ಕಲಬುರಗಿ ನಗರ ವ್ಯಾಪ್ತಿಯಲ್ಲಿ ಕಳ್ಳತನ ಹಾಗೂ ಕಳೆದು ಹೋಗಿದ್ದ 672 ಮೊಬೈಲ್ ಪೋನ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸುವಲ್ಲಿ ಕಲಬುರಗಿ ನಗರದ ಸೆನ್ ಪೋಲಿಸರು ಯಶಸ್ವಿಯಾಗಿದ್ದಾರೆ.
ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ ಸಿಇಐಆರ್ ಪೋರ್ಟಲ್ ನೆರವಿನಿಂದ ಕಲಬುರಗಿ ನಗರದ ಸೆನ್ ಪೊಲೀಸರು ಮೂವತ್ತೆಂಟು ಲಕ್ಷ ಮೌಲ್ಯದ 672 ಮೊಬೈಲ್ಗಳನ್ನು ಪತ್ತೆ ಹಚ್ಚಿ, ವಾರಸುದಾರರಿಗೆ ಒಪ್ಪಿಸಿದ್ದಾರೆ.
ಕಲಬುರಗಿ ನಗರದ ಆಯುಕ್ತಾಲಯ ವ್ಯಾಪ್ತಿಯಲ್ಲಿ ಕಳವು, ಸುಲಿಗೆ ಹಾಗೂ ಕಳೆದುಕೊಂಡಿರುವ ಮೊಬೈಲ್ಗಳನ್ನು ಹುಡುಕಿಕೊಡುವಂತೆ ವಾರಸುದಾರರು ಸಿಇಐಆರ್ ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಿದ್ದರು.
ಸಿಇಐಆರ್ ಪೋರ್ಟಲ್ ಕರ್ತವ್ಯ ನಿರ್ವಹಿಸುವ ತಾಂತ್ರಿಕ ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ಮೂವತ್ತೆಂಟು ಲಕ್ಷ ಮೌಲ್ಯದ 672 ಮೊಬೈಲ್ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಸೆನ್ ಠಾಣೆ ಸಿಬಂದಿಗಳ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಢಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಉಪ ಚುನಾವಣೆ | ಸಂಡೂರು, ಚನ್ನಪಟ್ಟಣಕ್ಕೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್: ಕಗ್ಗಂಟಾದ ಶಿಗ್ಗಾಂವಿ!
ಈ ವೇಳೆ ಕಮಿಷನರ್ ಶರಣಪ್ಪ ಢಗೆ ಮಾತನಾಡಿ, “ಸಾರ್ವಜನಿಕರು ತಮ್ಮ ಮೊಬೈಲ್ ಪೋನ್ ಲ್ಯಾಪ್ಟಾಪ್ ಅಥವಾ ಯಾವುದಾದರೂ ದಾಖಲಾತಿಗಳು ಕಳೆದುಹೋದಲ್ಲಿ ಅಥವಾ ಯಾರಾದರೂ ಕಳ್ಳತನ ಮಾಡಿದಲ್ಲಿ ಸ್ಥಳಿಯ ಪೋಲಿಸ್ ಠಾಣೆಗೆ ದೂರು ದಾಖಲಿಸಬಹುದು ಅಥವಾ ಕೆ ಎಸ್ ಪಿ ಇ-ಲೊಸ್ಟ್ ಮತ್ತು ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರೆ ತಮ್ಮ ಮೊಬೈಲ್’ಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಲಾಗುವುದು” ಎಂದು ತಿಳಿಸಿದರು.
ವಾಲೆಂಟಿಯರ್ : ಚನ್ನವೀರ, ಕಲಬುರಗಿ


