ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಲಬುರಗಿಯ ಶರಣ ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರ 203ನೇ ರಥೋತ್ಸವವು ಅದ್ದೂರಿಯಾಗಿ ಜರುಗಿತು.
ಶರಣ ಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ. ಶರಣಬಸಪ್ಪ ಅಪ್ಪಾಜಿ ಹಾಗೂ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥ ಎಳೆಯುವಾಗ ಭಕ್ತರು ಬಾಳೆಹಣ್ಣು, ಖರ್ಜೂರಗಳನ್ನು ರಥದ ಮೇಲೆ ಎಸೆಯುತ್ತಿದ್ದದ್ದು ವಿಶಿಷ್ಠವಾಗಿತ್ತು. ಐತಿಹಾಸಿಕ ಜಾತ್ರಾ ಮಹೋತ್ಸದಲ್ಲಿ ಪ್ರವಚನಗಳು, ಭಜನಾ ತಂಡಗಳು ಶರಣರ ಹಾಡುಗಳ ಹಾಡುವುದರ ಮೂಲಕ ಜನರಿಗೆ ಶರಣರ ಸಂದೇಶವನ್ನು ಸಾರಿದರು. ರಥೋತ್ಸವಕ್ಕೆ ಸಾಕ್ಷಿಯಾಗಲು ಬಂದ ಸಾವಿರಾರು ಭಕ್ತರಿಗೆ ಉಚಿತ ಅನ್ನ ದಾಸೋಹ, ಸಿಹಿ ತಿಂಡಿ, ತಂಪು ಪಾನೀಯ ಕೊಡುವುದರ ಮೂಲಕ ಉಪಚರಿಸಲಾಯಿತು.

ಇದನ್ನೂ ಓದಿ: ಕಲಬುರಗಿ | ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಕೊಲೆ
ರಥೋತ್ಸವದ ಅಂಗವಾಗಿ ಗುರು ಮರುಳಾರಾಧ್ಯರು ಹಾಗೂ ಶಿಷ್ಯ ಶರಣ ಬಸವೇಶ್ವರರ ಗದ್ದುಗೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಕಲಬುರಗಿ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಕರ್ನಾಟಕಾದ್ಯಂತ ಭಕ್ತರು ಬಂದು ಖುಷಿಯಿಂದಲೇ ಜಾತ್ರೆಯಲ್ಲಿ ಭಾಗಿಯಾಗಿ ರಥೋತ್ಸವಕ್ಕೆ ಮೆರುಗು ತಂದಿದ್ದರು.