ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆಯ ಕೀರ್ತಿ ನಗರ ಹಾಗೂ ಕೃಷ್ಣ ನಗರ ಸ್ಲಂ ಪ್ರದೇಶಗಳಲ್ಲಿ ತೆರೆದ ಚರಂಡಿ ಹಾಗೂ ಒಳಚರಂಡಿ ದುರಸ್ತಿ ಹಾಗೂ ಸ್ವಚ್ಛತೆಯನ್ನು ಮಾಡುವಂತೆ ಒತ್ತಾಯಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಕಾರ್ಯಕರ್ತರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸಮಿತಿ ಸದಸ್ಯ ಮಹೇಶ್ ಎಸ್.ಬಿ ಮಾತನಾಡಿ, ʼಕಲಬುರಗಿ ಮಹಾನಗರ ಪಾಲಿಕೆಯ ಆಡಳಿತದಲ್ಲಿ ಬರುವ ಬ್ರಹ್ಮಪುರ ಬಡಾವಣೆಯ ವಡ್ಡರಗಲ್ಲಿಯ ಹತ್ತಿರವಿರುವ ಕೀರ್ತಿ ನಗರ ಹಾಗೂ ಕೃಷ್ಣ ನಗರವು ಹಲವು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಅಲ್ಲಿನ ಜನರಿಗೆ ನೀಡಲು ಮಹಾನಗರ ಪಾಲಿಕೆಯಿಂದ ಆಗಿಲ್ಲದಿರುವುದು ವಿಷಾದನೀಯʼ ಎಂದರು.
“ಈ ಸ್ಲಂಗಳಲ್ಲಿ ಬಹುತೇಕ ಕೂಲಿ ಕಾರ್ಮಿಕ, ದಿನಗೂಲಿ ಕೆಲಸಗಾರರು, ಮನೆಗೆಲಸ ಮಾಡುವವರು ಇದ್ದಾರೆ. ಅವರಿಗೆ ಅಗತ್ಯ ಮೂಲಸೌಕರ್ಯ ನೀಡಬೇಕಾದ ಕರ್ತವ್ಯ ಮಹಾನಗರ ಪಾಲಿಕೆಯದಾಗಿದೆ. ಆದರೆ ಇಲ್ಲಿನ ಒಳಚರಂಡಿ ದುರಸ್ತಿ ಕಾಣದೇ ಇರುವುದಕ್ಕೆ ಕೊಳಚೆ ನೀರು, ಮಲ ರಸ್ತೆ ಮೇಲೆ ಹರಿಯುತ್ತಿದ್ದು, ಸುತ್ತಲೂ ಗಬ್ಬು ನಾರುತ್ತಿದೆ. ಇದರಿಂದ ನಿವಾಸಿಗಳು ರೋಗಗಳ ಭೀತಿ ಎದುರಾಗಿದೆʼ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಸದಸ್ಯರಾದ ಪುಟ್ಟರಾಜ ಲಿಂಗಶೆಟ್ಟಿ, ಮಹಾದೇವಿ ಜಮಾದಾರ ಹಾಗೂ ನಿವಾಸಿಗಳಾದ ಕಲ್ಲಪ್ಪ ಹಡಪದ, ಸರುಬಾಯಿ, ಭಾಗಮ್ಮ, ಬಸಮ್ಮ ಮತ್ತಿ