ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್ ರಂಜೋಳಕರ್ ಮತ್ತು ಸ್ವಿಸ್ ಮ್ಯಾನ್ ಪವಾರ ಏಜೆನ್ಸಿ ಬಗ್ಗೆ ತನಿಖೆ ನಡೆಸಿ ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕಲಬುರಗಿ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಿದರು.
ಕಲಬುರಗಿ ನಗರದ ಸರ್ದಾರ್ ವಲಾಬ್ ಬಾಯಿ ಪಟೇಲ್ ವೃತ್ತದಿಂದ ಸಮಾಜ ಕಲ್ಯಾಣ ಇಲಾಖೆವರೆಗೆ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, “ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿರುವ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.
“ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಗಿರೀಶ ರಂಜೋಳಕರ್ ಮತ್ತು ಸ್ವಿಸ್ಟ್ ಮ್ಯಾನ್ ಪವರ್ ಏಜೆನ್ಸಿಯವರು ನಡೆಸಿದ ಅವ್ಯವಹಾರವನ್ನು ತನಿಖೆ ನಡೆಸಿ ಸೇವೆಯಿಂದ ಅಮಾನತುಗೊಳಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ನೌಕರರು ಬ್ಯಾಂಕ್ ಸ್ಟೇಟ್‌ಮೆಂಟ್ ಸಮೇತ ಕೊಟ್ಟ ಅರ್ಜಿಗಳನ್ನು ತನಿಖೆ ನಡೆಸಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು” ಎಂದು ಒತ್ತಾಯಿಸಿದರು.
“ಹಿಂದುಳಿದ ವರ್ಗಗಳ ವಸತಿನಿಲಯ ನೌಕರರ 5-6 ತಿಂಗಳ ಬಾಕಿ ವೇತನ ಪಾವತಿಸಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೌಕರರ 2-3 ತಿಂಗಳ ಬಾಕಿ ವೇತನ ಪಾವತಿಸಬೇಕು. ಕ್ರೈಸ್ ವಸತಿ ನಿಲಯಗಳ ನೌಕರರಿಗೆ ವೇತನ ಪಾವತಿಸಲು ಸ್ವಿಸ್ ಮ್ಯಾನ್ ಪವರ್ ಏಜೆನ್ಸಿಗೆ ನೀಡಿದ ಆದೇಶ ಪಡೆದು ಕೂಡಲೇ 3 ತಿಂಗಳ ವೇತನವನ್ನು ಇಲಾಖೆಯಿಂದಲೇ ಪಾವತಿಸಬೇಕು. ಈವರೆಗೆ ಸೇವೆ ಸಲ್ಲಿಸಿದ ಮ್ಯಾನ್ ಪವರ್ ಏಜೆನ್ಸಿಗಳಿಂದ ನೌಕರರ ನೇಮಕಾತಿ ಆದೇಶ ಪತ್ರಗಳನ್ನು ಕೊಡಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಮುಡಾ ಹಗರಣದ ಉನ್ನತ ಮಟ್ಟದ ತನಿಖೆಗೆ ಬಿಜೆಪಿ ಆಗ್ರಹ
ಜಿಲ್ಲಾ ಕಾರ್ಯದರ್ಶಿ ಮಲ್ಲಮ್ಮ ಕೋಡ್ಲಿ, ಜಂಟಿ ಕಾರ್ಯದರ್ಶಿಗಳಾದ ಕಾಶೀನಾಥ್ ಬಂಡಿ,
ಸಿದ್ದಾರಾಮ ಹರವಾಳ, ಉಪಾಧ್ಯಕ್ಷ ಮೇಘರಾಜ ಕಠಾರೆ, ಚಿಂಚೋಳಿ ಅಧ್ಯಕ್ಷೆ ಜಗದೇವಿ ಚಂದನಕೇರಾ ಸೇರಿದಂತೆ ಬಹುತೇಕರು ಇದ್ದರು.