ಕಲ್ಯಾಣ ಕರ್ನಾಟಕ ನಾಡಿನ ತೊಗರಿಕಣಜದ ಅಭಿವೃದ್ಧಿ ಕುಂಟಿತಾ ಕಂಡಿದೆ ಇದೊಂದು ತೊಗರಿ ಬೆಳೆಗಾರರಿಗೆ ದ್ರೋಹ ಬಗೆದಂತಾಗಿ, ಜನ ವಿರೋಧಿ ಧೋರಣೆ ಎದ್ದು ಕಾಣುತ್ತಿದೆ ಎಂದು ಜನ ಸಾನ್ಯರ ಮಾತಾಡುವಂತಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಹೇಳಿದರು.
ಕಲಬುರಗಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆ ತೊಗರಿ ಕಣಜ ಎಂದು ಖ್ಯಾತಿ ಪಡೆದಿದೆ. ಕಲಬುರಗಿ ಜಿಲ್ಲೆಯ ತೊಗರಿ ಬೋರ್ಡ್ ರಚನೆ ಆದ ನಂತರ, ಎಸ್.ಎಂ. ಕೃಷ್ಣಾ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ 5 ಕೋಟಿ ರೂ. ಮಾತ್ರ ಕೊಟ್ಟಿದ್ದು ಬಿಟ್ಟರೆ, ಇಲ್ಲಿಯವರೆಗೆ ಒಂದು ನಯಾಪೈಸೆ ಹಣ ಕೊಟ್ಟಿಲ್ಲ ಎಂದು ಆರೋಪಿಸಿದರು.
ಬೆರೇ ಬೆರೆ ಬೋರ್ಡ್ ಮಾತ್ರ ಕಣ್ಣಗೆ ಕಾಣಿಸುತ್ತದೆ. ಆದರೆ, ತೊಗರಿ ಬೋರ್ಡ್ ಮಾತ್ರ ಕಾಣಿಸುವುದಿಲ್ಲ. ಆದರೆ ತೊಗರಿ ಬೋರ್ಡ್ ಹೆಸರು ತೆಗೆದು ಹಾಕಿ ಇದಕ್ಕೆ ಇನ್ನೊಂದು ಹೆಸರು ಕೊಟ್ಟು ದ್ವಿದಳ ಧಾನ್ಯಗಳು ಪಲ್ಸೆಸ್ಸ್ ಬೋರ್ಡ್ ಅಂತ ಹೆಸರಿಟ್ಟು. ಈ ಬೊರ್ಡ್ ಅನಾಥವಾಗಿದೆ. ಹೆಸರಿಗೆ ಮಾತ್ರ ಬೊರ್ಡಾಗಿದೆ ಈ ಬೊರ್ಡ್‌ನಿಂದ, ರೈತರಿಗೆ ಏನು ಲಾಭವಿಲ್ಲದಂತಾಗಿದೆ ಮತ್ತು ಭಿಮಾ ಪಲ್ಸ್ ಅಂತ ಹೇಳಿ ತೊಗರಿ ಬ್ಯಾಳಿ ಲಾಂಚ್ ಮಾಡಿದ್ದಾರೆ ಎಂದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗ ತೊಗರಿ ಬೇಳೆ ಪಾಕೆಟ್ ಲಾಂಚ್ ಮಾಡಿದ್ದು, ತೋರಿಕೆಗೆ ಮಾತ್ರ ಆಗಿದೆ. ಎಲ್ಲಿಯೂ ಸಹ ಭಿಮಾ ಪಲ್ಸ್ ಬೇಳೆ ತಯಾರಿಸುವ ಮಷಿನ್ನೇ ಇಲ್ಲ. ಕಟ್ಟಡ ಸಹ ಇಲ್ಲ. ಸುಳ್ಳು ಹೇಳಿ ಈ ಭಾಗದ ಜನರಿಗೆ ದ್ರೋಹ ಬಗೆದಿದ್ದಾರೆ ಎಂದರು.
