ಕಲಬುರಗಿ | ದೇಶದ ಅಡಿಪಾಯವನ್ನು ಶಾಶ್ವತವಾಗಿ ಬದಲಾಯಿಸಲಿದೆ ಈ ಬಾರಿಯ ಚುನಾವಣೆ: ದಸಂಸ

Date:

Advertisements

ಈ ದೇಶದ ಅಡಿಪಾಯವನ್ನು ಶಾಶ್ವತವಾಗಿ ಬದಲಾಯಿಸಲಿರುವ ಈ ಬಾರಿಯ ಚುನಾವಣೆಯಲ್ಲಿ ಕಲಬುರ್ಗಿ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾದ ರಾಧಾಕೃಷ್ಣ ದೊಡ್ಡಮನಿ ಇವರನ್ನು ಬೆಂಬಲಿಸುವುದಾಗಿ ದಸಂಸ ಐಕ್ಯ ಹೋರಾಟ ಚಾಲನಾ ಸಮಿತಿ ಸದಸ್ಯರು ಹಾಗೂ ಹಿರಿಯ ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ 2024 ಲೋಕಸಭೆ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಇವರನ್ನು ಬೆಂಬಲಸಿ ದ. ಸಂ. ಸ ಐಕ್ಯ ಹೋರಾಟ ಚಾಲನ ರಾಜ್ಯ ಸಮಿತಿ ಆದೇಶದ ಮೇರೆಗೆ ಪತ್ರಿಕಾಗೋಷ್ಠಿನಡೆಸಿ ಕರ್ಪತ್ರಗಳನ್ನು ಬಿಡುಗಡೆ ಮಾಡಿತು.

ಈ ವೇಳೆ ಮಾತನಾಡಿದ ಮುಖಂಡ ಸಿದ್ರಾಮ್ ಕಟ್ಟಿ, 2024ರ ಲೋಕಸಭಾ ಚುನಾವಣೆ ಸಂವಿಧಾನ, ಪ್ರಜಾಪ್ರಭುತ್ವ, ಒಕ್ಕೂಟ ಭಾರತ ಉಳಿಸಿಕೊಳ್ಳಲು ನಮಗಿರುವ ಕೊನೆಯ ಅವಕಾಶ. ರಾಜಕೀಯ ಜನಜಾಗೃತಿಗಾಗಿ ದಸಂಸ ಆಂದೋಲನ, ಅಂಬೇಡ್ಕರ್ ಸಮಾನತೆಯ ರಥವನ್ನು ಮುಂದಕ್ಕೆ ಒಯ್ಯೋಣ, ಭಾರತದ ಸಂವಿಧಾನ, ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸೋಣ, ಲೋಕಸಭಾ ಚುನಾವಣೆ ನಮ್ಮ ಮುಂದಿದೆ ಎಂದರು.

Advertisements

ಇಂತಹ ಹಲವು ಚುನಾವಣೆ ಕಂಡಿರುವ ಕೆಲವರಿಗೆ ಇದು ಅಂತಹದ್ದೇ ಮತ್ತೊಂದು ಚುನಾವಣೆ ಅನಿಸಬಹದು. ಆದರೆ, ಈ ಚುನಾವಣೆ ಅಂತಹ ಮತ್ತೊಂದು ಚುನಾವಣೆಯಲ್ಲ ಈ ದೇಶದ ಅಡಿಪಾಯವನ್ನು ಶಾಶ್ವತವಾಗಿ ಬದಲಾಯಿಸಲಿರುವ ಚುನಾವಣೆ ಎಂದರು.

ಈ ದೇಶವು ಮತ್ತೊಂದು ಪ್ರತಿಕ್ರಾಂತಿಗೆ ಗುರಿಯಾಗದಂತೆ ತಡೆಯುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ʼಏನು ಮಾಡಲು ಆಗುತ್ತದೆ ಬಿಡು’, ‘ಯಾರು ಬಂದರೂ ಅಷ್ಟೇ’, ‘ಕಾಂಗ್ರೆಸ್ ನವರೇನು ಕಡಿಮೆಯಾ’ ಎಂಬಂತಹ ನಿರಾಸೆಯ, ನಿಸ್ತೇಜಗೊಳಿಸುವ ಮಾತುಗಳನ್ನು ನಾವು ಸಾರಾಸಗಟು ತಿರಸ್ಕರಿಸಬೇಕಿದೆ. ಅಂಬೇಡ್ಕರರ ಪರಿಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಿರುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಸಂವಿಧಾನವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಪ್ರಪ್ರಥಮ ಆದ್ಯ ಕರ್ತವ್ಯವಾಗಿದೆ. ಪ್ರತಿಕ್ರಾಂತಿಯನ್ನು ಹಿಮ್ಮೆಟ್ಟಿಸೋಣ, ಜನಕ್ರಾಂತಿಯನ್ನು ಸಾಧಿಸೋಣ ಸಂವಿಧಾನವನ್ನು ಸಂರಕ್ಷಿಸಿಕೊಳ್ಳೋಣ ಎಂದರು.

ಇದೇವೇಳೆ ಬಿಜೆಪಿ ಸೋಲಿಸಿ-ಕಾಂಗ್ರೆಸ್ ಗೆಲ್ಲಿಸಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಜೇವರ್ಗಿ ಹಾಗೂ ಯಡ್ರಾಮಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಶಿವಕುಮಾರ ಹೆಗಡೆ ಸೋನ್ನ, ಸಿದ್ರಾಮ ಕಟ್ಟಿ, ಭೀಮರಾಯ ನಗನೂರ, ಮಲ್ಲಣ್ಣ ಕೋಡಚಿ, ದವಲಪ್ಪ ಮದನಕರ್, ಶ್ರೀಹರಿ ಕರಕಳ್ಳಿ, ರವಿ ಕುಳಗೇರಿ, ಸಂಗಣ್ಣ ಹೋಸಮನಿ, ನಿಂಗಣ್ಣ ದರೇನ್ ಇನ್ನಿತರರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X