ಪ್ರೇರಣಾ ಗ್ರಾಮೀಣ ಅಭಿವೃದ್ಧಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಬಡ ಜನರಿಗೆ ತುಂಬಾ ಅನುಕೂಲ ಮಾಡಿಕೊಂಡಿದ್ದಾರೆ ಎಂದು ಮಲ್ಲಪ್ಪ ದೊಡ್ಡಿ ಅಭಿಪ್ರಾಯಪಟ್ಟರು.
ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಮರತೂರ ಗ್ರಾಮದಲ್ಲಿ ಪ್ರೇರಣಾ ಗ್ರಾಮೀಣ ಅಭಿವೃದ್ಧಿ ಸೇವಾ ಟ್ರಸ್ಟ್ ಹಾಗೂ ವೆಲ್‌ನೆಸ್ ನ್ಯೂಟ್ರಿಷಿಯನ್ ಹೆಲ್ತ್ ಕೇರ್ ಸೆಂಟರ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ವ್ಯದ್ಯ ಡಾ. ಸಿದ್ದಾರ್ಥ ನಿನ್ನೆಕರ್ ಮಾತನಾಡಿ, ಗ್ರಾಮೀಣ ಭಾಗದ ಜನರು ಮುಖ್ಯವಾಗಿ ಅನುಭವಿಸುತ್ತಿರುವ ಕಾಯಿಲೆಗಳಾದ ಮಂಡಿ ನೋವು, ಸೊಂಟ ನೋವು, ರಕ್ತ ಹೀನತೆಯಂತಹ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವ ಕುರಿತು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಾಮಗಾರಿ ಟೆಂಡರ್ ಆದೇಶಪ್ರತಿ ನೀಡುವಂತೆ ಮಲ್ಲಾಬಾದ್ ಏತ ನೀರಾವರಿ ರೈತ ಹೋರಾಟ ಸಮಿತಿ ಆಗ್ರಹ
ಈ ಒಂದು ಶಿಬಿರದಲ್ಲಿ 45-50 ಜನರು ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುನಾಥ ಕಂಬ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ್ ಮರತೂರ್, ಶಿವಾನಂದ್ ಮಠಪತಿ, ಅನಿಲ್, ಪ್ರಭಾವತಿ, ಸುಜಾತ ಉದಯ್ಕರ, ಜಗನ್ನಾಥ್ ಕೌಲಗ, ರಾಜಕುಮಾರ್ ಸರಡಗಿ, ಮಲ್ಲಪ್ಪ ದೊಡ್ಡಿ ಸೇರಿದಂತೆ ಇತರರು ಇದ್ದರು.