ಈ ಭಾಗದ ತೊಗರಿ ಏಷ್ಯಾ ಖಂಡದಲ್ಲಿಯೇ ಹೆಸರು ಪಡೆದಿದೆ. ತೊಗರಿ ಬೆಳೆಗಾರರ ಹಿತ ಕಾಪಾಡುವುದರಲ್ಲಿ ನಮ್ಮನ್ನು ಆಳುವ ಸರ್ಕಾರಗಳು ನಿಷ್ಕಾಳಜಿ ತೋರಿವೆ. ತೊಗರಿ ಬೆಳೆಗಾರರನ್ನು ಕಡೆಗಣಿಸಿದ್ದು ತುಂಬಾ ಖೆದಕರ ಸಂಗತಿಯಾಗಿದೆ. ತೊಗರಿ ಬೋರ್ಡ್ ಬಲಪಡಿಸಿ. ತೊಗರಿ ಪಾರ್ಕ್ ಏನಾಯಿತು? ಜವಳಿ ಪಾರ್ಕ್ ಏನಾಯಿತು? ಇದರ ಬಗ್ಗೆ ಯಾಕೆ ಮೌನವಹಿಸಿದ್ದಿರಿ ಬಾಯಿ ಬಿಡಿ, ಮಾತಾಡಿ. ತೊಗರಿ ಬೆಳೆಗಾರರ ರಕ್ಷಿಸಬೇಕೆಂದು ಒತ್ತಾಯಿಸಿದರು.
ಕಲಬುರಗಿ ಜಿಲ್ಲೆ 25,66,326 ಜನ ಸಂಖ್ಯೆ ಹೊಂದಿದೆ. ಒಟ್ಟು 5,66,400 ಜನ ರೈತರಿದ್ದಾರೆ. ಇದರಲ್ಲಿ ಸಾಲದ ಭಾದೆ ತಾಳಲಾರದೆ 32 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂತ ಪ್ರಕರಣಗಳು ಹೆಚ್ಚಾಗಿವೆ. ರೈತರ ಗೋಳು ಮುಗಿಲು ಮುಟ್ಟಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ನೀರಾವರಿ ಪ್ರದೇಶ ಕುಂಟಿತವಾಗಿದೆ. ರೈತರು ನೀರಾವರಿ ಪ್ರದೇಶ ಹೆಚ್ಚಿಸುವ ದೃಷ್ಟಿಯಲ್ಲಿ ಜಲಾಶಯಗಳನ್ನು ಹುಟ್ಟು ಹಾಕಲಾಗಿದೆ. ಬೆಣ್ಣೆ ತೋರಾ ಜಲಾಶಯ ಹುಟ್ಟಿ ಸುಮಾರು ವರ್ಷಗಳು ಕಳೆದರೂ, ರೈತರ ಹೊಲಗಳಲ್ಲಿ ನೀರು ಹರಿದಿಲ್ಲ. ಕಾಲುವೆ, ಮೇನ್ ಕಾಲುವೆ, ಮರಿ ಕಾಲುವೆ ಎಡದಂಡೆ, ಬಲ ದಂಡೆ ಕಾಲುವೆಗಳು ಹೂಳು ತುಂಬಿ ಹೋಗಿವೆ. ಸ್ವಚ್ಚತೆ ಮಾಡುವ ಹೆಸರಿನಲ್ಲಿ ಕೋಟಿ ಕೋಟಿ ಹಣ ತಿರುಪತಿ ನಾಮ ಹಾಕಿಲಿದ್ದಾರೆ ಎಂದು ಆರೋಪಿಸಿದರು.
