ಭಟ್ಕಳ: ಗಲಭೆಗಳ ನೆರಳಿನಿಂದ…. ಸೌಹಾರ್ದದ ಹುಡುಕಾಟದವರೆಗೆ

Date:

1993ರ ಗಲಭೆಯಿಂದ 2026ರ ಮುರಿನಕಟ್ಟೆ ವಿವಾದದವರೆಗೆ ಭಟ್ಕಳದ ಪಯಣ ಒಂದು ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ. ಮುಂದಿನ ತಲೆಮಾರಿಗೆ ಭಟ್ಕಳ ಗಲಭೆಗಳ ಪಟ್ಟಣವಾಗಿ ಉಳಿಯುತ್ತದೆಯೇ? ಅಥವಾ ಸೌಹಾರ್ದ ಮತ್ತು ಅಭಿವೃದ್ಧಿಯ ಮಾದರಿಯಾಗಿ ಹೊರಹೊಮ್ಮುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರ ನೀಡಬೇಕಿರುವುದು ಭಟ್ಕಳದ ಜನರೇ..... ಹೊರತು, ರಾಜಕೀಯ ಪಕ್ಷಗಳಲ್ಲ. 

ಅರಬ್ಬೀ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಲೇ ಇರುತ್ತವೆ. ಕಾಲ ಬದಲಾಗುತ್ತದೆ. ಸಾಮ್ರಾಜ್ಯಗಳು ಬರುತ್ತವೆ, ಹೋಗುತ್ತವೆ. ರಾಜಕೀಯ ನಾಯಕರು ಬದಲಾಗುತ್ತಾರೆ. ಆದರೆ ಕೆಲವು ಪಟ್ಟಣಗಳು ಮಾತ್ರ ತಮ್ಮ ಇತಿಹಾಸದ ಭಾರವನ್ನು ಹೊತ್ತುಕೊಂಡೇ ಸಾಗುತ್ತವೆ. ಅಂತಹ ಪಟ್ಟಣಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳವೂ ಒಂದು.

- Advertisement -

ಇಂದು ದೇಶದ ಯಾವುದೇ ಭಾಗದಲ್ಲಿ ʼಭಟ್ಕಳʼ ಎಂಬ ಹೆಸರು ಕೇಳಿದರೆ ಅನೇಕರಿಗೆ ಮೊದಲು ನೆನಪಾಗುವುದು ಯಾಸಿನ್ ಭಟ್ಕಳ, ಇಂಡಿಯನ್ ಮುಜಾಹಿದೀನ್, ಕೋಮು ಗಲಭೆಗಳು ಮತ್ತು ರಾಜಕೀಯ ಧ್ರುವೀಕರಣ. ಆದರೆ ಭಟ್ಕಳದ ಕಥೆ ಅಷ್ಟಕ್ಕೇ ಸೀಮಿತವಲ್ಲ; ಅದರ ಇತಿಹಾಸ ಅದಕ್ಕಿಂತ ಬಹಳ ದೊಡ್ಡದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಒಂದು ಕಾಲದಲ್ಲಿ ವ್ಯಾಪಾರ, ಶಿಕ್ಷಣ, ಸೌಹಾರ್ದ ಮತ್ತು ಸಂಸ್ಕೃತಿಯ ಕೇಂದ್ರವಾಗಿದ್ದ ಈ ಕರಾವಳಿ ಪಟ್ಟಣ ಹೇಗೆ ದೇಶದ ಅತ್ಯಂತ ವಿವಾದಿತ ಸಾಮಾಜಿಕ-ರಾಜಕೀಯ ಅಧ್ಯಯನದ ವಿಷಯವಾಯಿತು? ಎಂಬುದಕ್ಕೆ ಉತ್ತರ ಹುಡುಕಲು ಇತಿಹಾಸದ ಪುಟಗಳನ್ನು ತಿರುಗಿಸಬೇಕು.

