ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಭಾರತ ಮುಕ್ತಿ ಮೋರ್ಚಾ ಸಂಘಟನೆಯ ಕಾರ್ಯಕರ್ತರು ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ಕುರಿತು ಚಿಂಚೋಳಿ ತಾಲೂಕು ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಹಕ್ಕೋತ್ತಾಯ ಪತ್ರ ಸಲ್ಲಿಸಿದರು.
ಸಂಘಟನೆ ಮುಖಂಡ ಮಾರುತಿ ಗಂಜಗಿರಿ ಮಾತನಾಡಿ, ʼಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದ ಪರಿಶಿಷ್ಟ ಜಾತಿಯ ಜನರು ಸ್ಮಶಾನ ಭೂಮಿಗೆ ತೆರಳಲು ರಸ್ತೆ ಇಲ್ಲದ ಪರದಾಡುತ್ತಿದ್ದಾರೆ. ಕೂಡಲೇ ಸಿಸಿ ರಸ್ತೆ, ನೀರಿನ ಸಮಸ್ಯೆ ಬಗೆಹರಿಸಬೇಕು. ಐನಾಪುರ, ಖಾನಾಪುರ, ಗಡಿ ನಿಂಗದಳ್ಳಿ, ಚನ್ನೂರು ಗ್ರಾಮಗಳಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸಬೇಕುʼ ಎಂದು ಅಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಬಾರ್ಡ್ ಸಾಲ ಖೋತಾ ಮಾಡಿದ ಮೋದಿ ಸರ್ಕಾರ ರೈತಪರವೇ?
ಸಂಘಟನೆಯ ಮೋಹನ್ ಐನಾಪುರ, ಸಂದೀಪ್ ದೊಡಮನಿ, ಗೋಪಲ್ ಎಂ.ಪಿ, ಮೌನೇಶ್ ಪಾರಂಪಳ್ಳಿ, ಶಿವಾನಂದ ಪಾಟೀಲ, ಮಾರುತಿ ಜಾದವ್, ಉಮೇಶ್, ಸಚೀನ, ಅನೀಲ ಕಟ್ಟಿ , ಪಪ್ಪು, ದೇವರಾಜ್ ಖಾನಾಪುರ, ಧನರಾಜ್ ಸ್ವಾಮಿ, ವಿಶಾಲ್ ಹೆಚ್.ಡಿ, ವಿಜಯ ಸೇರಿದಂತೆ ಅನೇಕರಿದ್ದರು.