ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭವನದಲ್ಲಿ ಮಾತೇ ರಾಮಬಾಯಿ ಅಂಬೇಡ್ಕರ್ ಅವರ 127ನೇ ಜನ್ಮದಿನವನ್ನು ಆಚರಣೆ ಮಾಡಲಾಯಿತು.
ರಮಾಬಾಯಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭಾರತೀಯ ಬೌದ್ಧ ಮಹಾಸಭಾ ತಾಲೂಕು ಕಾರ್ಯದರ್ಶಿ ಮಿಲಿಂದ್ ಸಾಗರ್ ಮಾತನಾಡಿ, “ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಬೆಂಬಲ ಇದ್ದೇ ಇರುತ್ತದೆ. ಈ ಸಾಲು ಹಳೆಯದಾದರೂ ತಾತ್ಪರ್ಯ ಮಾತ್ರ ನಿತ್ಯ. ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಬದುಕಿನಲ್ಲಿ ಪತ್ನಿ ರಮಾಬಾಯಿ ಅಂಬೇಡ್ಕರ್ ಅವರು ಬೆನ್ನೆಲುಬಾಗಿ ನಿಂತಿದ್ದರು” ಎಂದು ಹೇಳಿದರು.
“ರಮಾಬಾಯಿಯವರು ಹುಟ್ಟಿದ್ದು 1898 ಫೆಬ್ರವರಿ 7ರಂದು. ತಂದೆ ಭಿಕು ವಳಗಂಕರ್ ಮತ್ತು ತಾಯಿ ರುಕ್ಮಿಣಿ. ತಂದೆಯ ವೃತ್ತಿ ಮುಂಬಯಿಯ ಬಂದರಿನಲ್ಲಿ ಹಡಗುಗಳಿಗೆ ಮೀನು ತುಂಬುವುದು. ಆ ಕಾರಣಕ್ಕೆ 1906ರಲ್ಲಿ ಭೀಮರಾವ್ ರ ಜೊತೆ ರಮಾಬಾಯಿಯವರ ವಿವಾಹ ನಡೆದಾಗ ಅದು ನಡೆದದ್ದು ಮುಂಬಯಿಯ ಬೈಕುಲ್ಲ ಎಂಬ ಮೀನು ಮಾರುಕಟ್ಟೆಯಲ್ಲಿ. ಮಾರುಕಟ್ಟೆಯ ವ್ಯವಹಾರಗಳು ಮುಗಿದಾಗ ಸಂಜೆ ಭೀಮರಾವ್ ಮತ್ತು ರಮಾಬಾಯಿಯವರ ವಿವಾಹ ಆಗಿತ್ತು. ತಮ್ಮ ಪತ್ನಿಯನ್ನು ಅಂಬೇಡ್ಕರರು ಪ್ರೀತಿಯಿಂದ ರಾಮು ಎಂದು ಕರೆಯುತ್ತಿದ್ದರು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಜನವಿರೋಧಿ ಕೇಂದ್ರ ಬಜೆಟ್ ವಿರುದ್ಧ ರೈತ-ಕಾರ್ಮಿಕರ ಯುವಜನ ಸೇವಾ ಸಂಘ ಪ್ರತಿಭಟನೆ
ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲೂಕು ಅಧ್ಯಕ್ಷ ಮಲ್ಲಣ್ಣ ಕುಡಚಿ, ಮಲ್ಲಮ್ಮ ಕೊಂಬಿನ, ಯಶ್ವಂತ್ ಬಡಿಗೇರ್, ರವಿ ಕುಳಗೇರಿ, ಶ್ರೀಮಂತ ಹರನೂರ, ರವಿ ಕೊಳಕೋರ್, ವಿಕ್ರಂ ಬಡಿಗೇರ್, ಪರಶುರಾಮ್ ನಡಗಟ್ಟಿ, ಸಿದ್ದು ಜಳಕಿ, ಶರಣು ಕಟ್ಟಿ, ಮಾನಪ್ಪ ಹೊಸಮನಿ, ಇತರರು ಭಾಗವಹಿಸಿದ್ದರು.