ಕಲಬುರಗಿ | ಮೊಟ್ಟೆ ಹಗರಣದ ತನಿಖೆಗೆ ಒತ್ತಾಯ

Date:

Advertisements

ಕಲಬುರಗಿ ಗ್ರಾಮೀಣ ಪ್ರದೇಶದ ರೈತರ ಕಾರ್ಮಿಕರ ಬಡವರ ಮಕ್ಕಳಿಗೆ ಮೊಟ್ಟೆ ಹಗರಣ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ ನಡೆಸಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಕಲಬುರಗಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಲಬುರಗಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ತಿಳಿದುಬಂದಿದೆ ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಮೊಟ್ಟೆಗಳನ್ನು ಅಕ್ಟೋಬರ್, ನವೆಂಬರ್, ಡಿಸೆಂಬರ್ ಮೂರು ತಿಂಗಳ ಮಕ್ಕಳಿಗೆ ಒದಗಿಸದೇ ತತ್ತಿ ಪೂರೈಕೆ ಮಾಡುವ ಏಜೆಂಟರು ಅಂಗನವಾಡಿ ಕೇಂದ್ರಗಳ ಸಿಡಿಪಿಒ, ಸೂಪ್ರವೈಜರ್‌ಗಳನ್ನು, ಕಚೇರಿಯ ಸಿಬ್ಬಂದಿ ಸೇರಿದಂತೆ, ಅಂಗನವಾಡಿ ಕಾರ್ಯಕರ್ತೆಯರು ತತ್ತಿ ಪೂರೈಸದಿದ್ದರು, ಪೂರೈಸಿದ್ದಾರೆಂದು ನಕಲಿ ರಸಿದಿ ಪಡೆದು ಕೋಟಿಗಟ್ಟಲೇ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಬೆಲ್ಲ, ಬೇಳೆ, ಎಣ್ಣೆ ಮತ್ತಿತ್ತರ ಆಹಾರ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಒದಗಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಪೂರ್ಣ ಪ್ರಮಾಣದ ಸಾಮಗ್ರಿಗಳನ್ನು ಒದಗಿಸಿದ್ದಾರೆಂದು ಹಲವಾರು ವರ್ಷಗಳಿಂದ ಹಣ ಲೂಟಿ ಮಾಡಲಾಗುತ್ತಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆ ಎಂದರು.

Advertisements

ಜಿಲ್ಲೆಯ ಬಡ ಮತ್ತು ರೈತರ ಕಾರ್ಮಿಕರ ಬಡವರ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಈ ಮಹತ್ವದ ಐಸಿಡಿಎಸ್ ಕಾರ್ಯಕ್ರಮ ಜಾರಿಗೊಳಿಸಿದ್ದು, ಈ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸೇರಿಕೊಂಡಿರುವ ಹೆಗ್ಗಣಗಳು ಸೇರಿಕೊಂಡು ಇಡಿ ಐಸಿಡಿಎಸ್ ಕಾರ್ಯಕ್ರಮದ ಉದ್ದೇಶವನ್ನೇ ನಿರ್ಥಕಗೊಳಿಸಿವ ಎಂದು ಹೇಳಿದರು.

ಈ ಬೃಹತ್ ಭ್ರಷ್ಟಚಾರ ಕುರಿತು ಸರ್ಕಾರವು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಉನ್ನತ ಮಟ್ಟದ ತನಿಖೆ ನಡೆಸಿ ಜಿಲ್ಲಾ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕೇಂದ್ರಗಳಿಗೆ ತತ್ತಿ ವಿತರಿಸುವ ತತ್ತಿ ಏಜೆನ್ಸಿ ಟೆಂಡ‌ರ್ ತೊಗೊಂಡು ವ್ಯಕ್ತಿ ಮೇಲೆ ಕ್ರಿಮಿನಲ್ ಕೆಸ್ ದಾಖಲಿಸಿ ಜೈಲಿಗೆ ಹಾಕಿ ಮಕ್ಕಳಿಗೆ ನ್ಯಾಯ ದೊರಕಿಸಿ ಕೊಡಲು ಮತ್ತು ಭ್ರಷ್ಟರನ್ನು ಶಿಕ್ಷಕೆಗೆ ಒಳಪಡಿಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕೆಪಿಆರ್‌ಎಸ್‌ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಅರ್ಜಿ ಸಲ್ಲಿಸಿ ಒಂದು ತಿಂಗಳ ಕಳೆದರು ಯಾವುದೇ ಕಾನೂನು ಕ್ರಮ ಕೈ ಗೊಂಡಿರುವುದಿಲ್ಲ ದೊಡ್ಡ ಪ್ರಮಾಣದ ಭ್ರಷ್ಟಾ ಚಾರ ಮುಚ್ಚಿ ಹಾಕುವ ಹುನ್ನಾರ ಎದ್ದು ಕಾಣುತ್ತದೆ. ಕ್ರಮ ಜರುಗಿಸದಿದ್ದರೆ ರೈತ ಸಂಘವು ಭಾರಿ ಪ್ರಮಾಣದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಹೋರಾಟ ಮಾಡುವುದೆಂದು ಎಚ್ಚರಿಸಲಾಗುತ್ತದೆ ರಸ್ತಾ ರೋಖೋ ಚಳವಳಿ ನಡೆಸಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ದಿಲೀಪ್ ನಾಗೂರೇ, ರೇವಣಸಿದ್ಧಪ್ಪ, ಪ್ರೋ. ಪಾಟೀಲ್, ಜಾಫರ್ ಖಾನ್ ಮಿರಿಯಾಣ, ರಾಜಪ್ಪ ಪೂಜಾರಿ, ರಸೂಲ್ ಪಟೇಲ್, ರಾಜಪ್ಪ ಎಸ್. ಪಿ ಆರ್. ಎಸ್ ಇನ್ನಿರರು ಇದ್ದರು.

