆ. ಎಲ್ಲ ಊರಿನ ಶಾಲೆಗಳಿಗೆ ತಡೆಗೋಡೆ ವ್ಯವಸ್ಥೆ ಇರುತ್ತದೆ. ಆದರೆ ನಮ್ಮ ಊರಿನ ಶಾಲೆಗೆ ತಡೆಗೋಡೆಯಿಲ್ಲದಿರುವುದು ಬೇಸರದ ಸಂಗತಿ. ಶಾಲೆ ಮುಂದೆ ರಸ್ತೆ ಇದೆ. ವಾಹನಗಳು ಓಡಾಡುತ್ತವೆ, ಇದರಿಂದ ಮಕ್ಕಳಿಗೆ ಅನಾಹುತ ಸಂಭವಿಸಿಬಹುದು. ಮಕ್ಕಳು ಹೊರಗಡೆ ಕೂತು ಬಿಸಿಯೂಟ ಸೇವಿಸುತ್ತಾರೆ. ಶಾಲೆ ಆವರಣದಲ್ಲಿ ಪಾಳು ಬಿದ್ದ ಅಂಗನವಾಡಿ ಕೇಂದ್ರದಲ್ಲಿ ಜನರು ಮೂತ್ರ ಮಾಡುತ್ತಾರೆ. ಇದರಿಂದ ಮಕ್ಕಳಿಗೆ ರೋಗ ರುಜಿನಗಳು ಹರಡಬಹುದು” ಎಂದು ಕಳವಳ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಶಾಲೆಯಲ್ಲಿ ನಮ್ಮ ಮೊಮ್ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಮುಂದೆ ರಸ್ತೆಯಿದೆ. ಇಲ್ಲಿ ವಾಹನಗಳು ತಿರುಗುತ್ತಿರುತ್ತವೆ. ಜೋರಾಗಿ ಬರುವುದರಿಂದ ಮಕ್ಕಳು ರಸ್ತೆ ದಾಟುವಾಗ ತೊಂದರೆಯಾಗಬಹುದು. ಹಾಗಾಗಿ ರಸ್ತೆಯಲ್ಲಿ ಹಂಪ್‌ಗಳನ್ನು ಹಾಕಬೇಕು. ಶಾಲೆಯ ಮಕ್ಕಳಿಗೆ ಅಪಘಾತಗಳು ಆಗುತ್ತಿವೆ. ಶಾಲೆಗೆ ತಡೆಗೋಡೆ, ಗೇಟ್ ಹಾಕಿಸಿಕೊಡಬೇಕು. ಕುಡುಕರು ಕುಡಿದು ತಿಂದು ಶಾಲೆಯ ವಾತಾವರಣ ಹಾಳುಮಾಡುತ್ತಿದ್ದಾರೆ. ಬುದ್ದಿ ಹೇಳಲು ಹೊದವರ ಜತೆಗೇ ಜಗಳ ಮಾಡುತ್ತಾರೆ” ಎಂದು ದೂರಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಸ್ಮಶಾನದಲ್ಲಿ ಹೆಣ ಸುಡುವ ಕಾಯಕದಲ್ಲೂ ಕೈಲಾಸ ಕಾಣುತ್ತಿರುವ ಬಬನ್ ಲಾಖೆ

ಈ ವಿಚಾರವಾಗಿ ಈ ದಿನ.ಕಾಮ್‌ ಕ್ಷೇತ್ರಶಿಕ್ಷಣಾಧಿಕಾರಿ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಮಾತನಾಡಿ, “ಈ ವಿಚಾರ‌ವನ್ನು ಶಾಸಕರ ಗಮನಕ್ಕೆ ತರಲಾಗಿದೆ. ಅವರು ʼಮನರೇಗಾ ಯೋಜನೆ ‌ಅಡಿಯಲ್ಲಿ ತಡೆಗೋಡೆ ನಿರ್ಮಾಣ ‌ಮಾಡುವ ಅವಕಾಶವಿದೆ. ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷರಿಗೆ ತಿಳಿಸಿದ್ದೇನೆಂದು ಹೇಳಿದ್ದಾರೆ. ಆದಷ್ಟು ಬೇಗ ಶಾಲೆಗೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ” ಎಂದು ತಿಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಾಲೆಗೆ ತಡೆಗೋಡೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು, ಶಾಸಕರು ತಿಳಿಸಿದ್ದಾರೆ. ಮನರೇಗಾ ಆ್ಯಕ್ಷನ್ ಪ್ಲಾನ್‌ನಲ್ಲಿ ಮಾಡುತ್ತೇವೆ” ಎಂದು ತಿಳಿಸಿದರು.

ಗೀತಾ ಹೊಸಮನಿ
ಗೀತಾ ಹೊಸಮನಿ
+ posts

ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X