ಮಂಡ್ಯ ನಗರದ ಗಾಂಧಿ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ವತಿಯಿಂದ ನವೆಂಬರ್ 17ರ ಭಾನುವಾರ ಬೆಳಿಗ್ಗೆ 10-30ಕ್ಕೆ ಕನ್ನಡಹಬ್ಬ, ಕವಿಗೋಷ್ಠಿ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಡಾ.ಜೀಶಂಪ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಎಸ್ ಕೃಷ್ಣ ಸ್ವರ್ಣಸಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದು, “ಮೈಸೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮಾಜಿ ಸದಸ್ಯ ಡಾ. ಈ ಸಿ ನಿಂಗರಾಜೇಗೌಡ ಕನ್ನಡಹಬ್ಬ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ. ಹೆಚ್ ಎಸ್ ಮುದ್ದೇಗೌಡ ಅಧ್ಯಕ್ಷತೆ ವಹಿಸಲಿದ್ದು, ಸುವರ್ಣ ಕರ್ನಾಟಕ ಸೇವಾರತ್ನ ಪ್ರಶಸ್ತಿಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಬಿ ಪಿ ಪ್ರಕಾಶ್ ಪ್ರಶಸ್ತಿ ಪ್ರದಾನ ಮಾಡುವರು. ಬೆಂಗಳೂರಿನ ಕರ್ನಾಟಕ ರಾಜ್ಯ ಸಾಫ್ಟ್‌ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಡಾ.ಗಂಗಾಧರ ರಾಜು ಕನ್ನಡರತ್ನ ಪ್ರಶಸ್ತಿ ಪ್ರದಾನ ಮಾಡುವರು” ಎಂದರು.
“ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿಯನ್ನು ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್ ಕೃಷ್ಣಸ್ವರ್ಣಸಂದ್ರ ಪ್ರದಾನ ಮಾಡುವರು. ಡಾ. ಜೀಶಂಪ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷರಾದ ಮಾಡ್ಲ ಅರಸಯ್ಯ ಕವಿಗಳಿಗೆ ನೆನಪಿನ ಕಾಣಿಕೆ ನೀಡುವರು. ಬೆಂಗಳೂರಿನ ಸಮಾಜಸೇವಕಿ ಡಾ.ಹೇಮಾ ರೆಡ್ಡಿ ಪ್ರಮಾಣ ಪತ್ರ ವಿತರಣೆ ಮಾಡುವರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘ ದಕ್ಷಿಣ ವಲಯ ಅಧ್ಯಕ್ಷ ಮಂಗಲ ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡುವರು” ಎಂದು ತಿಳಿಸಿದರು.
ಸುವರ್ಣ ಕರ್ನಾಟಕ ಸೇವಾರತ್ನ ಪ್ರಶಸ್ತಿ ಪುರಸ್ಕೃತರು: ಡಾ.ಹೇಮಾ ರೆಡ್ಡಿ(ಸಮಾಜಸೇವೆ), ಡಿ ಜಯರಾಮು(ಸಮಾಜಸೇವೆ), ಡಾ ಗಂಗಾಧರರಾಜು(ಕ್ರೀಡೆ), ಸುರೇಶ್ ಕಂಠಿ(ಜನಪರ), ಬನ್ನಂಗಾಡಿ ಸಿದ್ದಲಿಂಗಯ್ಯ(ಸಂಘಟನೆ), ಹೆಚ್ ಎಂ ಸಿದ್ದೇಗೌಡ(ಉದ್ಯಮಿ), ಹೆಚ್ ಎಂ ವೆಂಕಟೇಶ್(ಸಮಾಜಸೇವೆ), ಡಾ ಹೊನ್ನೇಗೌಡ(ಸಾಹಿತ್ಯ), ಕೀಲಾರ ಕೃಷ್ಣ(ಸಹಕಾರ), ಬಿ ಜಿ ಶಿವರಾಮ್(ಸಮಾಜಸೇವೆ).
ಕನ್ನಡಹಬ್ಬ ಪುರಸ್ಕೃತರು: ಕಿಕ್ಕೇರಿ ನಾಗರಾಜು(ಶಿಕ್ಷಣ), ಹೆಚ್ ಆರ್ ಧನಂಜಯ(ಶಿಕ್ಷಣ), ಕೆ ವಿಜಯಕುಮಾರ್(ಮುದ್ರಣ), ಡಾ.ಸಿ ವಾರಯ್ಯ(ಶಿಕ್ಷಣ, ಸಾಹಿತ್ಯ), ಮಂಡ್ಯ ಯಶು(ಭರತನಾಟ್ಯ), ಮಂಜುಳಾ ಆಲದಹಳ್ಳಿ(ಗಾಯಕಿ-ಜನಪದ ಕಲಾವಿದೆ), ಎ ವಿ ಕುಮಾರ್(ಜನಪದ ಕಲೆ), ವಿಶ್ವನಾಥ್‌ಗೌಡ(ಸಾಹಿತ್ಯ), ಎನ್ ಶ್ರೀಕಂಠೇಶ್ವರ ಶರ್ಮ(ಸಂಕೀರ್ಣ), ಆರ್ ಮಂಗಳ(ಸಂಘಟನೆ, ಸಮಾಜಸೇವೆ), ಡಾ. ಶಿವರುದ್ರಪ್ಪ(ಶಿಕ್ಷಣ), ಜನಾರ್ಧನ ಹೂತಗೆರೆ(ಹೋರಾಟ), ಪ್ರಮಿಳಾ ಕುಮಾರಿ(ಹವ್ಯಾಸಿ ರಂಗಭೂಮಿ), ಶಿವಮಾದೇಗೌಡ(ಶಿಕ್ಷಣ), ಎಂ ಎಂ ಶಿವನಂಜಯ್ಯ(ರಂಗಕರ್ಮಿ).
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ವ್ಯಕ್ತಿ ಕುರ್ಚಿಯಲ್ಲಿ ಕುಳಿತಿದ್ದಕ್ಕೆ ಬ್ರಾಹ್ಮಣನ ದಾಂಧಲೆ
ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿ ಪುರಸ್ಕೃತರು: ಸೀತಾಲಕ್ಷ್ಮಿವರ್ಮ(ಮಂಗಳೂರು), ಬಿ ಎನ್ ರವಿ(ಬೆಂಗಳೂರು), ಮುತ್ತುರಾಜು ಚಿನ್ನಹಳ್ಳಿ(ತುಮಕೂರು), ಹರವು ಶ್ರೀನಿವಾಸ್(ರಂಗಭೂಮಿ), ಸುವರ್ಣ ಮಾಳಗಿಮನಿ(ಬಂಕಾಪುರ), ಶ್ವೇತ ಡಿ ಪ್ರಕಾಶ್(ಪಾಂಡವಪುರ), ವಸಂತಕುಮಾರಿ(ಬೆಂಗಳೂರು), ಬಸಪ್ಪ(ಬೆಂಗಳೂರು), ಚಂದ್ರು(ಬೆಸಗರಹಳ್ಳಿ), ಮಂಜುನಾಥ್ ಹಿರೀಬಿಳತಿ(ಹಾಸನ).
ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 66 ಮಂದಿ ಕವನ ವಾಚಿಸುವರು ಎಂದು ವೇದಿಕೆಯ ರಾಜ್ಯಾಧ್ಯಕ್ಷ ಎಸ್ ಕೃಷ್ಣ ಸ್ವರ್ಣಸಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.