ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟದಲ್ಲಿ ಒಳಮಿಸಲಾತಿ ಜಾರಿಯಾಗುವವರೆಗೂ ನೇಮಕಾತಿ ತಡೆ ಹಿಡಿದಿರುವುದು ಸ್ವಾಗತಾರ್ಹ. ಆದರೆ ಉಪಚುನಾವಣೆ ಸಲುವಾಗಿ ಒಳಮೀಸಲಾತಿ ಜಾರಿಗೆ ಮೂರು ತಿಂಗಳ ಕಾಲಾವಕಾಶ ಕೊಟ್ಟಿರುವುದು ಬೇಸರವನ್ನುಂಟು ಮಾಡಿದೆ ಎಂದು ಮಾದಿಗ ಸಮಾಜದ ಯುವ ಮುಖಂಡ ರವಿ ಬೆಳಮಗಿ ವಿಷಾದ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಪತ್ರಕೆ ಹೇಳಿಕೆ ನೀಡಿರುವ ಅವರು, “ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗವು ವೈಜ್ಞಾನಿಕ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದೆ. ಮತ್ತೆ ಮೂರು ಬಾರಿ ಸುಪ್ರೀಂ ಕೋರ್ಟ್ ಒಳಮೀಸಲಾತಿಯು ಆಯಾ ರಾಜ್ಯ ಸರ್ಕಾರಗಳು ನೀಡಬಹುದಾಗಿದೆಯೆಂದು ಐತಿಹಾಸಿಕ ತೀರ್ಪು ನೀಡಿದೆ. ಇಷ್ಟಾದರೂ ರಾಜ್ಯ ಸರ್ಕಾರ ಮತ್ತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವ ಆಯೋಗ ರಚನೆ ಮಾಡಿ ವರದಿ ತರಿಸಿ, ಮೂರು ತಿಂಗಳಲ್ಲಿ ಜಾರಿಗೆ ಮಾಡುತ್ತೇವೆ. ಸರ್ಕಾರ ಈಗಾಗಲೇ ಮಾತಿನಂತೆ ಜಾರಿ ಮಾಡಬೇಕು. ಸರ್ಕಾರದ ಉದ್ದೇಶ ಉಪಚುನಾವಣೆ ಆಗೋವರೆಗೂ ಮಾದಿಗ ಸಮುದಾಯದವರು ಕಾಂಗ್ರೆಸ್ ಪರ ಮತದಾನ ಮಾಡಬೇಕೆಂದು ಒಂದು ಕಲ್ಪನೆಯಲ್ಲಿ ಇದ್ದಿದ್ದರೆ ಅದಕ್ಕಾಗಿ ಮಾದಿಗ ಸಮುದಾಯದ ಜೊತೆ ಸರ್ಕಾರ ಚದುರಂಗ ಆಟವಾಡುತ್ತಿದೆ. ಅದಕ್ಕಾಗಿ ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಕಾಸರಗೋಡು ಕನ್ನಡ ಮಕ್ಕಳ ಕೊರಗು ಮುಗಿಯದ ಗೋಳು: ಶಕುಂತಲಾ ಶೆಟ್ಟಿ
“ಮಾದಿಗ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕೆಂಬ ಒಂದು ಗುರಿ ಇಟ್ಟುಕೊಂಡು ಮೂರು ತಿಂಗಳ ಕಾಲ ಕಾಲಾವಕಾಶವನ್ನು ತೆಗೆದುಕೊಂಡಂತೆ ಕಾಣುತ್ತಿದೆ. ಸಿದ್ದರಾಮಯ್ಯನವರೇ ನೀವು ಮನಸ್ಸು ಮಾಡಿದ್ದರೆ ಇದೇ ಸಚಿವ ಸಂಪುಟದಲ್ಲಿ ಜಾರಿಗೆ ಮಾಡಲು ಅವಕಾಶವಿತ್ತು. ತಾವು ಯಾಕೆ ಮಾಡಿಲ್ಲ? ಎಂಬ ಪ್ರಶ್ನೆಗೆ ಮಾದಿಗ ಸಮುದಾಯಕ್ಕೆ ತಾವು ಉತ್ತರ ನೀಡಬೇಕು. ಉಪಚುನಾವಣೆ ಸಲುವಾಗಿ ಮೂರು ತಿಂಗಳ ಕಾಲಾವಕಾಶ ಕೊಟ್ಟಿದ್ದೀರಿ! ಅಥವಾ ತಾವು ಒಳಮೀಸಲಾತಿ ಜಾರಿ ಮಾಡಬೇಕೆಂದು ಹೇಳುತ್ತ ಇದೇ ರೀತಿಯಾಗಿ ಮುಂದುವರೆಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿಕೊಳ್ಳುತ್ತ ಹೋಗುತ್ತಿರುವುದು ಖಂಡನೀಯ” ಎಂದರು.