ಕಾರವಾರ | ರಸ್ತೆ ಸೌಲಭ್ಯದ ಕೊರತೆ: ಕಟ್ಟಿಗೆಗೆ ಮೃತದೇಹ ಕಟ್ಟಿ ಕೊಂಡೊಯ್ದ ಗ್ರಾಮಸ್ಥರು!

Date:

Advertisements

ಸರಿಯಾದ ರಸ್ತೆ ಸೌಲಭ್ಯ ಇಲ್ಲದ ಕಾರಣಕ್ಕೆ ಗ್ರಾಮಸ್ಥರು, ಮೃತಪಟ್ಟ ಗ್ರಾಮದ ವ್ಯಕ್ತಿಯೋರ್ವನ ಮೃತದೇಹವನ್ನು ಕಟ್ಟಿಗೆಗೆ ಹಗ್ಗದಿಂದ ಕಟ್ಟಿ ಹೆಗಲಲ್ಲಿ ಕೊಂಡೊಯ್ದ ಮನಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಕಾರವಾರ ನಗರಸಭೆ ವ್ಯಾಪ್ತಿಯ ಗುಡ್ಡಹಳ್ಳಿಯಲ್ಲಿ ರಸ್ತೆ ಸರಿ ಇಲ್ಲ ಎಂದು ಕಟ್ಟಿಗೆಗೆ ಮೃತದೇಹ ಕಟ್ಟಿ ರವಾನಿಸಲಾಗಿದೆ. ನಗರಕ್ಕೆ ಹೊಂದಿಕೊಂಡಿರುವ ಗುಡ್ಡದ ಮೇಲಿನ ಗ್ರಾ‌ಮ ಗುಡ್ಡಳ್ಳಿಗೆ ಮೃತ ವ್ಯಕ್ತಿಯ ಶವವನ್ನು ಕಟ್ಟಿಗೆಯ ತುಂಡಿಗೆ ಕಟ್ಟಿ, ನಾಲ್ಕು ಜನ ಹೆಗಲ ಮೇಲೆ ಹೊತ್ತು ಮನೆಗೆ ಸಾಗಿಸಿ, ನಂತರ ಅಂತಿಮ ಸಂಸ್ಕಾರ ಮಾಡಿದ್ದಾರೆ.

ರಸ್ತೆ 10

ಕಾರವಾರ ನಗರಸಭೆ 31ನೇ ವಾರ್ಡಿಗೆ ಸೇರಿದ ಗುಡ್ಡಳ್ಳಿ ಗ್ರಾಮದ ನಿವಾಸಿ ರಾಮ ಎಂ‌ ಗೌಡ ಎಂಬುವವರು ಅನಾರೋಗ್ಯದ ಕಾರಣ ಶುಕ್ರವಾರ ರಾತ್ರಿ ಕಾರವಾರ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಹೃದಯಾಘಾತವಾಗಿ ಅಸುನೀಗಿದ್ದು, ಶವವನ್ನು ಗುಡ್ಡಳ್ಳಿಯ ಕೆಳಭಾಗದಲ್ಲಿ ರಸ್ತೆಯ ತನಕ ಆ್ಯಂಬುಲೆನ್ಸ್‌ನಲ್ಲಿ ತರಲಾಯಿತು.

Advertisements

ಬೈಕ್ ಮಾತ್ರ ಸಾಗುವ ಡಾಂಬರ್ ಇಲ್ಲದ , ಜಲ್ಲಿ ಮಾತ್ರ ಹಾಕಿದ ರಸ್ತೆಯಲ್ಲಿ ಸಾಗುವಾಗ ಗ್ರಾಮದ ಯುವಕರು ಒಂದು ಉದ್ದ ಕಟ್ಟಿಗೆಯ ತುಂಡಿಗೆ ಶವವನ್ನು ಬೆಡ್ ಶೀಟ್‌ನಲ್ಲಿ ಸುತ್ತಿ, ಹಗ್ಗದಲ್ಲಿ ಬಿಗಿದು ಮನೆಗೆ ಕೊಂಡೊಯ್ದು ಶವಸಂಸ್ಕಾರ ಮಾಡಿದ್ದಾರೆ. ಈ ರೀತಿ ಶವ ಸಾಗಿಸಿದ ದೃಶ್ಯ ಮನ ಕಲಕುವಂತಿತ್ತು.

ನಗರಸಭಾ ವ್ಯಾಪ್ತಿಯ ಗುಡ್ಡಳ್ಳಿ ಗ್ರಾಮದ ಗುಡ್ಡದ ಎತ್ತರದಲ್ಲಿದ್ದು, ಇಲ್ಲಿ 30 ರಿಂದ 40 ಕುಟುಂಬಗಳು ನೆಲೆಸಿವೆ. 250 ಜನ ಮತದಾರರಿದ್ದಾರೆ. ಗುಡ್ಡ ಪ್ರದೇಶದ ಹಾಗೂ ಅರಣ್ಯ ಇಲಾಖೆಯ ಅಧೀನದಲ್ಲಿ ರಸ್ತೆ ಇರುವ ಕಾರಣ
ರಸ್ತೆ ಡಾಂಬರೀಕರಣ ಸಾಧ್ಯವಾಗಿಲ್ಲ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇದೆ. ಕಚ್ಚಾ ರಸ್ತೆ ಇದೆ. ಆದರೆ, ಅಲ್ಲಿಗೆ ಆ್ಯಂಬುಲೆನ್ಸ್‌ ತಲುಪುವ ಸ್ಥಿತಿ ಇಲ್ಲ. ಹೀಗಾಗಿ, ಜನರು, ವಿದ್ಯಾರ್ಥಿಗಳು ಕಾಲ್ನಡಿಗೆ ಅಥವಾ ಬೈಕಿನಲ್ಲಿ ಕಾರವಾರ ತಲುಪುತ್ತಾರೆ ಎಂಬ ಮಾಹಿತಿ ದೊರಕಿದೆ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ರಸ್ತೆಯ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮ
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X