ಎಂಇಎಸ್ ಕನ್ನಡಿಗರ ವಿರುದ್ಧ ನಡೆಸುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಇಂದು(ಮಾ.22) ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳು ಅಖಂಡ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿತ್ತು. ಕೆಲವು ಜಿಲ್ಲೆಗಳಲ್ಲಿ ಭಾಗಶಃ ಯಶಸ್ಚಿಯಾಗಿದ್ದರೆ, ಹಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜ್ಯದ ಕಡಲ ನಗರ ಮಂಗಳೂರಿಗೆ ‘ಕರ್ನಾಟಕ ಬಂದ್’ ಬಿಸಿ ತಟ್ಟಿಲ್ಲ. ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಬಸ್ ಸಂಚಾರ ಪ್ರತಿದಿನದಂತೆ ಯಥಾಸ್ಥಿತಿಯಲ್ಲಿದೆ.
ಕರ್ನಾಟಕ ಬಂದ್‌ಗೆ ದ.ಕ.ಜಿಲ್ಲೆಯಲ್ಲಿ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಖಾಸಗಿ ಸಿಟಿ ಬಸ್, ಸರ್ವಿಸ್ ಬಸ್, ಎಕ್ಸ್‌ಪ್ರೆಸ್ ಬಸ್ ಸೇರಿದಂತೆ ಕೆಎಸ್‌ಆರ್‌ಟಿಸಿ ಕೂಡ ಎಂದಿನಂತೆ ಸಂಚಾರದಲ್ಲಿ ನಿರತವಾಗಿದೆ.
ಜಿಲ್ಲೆಯಲ್ಲಿ ಹೊಟೇಲ್, ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು, ವ್ಯಾಪಾರ-ವಹಿವಾಟುಗಳು ಏನೂ ತೊಂದರೆ ಇಲ್ಲದೆ ಸಾಂಗವಾಗಿ ನಡೆಯುತ್ತಿದೆ.
ಕರ್ನಾಟಕ ಬಂದ್‌ಗೆ ದ.ಕ.ಜಿಲ್ಲೆಯಲ್ಲಿ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಖಾಸಗಿ ಸಿಟಿ, ಸರ್ವಿಸ್, ಎಕ್ಸ್‌ಪ್ರೆಸ್ ಬಸ್ ಸೇರಿದಂತೆ ಕೆಎಸ್‌ಆರ್‌ಟಿಸಿ ಕೂಡ ಎಂದಿನಂತೆ ಸಂಚಾರದಲ್ಲಿ ನಿರತವಾಗಿದೆ. ಜಿಲ್ಲೆಯಲ್ಲಿ ಹೊಟೇಲ್, ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು, ವ್ಯಾಪಾರ-ವಹಿವಾಟುಗಳು ಸಾಂಗವಾಗಿ ನಡೆಯುತ್ತಿದೆ. pic.twitter.com/RCbJ6RZCTz
— eedina.com ಈ ದಿನ.ಕಾಮ್ (@eedinanews) March 22, 2025
‘ನೈತಿಕ ಬೆಂಬಲವಷ್ಟೇ’ ಎಂದ ದ.ಕ. ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘ
ಶನಿವಾರ ಕನ್ನಡಪರ ಸಂಘಟನೆಗಳಿಂದ ‘ಕರ್ನಾಟಕ ಬಂದ್’ ಗೆ ಕರೆ ವಿಚಾರವಾಗಿ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಆಝೀಝ್ ಪರ್ತಿಪ್ಪಾಡಿ, ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ‘ನೈತಿಕ ಬೆಂಬಲವಷ್ಟೇ’ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಬೆಂಬಲ ಇಲ್ಲ. ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದಿಂದ ಕೇವಲ ನೈತಿಕ ಬೆಂಬಲವಷ್ಟೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗುವುದಕ್ಕೆ ಬಸ್ ವ್ಯವಸ್ಥೆ ಮಾಡುತ್ತಿದ್ದೇವೆ. ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದಿಂದ ಎಂದಿನಂತೆ ಬಸ್ಸುಗಳ ಸಂಚಾರ ನಡೆಯುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ಹೇಳಿಕೆ ನೀಡಿದ್ದಾರೆ.
