ಯಾದಗಿರಿಯಿಂದ ದಂಡಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾನಂದ ಹಿರೇಮಠ್ ಅವರು ಚಿರತೆ ವಿಡಿಯೋ ಸೆರೆಹಿಡಿದ್ದಾರೆ.
ಕುಟುಂಬಸ್ಥರೊಂದಿಗೆ ವಿದ್ಯಾನಂದ ಅವರು ಯಾದಗಿರಿಯಿಂದ ದಂಡಗುಂದಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ, ಚಿರತೆ ಕಾಣಿಸಿಕೊಂಡಿದ್ದು, ಕುಟುಂಬಸ್ಥರು ಗಾಬರಿಕೊಂಡಿದ್ದಾರೆ.
ವಿದ್ಯಾನಂದ ಅವರು ಕಾರಿನ ಹೆಡ್‌ಲೈಟ್ ಬೆಳಕಿನಲ್ಲಿ ಚಿರತೆ ವಿಡಿಯೋ ಸೀರೆ ಹಿಡಿದ್ದಾರೆ. ದಂಡಗುಂಡ ಬಸವೇಶ್ವರ ಜಾತ್ರೆ ನಡೆಯುತ್ತಿದ್ದು, ಚಿರತೆ ಕಾಣಿಸಿಕೊಂಡಿದ್ದರಿಂದ ಜಾತ್ರೆಗೆ ಬರುವ ಭಕ್ತರು ಅತಂಕಕ್ಕೂಳಗಾಗಿದ್ದಾರೆ.