ಬೇಡಿಕೆಗಳು

1) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ತತ್ತಿ ಸಪ್ಲಾಯ್ ಮಾಡುವ ಮೇನ್ ಏಜೆನ್ಸಿ (ಟೆಂಡರ್) ಪಡೆದವರ ಕಂಪನಿ ಹೆಸರು ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನವರು. ವಿಕೆ ರಂಗರಾಜನ್ ಫ್ಯಾನ್ಸ್ ಅಂಡ್ಯ ಕಂಪನಿ ಕಲಬುರಗಿ ಗ್ರಾಮೀಣ ಹೊರತು ಪಡಿಸಿ ಉಳಿದ ಎಲ್ಲಾ ತಾಲೂಕುಗಳಲ್ಲಿ ತತ್ತಿ ಸಪ್ಲಾಯಿ ಮಾಡುತ್ತಾರೆ. ಇವರ ಮೇಲೆ ಸೂಕ್ತ ವಾದ ತನಿಖೆ ನಡೆಸಿ ಕ್ರಿಮಿನಲ್ ಪೊಲೀಸ್ ಕೆಸ್ ಹಾಕಿ ಟೆಂಡರ್ ರದ್ದುಪಡಿಸಿ ಜೈಲಿಗೆ ಕಳುಸಿ ಗ್ರಾಮೀಣ ಪ್ರದೇಶದ ಬಡವರ ಮಕ್ಕಳಿಗೆ ನ್ಯಾಯ ಒದಗಿಸಬೇಕು.

2) ವಿಕೆ ರಂಗರಾಜನ್ ಫ್ರಾನ್ಸ್ ಆ್ಯಂಡ್ ಕಂಪನಿ ಮೆನ್ ಏಜೆನ್ಸಿಯು ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ಸಬ್ ಏಜೆನ್ಸಿ ಗಳು ಇದ್ದಾರೆ ಇವರೆಲ್ಲರೂ ಮೇಲೂ ಸಹ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಿ ಇದರ ಒಳಗಡೆ ಶಾಮಿಲಾದ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮೇಲೆ ಸಹ ಸೇವೆಯಿಂದ ಅಮಾನತ್ತು ಮಾಡಬೇಕು ತಕ್ಷಣವೇ ಅವರ ಬಿಲ್ ತಡೆಹಿಡಿಯ ಬೇಕು.

3) ಕಲಬುರಗಿ ಜಿಲ್ಲೆಯ ಗ್ರಾಮೀಣ ತಾಲ್ಲೂಕಿನಲ್ಲಿ ಶಾಸಕರ ಆಪ್ತಾರಾ ಮೂಲಕ ಅಂಗನವಾಡಿ ಕೇಂದ್ರಗಳಿಗೆ ತತ್ತಿ ಸಪ್ಲಾಯಿ ಮಾಡುತ್ತಿದ್ದು ಅವರ ಮೇಲೂ ಸಹ ತನಿಖೆ ನಡೆಸಿ ಬಡವರ ಮಕ್ಕಳಿಗೆ ನ್ಯಾಯ ಒದಗಿಸಿಕೊಡಬೇಕು.

4) ಅಂಗನವಾಡಿ ಕೇಂದ್ರಗಳಿಗೆ ತತ್ತಿ ಸಪ್ಲಾಯಿ ಮಾಡುವಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿರುವ ಜೇವರ್ಗಿ ತಾಲೂಕು ಮತ್ತು ಅಫಜಲಪುರ ತಾಲೂಕಿನಲ್ಲಿ ವಿಶೇಷ ತನಿಖೆ ನಡೆಸಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X