ಕಲಬುರಗಿ | ಬುದ್ಧ ಪೂರ್ಣಿಮೆ ಅಂಗವಾಗಿ ಮೈತ್ರಿ, ಧಮ್ಮ ಪ್ರವಚನ ಕಾರ್ಯಕ್ರಮ

Date:

ಬುದ್ಧ ಪೂರ್ಣಿಮೆ ಅಂಗವಾಗಿ ವಿಶ್ವಶಾಂತಿ ಹಾಗೂ ಮಾನವೀಯ ಮೌಲ್ಯಗಳ ಬೋಧನೆಗಾಗಿ ಮಂಗಳ ಮೈತ್ರಿ ಮತ್ತು ಧಮ್ಮ ಪ್ರವಚನ ಕಾರ್ಯಕ್ರಮವನ್ನು ನಗರದ ಸಾಂಚಿನಗರದಲ್ಲಿರುವ ಪ್ರಬುದ್ಧ ಬುದ್ಧ ವಿಹಾರದಲ್ಲಿ ಗುರುವಾರ ಸಂಜೆ ಭಕ್ತಿಭಾವದಿಂದ ಆಯೋಜಿಸಲಾಯಿತು.

- Advertisement -

ಮೆತ್ತಾ ಫೌಂಡೇಷನ್ ಕಲಬುರಗಿ, ಭೀಮ ಶಕ್ತಿ ಯುವಕ ಸಂಘ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘ, ಸಾಂಚಿನಗರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮದ ಮೌಲ್ಯಗಳು, ಪಂಚಶೀಲ, ತ್ರಿಪೀಠಕಗಳ ಮಹತ್ವ ಮತ್ತು ಧಮ್ಮದ ಆಳವಾದ ಅರ್ಥವನ್ನು ಜನರಿಗೆ ವಿವರಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...
1637274

ಕಾರ್ಯಕ್ರಮದ ಆರಂಭದಲ್ಲಿ ಗೌತಮ ಬುದ್ಧ ಹಾಗೂ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ನಂತರ ತ್ರಿಪೀಠಕ ಪಠಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭೋದಿ ವೃಕ್ಷಕ್ಕೆ ನೀರುಣಿಸುವ ಮೂಲಕ ಧಮ್ಮ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ಭಕ್ತರು ಹಾಗೂ ಸಂಘಟನೆಯ ಪದಾಧಿಕಾರಿಗಳು ಭಕ್ತಿ ಹಾಗೂ ಗೌರವದಿಂದ ಭಾಗವಹಿಸಿದರು.

ಪ್ರವಚನ ಕಾರ್ಯಕ್ರಮದಲ್ಲಿ ಮಹಾಬೋಧಿ ಬುದ್ಧ ವಿಹಾರ ಬೆಂಗಳೂರು ಪೂಜ್ಯ ಭಂತೆ ಆನಂದ ಥೇರಾ ಮಾತನಾಡಿ, “ಮಾನವನ ಬದುಕು ಶೀಲದಿಂದ ಶುದ್ಧವಾಗಬೇಕು ಎಂದು ಗೌತಮ ಬುದ್ಧರು ಬೋಧಿಸಿದ್ದಾರೆ. ಶೀಲವೇ ಬೌದ್ಧ ಧರ್ಮದ ಮೂಲ ಅಡಿಪಾಯ. ಶೀಲವಿದ್ದರೆ ವ್ಯಕ್ತಿಯ ಜೀವನ ಭದ್ರತೆಯಿಂದ ಕೂಡಿರುತ್ತದೆ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ” ಎಂದು ತಿಳಿಸಿದರು.

1637328

ಅವರು ಪಂಚಶೀಲಗಳ ಮಹತ್ವವನ್ನು ವಿವರಿಸಿ, “ಪ್ರಾಣಿಹತ್ಯೆ ಮಾಡಬಾರದು, ಹಿಂಸೆ ತ್ಯಜಿಸಬೇಕು, ವ್ಯಭಿಚಾರದಿಂದ ದೂರವಿರಬೇಕು, ಸುಳ್ಳು ಹಾಗೂ ಮೋಸವನ್ನು ಬಿಟ್ಟು ಸತ್ಯನಿಷ್ಠೆಯಿಂದ ಬದುಕಬೇಕು, ಮದ್ಯಪಾನವನ್ನು ತ್ಯಜಿಸಬೇಕು ಇವುಗಳೇ ವಾರಿತ ಶೀಲಗಳಾಗಿವೆ” ಎಂದು ಹೇಳಿದರು.

ಇದೇ ವೇಳೆ, “ಮೈತ್ರಿ, ಉದಾರತೆ, ದಾನ, ಧರ್ಮ ಮತ್ತು ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಚಾರಿತ ಶೀಲವಾಗಿದೆ. ದೇಹ, ವಾಚ ಮತ್ತು ಮನಸ್ಸಿನ ಶುದ್ಧತೆ ಜೀವನವನ್ನು ಸಾರ್ಥಕಗೊಳಿಸುತ್ತದೆ. ಐದು ಇಂದ್ರಿಯಗಳ ನಿಯಂತ್ರಣದಿಂದ ಮಾನವ ಜೀವನ ಶಾಂತಿಯತ್ತ ಸಾಗುತ್ತದೆ” ಎಂದು ಹೇಳಿದರು.