ಭಟ್ಕಳ ಪಶ್ಚಿಮ ಕರಾವಳಿಯ ಪ್ರಾಚೀನ ಬಂದರು ಪಟ್ಟಣಗಳಲ್ಲಿ ಒಂದು. ಮಧ್ಯಕಾಲೀನ ಪ್ರವಾಸಿಗ ಇಬ್ನ್ ಬಟೂಟ ಕೂಡ ತನ್ನ ಪ್ರವಾಸ ವೃತ್ತಾಂತಗಳಲ್ಲಿ ಭಟ್ಕಳವನ್ನು ಉಲ್ಲೇಖಿಸಿದ್ದಾನೆ. ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಪೋರ್ಚುಗೀಸರು, ಕೆಳದಿ ಅರಸರು, ಹೈದರ್ ಅಲಿ, ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರು ಈ ಪ್ರದೇಶದ ಮೇಲೆ ತಮ್ಮ ಆಡಳಿತದ ಗುರುತು ಮೂಡಿಸಿದ್ದಾರೆ.

ಕೇತಪ್ಪಯ್ಯ ನಾರಾಯಣ ದೇವಸ್ಥಾನ, ಪಾರ್ಶ್ವನಾಥ ಜೈನ ಬಸದಿ, ಜಾಮಿಯಾ ಮಸೀದಿ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳು ಈ ಇತಿಹಾಸಕ್ಕೆ ಸಾಕ್ಷಿಯಾಗಿವೆ. ಅರಬ್ ರಾಷ್ಟ್ರಗಳು, ಪರ್ಷಿಯಾ, ಆಫ್ರಿಕಾ ಮತ್ತು ದಕ್ಷಿಣ ಭಾರತದ ನಡುವೆ ಭಟ್ಕಳ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು.

ಭಟ್ಕಳದ ಸಾಮಾಜಿಕ ಬದುಕನ್ನು ಅರ್ಥಮಾಡಿಕೊಳ್ಳಲು ನವಾಯತ್ ಸಮುದಾಯದ ಇತಿಹಾಸ ತಿಳಿಯಬೇಕು. ಅರಬ್ ವ್ಯಾಪಾರಿಗಳು ಮತ್ತು ಸ್ಥಳೀಯ ಸಮುದಾಯಗಳ ಸಂಪರ್ಕದಿಂದ ರೂಪುಗೊಂಡ ಈ ಸಮುದಾಯ ಶಿಕ್ಷಣ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಗಲ್ಫ್ ರಾಷ್ಟ್ರಗಳಿಗೆ ವಲಸೆ ಹೋದ ಸಾವಿರಾರು ಕುಟುಂಬಗಳು ಆರ್ಥಿಕವಾಗಿ ಬಲಿಷ್ಠವಾದವು.

1919ರಲ್ಲಿ ಸ್ಥಾಪನೆಯಾದ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆದಿತ್ತು. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸಿತು.

ಒಮ್ಮೆ ಭಟ್ಕಳದಲ್ಲಿ ಹಿಂದೂ-ಮುಸ್ಲಿಂ ಸಹಬಾಳ್ವೆಯ ವಿಶಿಷ್ಟ ಸಂಸ್ಕೃತಿ ಇತ್ತು ಎಂದು ಸ್ಥಳೀಯ ಹಿರಿಯರು ಹೇಳುತ್ತಾರೆ. ರಾಮನವಮಿ ರಥೋತ್ಸವ ಮುಸ್ಲಿಂ ಪ್ರದೇಶಗಳ ಮೂಲಕ ಸಾಗುವುದು ಸಾಮಾನ್ಯವಾಗಿತ್ತು. ವ್ಯಾಪಾರಿಗಳು ಒಂದೇ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿದ್ದರು. ಭಿನ್ನತೆಗಳಿದ್ದರೂ ಸಂಬಂಧಗಳಲ್ಲಿ ಪರಸ್ಪರ ಗೌರವವಿತ್ತು.

ಆದರೆ 1990ರ ದಶಕದಲ್ಲಿ ಪರಿಸ್ಥಿತಿ ಬದಲಾಗತೊಡಗಿತು. ಅಯೋಧ್ಯೆ ಚಳವಳಿ, ಬಾಬರಿ ಮಸೀದಿ ವಿವಾದ ಮತ್ತು ದೇಶಾದ್ಯಂತ ಹೆಚ್ಚುತ್ತಿದ್ದ ಧಾರ್ಮಿಕ ರಾಜಕೀಯದ ಪರಿಣಾಮ ಭಟ್ಕಳಕ್ಕೂ ತಲುಪಿತು. ಈ ಅವಧಿಯಲ್ಲಿ ವೈದ್ಯರಾಗಿದ್ದ ಡಾ. ಯು. ಚಿತ್ತರಂಜನ್ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದರು. ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿದ್ದ ಅವರು ಎಲ್ಲ ಸಮುದಾಯಗಳಲ್ಲೂ ವಿಶ್ವಾಸ ಗಳಿಸಿದ್ದರು. ಅವರ ಜನಪ್ರಿಯತೆಯೊಂದಿಗೆ ಭಟ್ಕಳದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಸಂಘಟನೆಗಳಿಗೆ ಬಲವಾದ ನೆಲೆ ಸಿಕ್ಕಿತು.

