ಕಲಬುರಗಿ | ಎಸ್‌ಯುಸಿಐ 78ನೇ ಸಂಸ್ಥಾಪನಾ ದಿನಾಚರಣೆ

Date:

Advertisements

ನಮ್ಮ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣವಾಗಿರುವ ಪ್ರಸಕ್ತ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆದು ಸಮಾಜವಾದಿ ಕ್ರಾಂತಿಯ ಮೂಲಕ ಶೋಷಣಾ ರಹಿತ ಸಮಾಜ ಸ್ಥಾಪಿಸಿದಾಗ ಮಾತ್ರ ಶಾಶ್ವತವಾದ ಪರಿಹಾರ ಸಾಧ್ಯ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಎಂ.ಶಶಿಧರ್ ಅಭಿಪ್ರಾಯಪಟ್ಟರು.

ಕಲಬುರಗಿ ನಗರದ ಈಶ್ವರ್ ಚಂದ್ರ ವಿದ್ಯಾಸಾಗರ್ ಸಭಾ ಭವನದಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಎಸ್‌ಯುಸಿಐ ಜಿಲ್ಲಾ ಸಮಿತಿ ವತಿಯಿಂದ ಜರುಗಿದ ಪಕ್ಷದ 78ನೇ ಸಂಸ್ಥಾಪನ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ʼದೇಶ ಸ್ವತಂತ್ರಗೊಂಡು 78 ವರ್ಷಗಳು ಗತಿಸಿದರೂ ಸಹ ಬಡತನ, ನಿರುದ್ಯೋಗ, ರೈತರ ಆತ್ಮಹತ್ಯೆ, ಬೆಲೆಏರಿಕೆ, ಅನಕ್ಷರತೆ, ಕೋಮುವಾದದಂತಹ ಸಮಸ್ಯೆಗಳು ದಿನನಿತ್ಯ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆʼ ಎಂದು ಆರೋಪಿಸಿದರು.

Advertisements

ʼಇತ್ತೀಚಿಗೆ ಕಾಶ್ಮೀರದ ಹಹಲ್ಗಾಮ್‌ನಲ್ಲಿ ನಡೆದ 28 ಅಮಾಯಕ ಪ್ರವಾಸಿಗರ ಕಗ್ಗೋಲೆಯನ್ನು ಸಹ ಅವರು ಉಗ್ರವಾಗಿ ಖಂಡಿಸಿದ ಅವರು, ʼಜನರ ಜೀವ ರಕ್ಷಣೆಯನ್ನು ಮಾಡುವಲ್ಲಿ ಸರ್ಕಾರಗಳು ನಿಷ್ಕಾಳಜಿ ವಹಿಸಿದೆʼ ಎಂದು ಆರೋಪಿಸಿದರು. ಅಲ್ಲದೆ, ಜನರ ಐಕ್ಯತೆಯನ್ನು ಮುರಿಯಲು ಜಾತಿವಾದ, ಕೋಮುವಾದ, ಪ್ರಾಂತಿಯ ಭಾವನೆಗಳನ್ನು ಸರ್ಕಾರಗಳು ಸೃಷ್ಟಿಸುತ್ತಿದ್ದು, ಜನರನ್ನು ಮೂಲಭೂತ ಸಮಸ್ಯೆಗಳಿಂದ ವಿಮುಖ ಮಾಡುತ್ತಿದೆʼ ಎಂದರು.

ʼವಿಶ್ವ ಬಂಡವಾಳವಾದವು ಅತ್ಯಂತ ಬಿಕ್ಕಟ್ಟಿನಲ್ಲಿರುವ ಈ ಸಂದರ್ಭದಲ್ಲಿ ಯುದ್ಧ ಅನಿವಾರ್ಯ ಎನ್ನುವ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ‘ವಿಶ್ವಶಾಂತಿಯು ಸಾಮ್ರಾಜ್ಯವಾದದ ಸಾವು’ ಎಂದು ನಡುಗುತ್ತಿರುವ ಸಾಮ್ರಾಜ್ಯವಾದವು ಕಾರ್ಮಿಕ ವರ್ಗದ ಕಾಂತಿಯಿಂದ ಇಂದು ಭಯಗೊಂಡಿದೆ. ಅಂತಿಮವಾಗಿ ಅವರು ಆರ್ಥಿಕ ಬಿಕ್ಕಟ್ಟು ಬಂಡವಾಳವಾದವನ್ನು ಸಂಕಷ್ಟಕ್ಕೆ ದೂಡಿದೆ. ಅದನ್ನು ಮರೆಮಾಚಲು ಬಡ ರಾಷ್ಟ್ರಗಳ ಮೇಲೆ ಯುದ್ಧದ ಅಕ್ರಮಣವನ್ನು ಮಾಡುತ್ತಿದೆʼ ಎಂದರು.

ʼಬಂಡವಾಳಶಾಹಿ ವ್ಯವಸ್ಥೆಯ ಸಾವಿನ ಅಂಚಿನಲ್ಲಿರುವುದರಿಂದ ಸಮಾಜದಲ್ಲಿ ಅತ್ಯಂತ ಕೊಳೆತ ಸಂಸ್ಕೃತಿಯು ಎಲ್ಲ ಕ್ಷೇತ್ರದಲ್ಲೂ ಬಿಂಬಿತವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸಮಾಜವಾದಿ ಕ್ರಾಂತಿಗಾಗಿ ನಾವು ಸಜ್ಜಾಗುವುದು ಅತ್ಯಂತ ಅವಶ್ಯಕವಾಗಿದೆ ಎಂದು ಮಾನವನಿಂದ ಮಾನವನ ಶೋಷಣೆಯನ್ನು ದೇಶದಲ್ಲಿ ಕೊನೆಗಾಣಿಸಲು ಮಾರ್ಕ್ಸವಾದಿ ಚಿಂತನೆಗಳ ಆಧಾರದ ಮೇಲೆ ಪ್ರಬಲ ಜನಾಂದೋಲನವನ್ನು ಬೆಳೆಸಬೇಕುʼ ಎಂದು ಕರೆ ನೀಡಿದರು.

ಎಸ್‌ಯುಸಿಐ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಎ.ನಾಗಮ್ಮ, ರಾಮಣ್ಣ, ಎಸ್. ಇಬ್ರಾಹಿಂಪುರ್, ಗಣಪತರಾವ್ ಕೆ. ಮಾನೆ, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಆರ್.ಕೆ.ವೀರಭದ್ರಪ್ಪ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X