1637361

ಬುದ್ಧನ ಧಮ್ಮದ ಮಹತ್ವವನ್ನು ವಿವರಿಸಿದ ಅವರು, “ಬುದ್ಧನ 84 ಸಾವಿರ ಧಮ್ಮ ಗ್ರಂಥಗಳಲ್ಲಿ ತ್ರಿಪೀಠಕಗಳಿಗೆ ವಿಶೇಷ ಸ್ಥಾನವಿದೆ. ವಿನಯ ಪೀಠಕದಲ್ಲಿ ಶಿಸ್ತಿನ ಬೋಧನೆ, ಸೂತ್ತ ಪೀಠಕದಲ್ಲಿ ಜನಸಾಮಾನ್ಯರಿಗೆ ನೀಡಿದ ಉಪದೇಶಗಳು ಹಾಗೂ ಅಭಿಧಮ್ಮ ಪೀಠಕದಲ್ಲಿ ಗಹನ ತಾತ್ವಿಕ ಚಿಂತನೆಗಳಿವೆ. ಧಮ್ಮವನ್ನು ಸರಿಯಾಗಿ ಓದಿ, ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅದರ ನಿಜವಾದ ಮಹತ್ವ ತಿಳಿಯುತ್ತದೆ” ಎಂದು ಹೇಳಿದರು.

“ಧಮ್ಮವನ್ನು ಕಲಿಯುವುದು ಮಾತ್ರ ಸಾಲದು; ಅದನ್ನು ಇತರರಿಗೂ ಬೋಧಿಸಬೇಕು. ಧಮ್ಮವನ್ನು ನಿರ್ಲಕ್ಷಿಸಿದರೆ ಅದು ನಾಶವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಧಮ್ಮವನ್ನು ಕಲಿತು ಸಮಾಜದಲ್ಲಿ ಹಂಚಬೇಕು. ಧಮ್ಮ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ; ಇದು ಮಾನವಕುಲದ ಒಳಿತಿಗಾಗಿ ರೂಪುಗೊಂಡ ಉನ್ನತ ಜೀವನ ಪದ್ಧತಿ” ಎಂದು ಅವರು ತಿಳಿಸಿದರು.

1628079

ಅವರು ಮುಂದುವರೆದು, “ಸತ್ಯವನ್ನು ಜೀವನದಲ್ಲಿ ಧಾರಣೆ ಮಾಡಿಕೊಂಡಾಗ ಮಾತ್ರ ಅದೇ ಧಮ್ಮವಾಗುತ್ತದೆ. ಸುಖ, ಶಾಂತಿ ಮತ್ತು ಸಮಾನತೆಯೇ ಧಮ್ಮದ ಸಾರ. ದ್ವೇಷ, ಅಹಂಕಾರ ಮತ್ತು ಅಸತ್ಯದಿಂದ ದೂರವಿದ್ದು ಪ್ರೀತಿ, ಕರುಣೆ ಮತ್ತು ಸತ್ಯವನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ” ಎಂದು ಬೋಧಿಸಿದರು.

ಬುದ್ಧ ಪೂರ್ಣಿಮೆಯ ಈ ಧಮ್ಮ ಪ್ರವಚನ ಕಾರ್ಯಕ್ರಮವು ಭಾಗವಹಿಸಿದ ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸಿತು. ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಸತ್ಯದ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯರು, ಮಹಿಳೆಯರು, ಯುವಕರು ಹಾಗೂ ಬೌದ್ಧ ಧರ್ಮಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

1637287

ಕಾರ್ಯಕ್ರಮವನ್ನು ಚನ್ನೋ ಬಿಕ್ಕು, ಸುನಾಂದೋ ಬಿಕ್ಕು, ಸಾಸನ ರಕೀತಾ ಬಿಕ್ಕು, ನಾನಂದಕ ಬಿಕ್ಕು, ಯಶೋ ಬಿಕ್ಕು ಹಾಗೂ ಧಮ್ಮ ಉಪಸಾಕ, ಉಪಸಕಿಯರು ಭಾಗವಹಿಸಿದರು.

ಇದನ್ನು ಓದಿದ್ದೀರಾ? ಕಲಬುರಗಿ | ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತರ ಬಲೆಗೆ

ಕಾರ್ಯಕ್ರಮದ ಅಂತ್ಯದಲ್ಲಿ ವಿಶ್ವಶಾಂತಿ ಮತ್ತು ಸಮಾನತೆಯ ಸಂದೇಶವನ್ನು ಜನರಿಗೆ ತಲುಪಿಸುವ ಸಂಕಲ್ಪದೊಂದಿಗೆ ಮಂಗಳ ಮೈತ್ರಿ ಪ್ರಾರ್ಥನೆ ಸಲ್ಲಿಸಲಾಯಿತು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಅ. 24ರಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಪದಾಧಿಕಾರಿಗಳ ಪದಗ್ರಹಣ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಸೇಡಂ ತಾಲೂಕು ಘಟಕದ ನೂತನ...

ಕಲಬುರಗಿ | ಗಾಂಜಾ ಸೇವನೆ ಆರೋಪ: 19 ವರ್ಷದ ಯುವಕನ ಬಂಧನ

ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾಕೀಜಾ ಸಮೀಪದ ಸಾರ್ವಜನಿಕ ಸ್ಥಳದಲ್ಲಿ...

ಕಲಬುರಗಿ | 20 ಪ್ರಕರಣಗಳ ಆರೋಪಿಗೆ ಗುಂಡಾ ಕಾಯ್ದೆ ಅಡಿ ಬಂಧನ

ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ ಸೇರಿದಂತೆ...

ಕಲಬುರಗಿ | ಬಸ್‌ನಲ್ಲಿ ಮರೆತು ಹೋಗಿದ್ದ ಚಿನ್ನಾಭರಣ ಮರಳಿಸಿದ ಚಾಲಕ, ನಿರ್ವಾಹಕ

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋಗಿದ್ದ ಬೆಳ್ಳಿ...