ಇದೇ ರೀತಿ ಗಂಡೊರಿ ನಾಲ ಆಣೆಕಟ್ಟು ಹುಟ್ಟಿದ ದಿನದಿಂದ ಇಲ್ಲಿಯವರೆಗೆ ಕಾಲುವೆಗಳು ಒಡೆದು ಹಾಳಾಗಿ ಹೋಗಿವೆ. ಅಲ್ಲಲ್ಲಿ ಗೇಟ್‌ಗಳು ಕೆಟ್ಟು ನಿಂತು ತುಕ್ಕು ಹಿಡಿದಿವೆ. ಯಾರದ್ದು ದಾದ್ ಇಲ್ಲ, ಪೂಕಾರ ಇಲ್ಲ. ಪ್ರತಿಯೊಂದು ದುರಸ್ತಿ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದಾರೆ ಎಂದು ಹೇಳಿದರು.
ಲೋಹರ ಮುಲ್ಲಾಮಾರಿ ಏತನೀರಾವರಿಯಲ್ಲಿ ಸಹ ಕೋಟಿ ಕೋಟಿ ರೂ. ನುಂಗಿ ನೀರು ಕುಡಿದಿದ್ದಾರೆ. ಭೀಮಾ ನದಿ ಮೆನ್ ಕಾಲುವೆಗಳು ಹಾಳುಬಿದ್ದು ಹೋಗಿವೆ ಇದರ ಬಗ್ಗೆ ಯಾಕೆ ಜಾಣ ಕುರಡರಂತೆ ವರ್ತಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಬರಗಾಲದ ಗಂಭೀರ ಉದ್ವಿಗ್ನ ಪರಿಸ್ಥಿತಿ ಎದರಿಸುತ್ತಿರುವ ರೈತರಿಗೆ ಬರ ಪರಿಹಾರ ದಿಂದ ಯಾಕೆ ವಂಚನೆ? ಲಾಗುವಾಡಿ ದುಬಾರಿ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ, ಅನ್ನದಾತರ ಕಂಗಾಲಾಗಿದ್ದಾರೆ ಎಂದರು.
ಪ್ರತೀ ವರ್ಷ ರೈತರು ಬೆಳೆ ವಿಮೆ ಕಟ್ಟುತ್ತಾರೆ. ಆದರೆ, ಬೆಳೆ ವಿಮೆ ಹಣ ಕಟ್ಟಿದ್ದ ರೈತರು ತುಳಿತ್ತಕ್ಕೊಳಗಾಗುತ್ತಿದ್ದಾರೆ. ಫಸಲ್ ಭಿಮಾ ಯೋಜನೆ ರೈತರಿಂದ ಹಣ ಸುಲಿಗೆ ಮಾಡುವ ಯೋಜನೆಯಾಗಿದೆ. ಪ್ರತೀ ವರ್ಷ ಕ್ರಾಪ್ ಕಟಿಂಗ್ ಸಮಯದಲ್ಲಿ ಬೆಳೆ ಹಾನಿಗೊಳಗಾಗುತ್ತಾರೆ. ಎಷ್ಟು ಬೆಳೆಹಾನಿ ಯಾಗುತ್ತದೆ, ಅದರ ಕಿಮ್ಮತ್ತು ಕಟ್ಟಿ ಆ ಕಿಮ್ಮತ್ತು ಪ್ರಕಾರ ಬೆಳೆ ವಿಮೆ ಹಣ ಮಂಜೂರು ಮಾಡಬೇಕು ಎಂದು ರೈತರ ಆಗ್ರಹ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ, ಎಐಕೆಎಸ್ ಅಧ್ಯಕ್ಷ ಮೌಲಾ ಮುಲ್ಲಾ, ಅರ್ಜುನ್ ಗೊಬ್ಬರ, ಜಾವೆದ್ ಹುಸೇನ್, ಭೀಮಾಶಂಕರ ಮಾಡಿಯಾಳ, ಶರಣಬಸಪ್ಪಾ ಗಣಜಲಖೇಡ ಉಪಸ್ಥಿತರಿದ್ದರು.
