ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಅಂಬೇಡ್ಕರ್ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತಿದೆ. ಕಲಬುರಗಿಯಲ್ಲಿ ಕಲಬುರಗಿ ಮಹಾವಿದ್ಯಾಲಯದಲ್ಲಿ ಪರೀಕ್ಷೆಯನ್ನು ಸಂಘಟನೆ ನಡೆಸಿದೆ.
ಪರೀಕ್ಷೆಯಲ್ಲಿ ಮೊದಲು ಮೂರು ಶ್ರೇಣಿಯಲ್ಲಿ ಪಾಸ್ ಆದ ವಿದ್ಯಾರ್ಥಿಗಳಿಗೆ 5 ಲಕ್ಷ ರೂಪಾಯಿ (ಪ್ರಥಮ), 2.5 ರೂಪಾಯಿ (ದ್ವಿತೀಯ), 1 ಲಕ್ಷ ರೂಪಾಯಿ (ತೃತೀಯ) ಬಹುಮಾನ ನೀಡಲಾಗುತ್ತದೆ. ಜೊತೆಗೆ, ಉಚಿತ ಐಎಎಸ್-ಕೆಎಎಸ್ ಕೋಚಿಂಗ್ ಕೊಡಿಸಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ.
ಪರೀಕ್ಷೆಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲೆ ಸವಿತಾ, ಸಂತೋಷ್, ಸಂಜಿಕುಮಾರ್, ಜಯಶ್ರೀ, ಸುರೇಶ ಎಸ್. ಕಟ್ಟಿಮನಿ, ಜಗದೇವ ಕಂಬಾರ, ಸುರೇಶ ಭೀಜನಳ್ಳಿ ಸೇರಿದಂತೆ ಹಲವರು ಇದ್ದರು.