1992ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಉದ್ವಿಗ್ನತೆ ಹೆಚ್ಚಾಯಿತು. 1993ರ ರಾಮನವಮಿ ರಥೋತ್ಸವದ ವೇಳೆ ನಡೆದ ಕಲ್ಲು ತೂರಾಟ ಗಲಭೆಗೆ ತಿರುಗಿತು. ಹಲವು ದಿನಗಳ ಕಾಲ ಹಿಂಸಾಚಾರ ಮುಂದುವರಿಯಿತು. ಮೂಲಗಳ ಪ್ರಕಾರ 17ರಿಂದ 19 ಮಂದಿ ಸಾವನ್ನಪ್ಪಿದರು. ನೂರಾರು ಕುಟುಂಬಗಳು ಹಾನಿಗೊಳಗಾದವು ಎಂಬುದು ತಿಳಿದುಬಂದಿತ್ತು.

ಈ ಗಲಭೆಯ ನಂತರ ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಲಾಯಿತು. ಕರಾವಳಿ ಭದ್ರತೆ, ಕೋಮು ಸಂಘರ್ಷದ ಹಿನ್ನೆಲೆ ಮತ್ತು ಗುಪ್ತಚರ ವ್ಯವಸ್ಥೆಯ ಬಲವರ್ಧನೆ ಕುರಿತು ಆಯೋಗ ಹಲವು ಶಿಫಾರಸುಗಳನ್ನು ಮಾಡಿತ್ತು. ಆದರೆ ವರದಿಯ ಎಲ್ಲ ಅಂಶಗಳು ಸಾರ್ವಜನಿಕ ಚರ್ಚೆಗೆ ಬಂದಿಲ್ಲ ಎಂಬ ಆರೋಪ ಇಂದಿಗೂ ಕೇಳಿಬರುತ್ತದೆ.

1994ರ ಚುನಾವಣೆಯಲ್ಲಿ ಡಾ. ಚಿತ್ತರಂಜನ್ ಜಯ ಸಾಧಿಸಿದರು. ಇದು ಕೇವಲ ಒಬ್ಬ ಅಭ್ಯರ್ಥಿಯ ಗೆಲುವಲ್ಲ; ಕರಾವಳಿ ರಾಜಕೀಯದಲ್ಲಿ ಹೊಸ ಅಧ್ಯಾಯದ ಆರಂಭವಾಗಿತ್ತು. ಆದರೆ 1996ರ ಏಪ್ರಿಲ್ 10ರಂದು ಡಾ. ಚಿತ್ತರಂಜನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ರಾಜ್ಯದಲ್ಲೇ ಅಧಿಕಾರದಲ್ಲಿದ್ದ ಶಾಸಕರೊಬ್ಬರ ಹತ್ಯೆ ಇದೇ ಮೊದಲ ಘಟನೆ ಎಂಬ ಕುಖ್ಯಾತಿಗೆ ಪಡೆಯಿತು. ಸ್ಥಳೀಯ ಪೊಲೀಸ್, ಸಿಒಡಿ ಮತ್ತು ಸಿಬಿಐ ತನಿಖೆ ನಡೆಸಿದರೂ ಹಂತಕರು ಯಾರು? ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ.

ಚಿತ್ತರಂಜನ್ ಅವರ ಹತ್ಯೆಯ ನಂತರ ಯುವ ನಾಯಕನಾಗಿದ್ದ ಅನಂತಕುಮಾರ್ ಹೆಗಡೆ ಇದರ ಲಾಭ ಪಡೆದು ವೇಗವಾಗಿ ಮುನ್ನೆಲೆಗೆ ಬಂದರು. 1996ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮುಂದಿನ ಮೂರು ದಶಕಗಳ ಕಾಲ ಉತ್ತರ ಕನ್ನಡದ ರಾಜಕೀಯದಲ್ಲಿ ಪ್ರಭಾವ ಬೀರಿದರು.

