ಕಮಲಾಪುರ ತಾಲ್ಲೂಕಿನ ಕುರಿಕೋಟಾ ಸೇತುವೆ ಮೇಲಿಂದ ಶುಕ್ರವಾರ ಬೆಣ್ಣೆತೊರೆ ಹಿನ್ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಂಜೆಯಾದರೂ ಪತ್ತೆಯಾಗಿಲ್ಲ.
ಕಲಬುರಗಿಯ ಮಿಲ್ಲತನಗರ ನಿವಾಸಿ ಸಮೀರ್ ಜೈನೋದ್ದಿನ್ (23) ನೀರಿಗೆ ಹಾರಿದ ಯುವಕ ಎಂದು ಗುರುತಿಸಲಾಗಿದೆ.
ಸಮೀರ್ ಕಟ್ಟಡ ಕಾರ್ಮಿಕನಾಗಿದ್ದು, ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಶುಕ್ರವಾರ ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನದಿಗೆ ಹಾರಿದ್ದಾನೆ. ಮೀನುಗಾರರು ಅಗ್ನಿಶಾಮಕ ದಳ ಶೋಧ ನಡೆಸಿದ್ದು, ಪತ್ತೆಯಾಗಲಿಲ್ಲ.
ʼಮೂರು ದಿನದಿಂದ ಕೆಲಸಕ್ಕೆ ಹೋಗದೆ ಬೈಕ್‌ನಲ್ಲಿ ಓಡಾಡುತ್ತಿದ್ದೀಯಾʼ ಎಂದು ಪೋಷಕರು ಸಮೀರ್‌ನಿಗೆ ಕೇಳಿದಕ್ಕೆ ಕೋಪದಲ್ಲಿ ನದಿಗೆ ಹಾರಿದ್ದಾನೆ ಎಂದು ಕುಟುಂಬಸ್ಥರು ಠಾಣೆಗೆ ತಿಳಿಸಿದ್ದು, ಮೀನುಗಾರರು ಅಗ್ನಿಶಾಮಕ ದಳ ಶೋಧ ನಡೆಸಿದ್ದು, ಪತ್ತೆಯಾಗಲಿಲ್ಲ. ಇಂದು ಶೋಧ ಕಾರ್ಯಾಚರಣೆ ಮುಂದುವರೆಯುತ್ತದೆʼ ಎಂದು ಮಹಾಗಾಂವ್ ಠಾಣೆಯ ಪಿಎಸ್‌ಐ ಆಶಾ ರಾಠೋಡ ʼಈದಿನ.ಕಾಮ್ʼ ಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪ್ರಕರಣ ಇನ್ನೂ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.