2004ರಲ್ಲಿ ಬಿಜೆಪಿ ಕಾರ್ಯಕರ್ತ ತಿಮ್ಮಪ್ಪ ಹೊನ್ನಪ್ಪ ನಾಯ್ಕ್ ಹತ್ಯೆಯಾದರು. ಈ ಪ್ರಕರಣವೂ ದೊಡ್ಡ ಸಂಚಲನ ಸೃಷ್ಟಿಸಿತು. ಆದರೆ ಇದು ಇಂದಿಗೂ ಬಗೆಹರಿಯದ ಪ್ರಕರಣವಾಗಿಯೇ ಉಳಿದಿದೆ.

2000ರ ದಶಕದ ಬಳಿಕ ಭಟ್ಕಳ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಕಾರಣಕ್ಕೆ ಸುದ್ದಿಯಾಯಿತು. ಇಂಡಿಯನ್ ಮುಜಾಹಿದೀನ್‌ಗೆ ಸಂಬಂಧಿಸಿದ ತನಿಖೆಗಳಲ್ಲಿ ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ಮತ್ತು ಯಾಸಿನ್ ಭಟ್ಕಳ ಹೆಸರುಗಳು ಪದೇಪದೆ ಕೇಳಿಬಂದವು. ಕೆಲವರ ಕೃತ್ಯಗಳಿಂದ ಇಡೀ ಪಟ್ಟಣದ ಮೇಲೆ ಅನುಮಾನದ ನೆರಳು ಬಿದ್ದಿತು. ಇದರಿಂದ ಭಟ್ಕಳದ ಸಾಮಾನ್ಯ ಜನರೂ ಸಂಕಷ್ಟ ಅನುಭವಿಸಿದರು. ಉದ್ಯೋಗ, ಮನೆ ಬಾಡಿಗೆ, ವಿದೇಶ ಪ್ರಯಾಣ, ಪಾಸ್‌ಪೋರ್ಟ್ ಪರಿಶೀಲನೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಭಟ್ಕಳದವರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಯಿತು.

ಭಟ್ಕಳದ ಕುರಿತು ಮಾತನಾಡುವಾಗ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವುದು ತುಂಬಾ ಕಠಿಣವಾಗುತ್ತದೆ. ಕೆಲವರು ಮಾಡಿದ ತಪ್ಪಿಗೆ ಇಡೀ ಪಟ್ಟಣವನ್ನು ಅವರ ಹೆಸರಿನಿಂದ ಗುರುತಿಸುವುದು ಯಾವ ನ್ಯಾಯ? ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ರಾಜಕೀಯದ ದೃಷ್ಟಿಯಿಂದಲೂ ಭಟ್ಕಳ ಮಹತ್ವದ ಕ್ಷೇತ್ರವಾಗಿದೆ. 1993ರ ಗಲಭೆ, ಚಿತ್ತರಂಜನ್ ಹತ್ಯೆ, ತಿಮ್ಮಪ್ಪ ನಾಯ್ಕ್ ಹತ್ಯೆ, ಇಂಡಿಯನ್ ಮುಜಾಹಿದೀನ್ ಪ್ರಕರಣ, ಪರೇಶ್ ಮೇಸ್ತಾ ಪ್ರಕರಣ ಮತ್ತು ಇತ್ತೀಚಿನ ಮುರಿನಕಟ್ಟೆ ವಿವಾದದಂತಹ ಘಟನೆಗಳು ಈ ಭಾಗದ ರಾಜಕೀಯವನ್ನು ಪ್ರಭಾವಿಸಿವೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಒಂದು ಬದಲಾವಣೆ ಕಾಣುತ್ತಿದೆ. ಮುರಿನಕಟ್ಟೆ ವಿವಾದದ ವೇಳೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಎರಡೂ ಸಮುದಾಯಗಳ ಹಿರಿಯರು ಎಚ್ಚರಿಕೆಯಿಂದ ನಡೆದುಕೊಂಡರು. ಜನರೂ ವದಂತಿಗಳಿಗೆ ಬಲಿಯಾಗದೆ ಶಾಂತಿ ಕಾಪಾಡುವ ಪ್ರಯತ್ನ ಮಾಡಿದರು.

ಮೂರು ಪಾಠಗಳನ್ನು ಹೇಳುವ ಭಟ್ಕಳದ ಕಥೆ

ಮೊದಲನೆಯದು, ಶಿಕ್ಷಣ ಮತ್ತು ಅಭಿವೃದ್ಧಿ ಎಷ್ಟು ವೇಗವಾಗಿ ಹರಡುತ್ತದಯೊ ಅಷ್ಟೇ ವೇಗವಾಗಿ ಸಮುದಾಯಗಳ ನಡುವಿನ ಅಂತರವು ದಿನಕಳೆದಂತೆ ಕಡಿಮೆಯಾಗುತ್ತದೆ‌.

ಎರಡನೆಯದು, ಬಗೆಹರಿಯದ ಪ್ರಕರಣಗಳಿಗೆ ನ್ಯಾಯ ಸಿಗಬೇಕು. ಸತ್ಯಾಸತ್ಯತೆ ಮತ್ತು ವಾಟ್ಸ್ಯಾಪ್ ಯುನಿವರ್ಸಿಟಿಯಿಂದ ಬರುವ ಪ್ರಚೋದನಾಕಾರಿ ಹೇಳಿಕೆ, ಸುಳ್ಳು ಮಾಹಿತಿಯನ್ನು ನಂಬದೆ ತಾಳ್ಮೆಯಿಂದ ಪರಿಶೀಲಿಸಿದಾಗ ಆಗುವ ಅನಾಹುತಗಳನ್ನು ತಡೆಗಟ್ಟಲು ಸಹಾಯ ಆಗುತ್ತದೆ. ಈ ಸಲ ಮುರಿನಕಟ್ಟೆ ವಿವಾದದಲ್ಲಿ ಇದು ಸಾಬೀತಾಗಿದೆ. ಇಲ್ಲದಿದ್ದರೆ ಸುಳ್ಳು ವದಂತಿಗಳು ಸತ್ಯದ ಸ್ಥಾನ ಪಡೆದು ಮತ್ತೊಮ್ಮೆ ಶಾಂತವಾಗಿದ್ದ ಜಿಲ್ಲೆಯನ್ನು ಹಾಳು ಮಾಡುತ್ತಿದ್ದವು.

ಮೂರನೆಯದು, ರಾಜಕೀಯ ಲಾಭಕ್ಕಾಗಿ ಸಮಾಜವನ್ನು ವಿಭಜಿಸುವ ಪ್ರಯತ್ನಗಳನ್ನು ಗುರುತಿಸುವಂತಹ ಪ್ರಜ್ಞೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು.

ಇದನ್ನೂ ಓದಿದ್ದೀರಾ? ಉಡುಪಿ | ಬೆಲೆ ಏರಿಕೆ ಮೂಲಕ ಜನರಿಗೆ ಸ್ಲೋ ಪಾಯ್ಸನ್: ಮೋದಿ ಸರ್ಕಾರದ ವಿರುದ್ಧ ರಮೇಶ್ ಕಾಂಚನ್ ವಾಗ್ದಾಳಿ

ಭಟ್ಕಳದ ಇತಿಹಾಸ ಕೇವಲ ಗಲಭೆಗಳ ಇತಿಹಾಸವಲ್ಲ; ಅದು ವ್ಯಾಪಾರದ ಇತಿಹಾಸ, ಶಿಕ್ಷಣದ ಇತಿಹಾಸ, ನವಾಯತ್ ಸಂಸ್ಕೃತಿಯ ಇತಿಹಾಸ, ಸಹಬಾಳ್ವೆಯ ಇತಿಹಾಸ ಮತ್ತು ತನ್ನ ಕಳೆದುಹೋದ ಗುರುತನ್ನು ಮರಳಿ ಪಡೆಯಲು ಹೋರಾಡುತ್ತಿರುವ ಒಂದು ಪಟ್ಟಣದ ಇತಿಹಾಸ.

1993ರ ಗಲಭೆಯಿಂದ 2026ರ ಮುರಿನಕಟ್ಟೆ ವಿವಾದದವರೆಗೆ ಭಟ್ಕಳದ ಪಯಣ ಒಂದು ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ.
ಮುಂದಿನ ತಲೆಮಾರಿಗೆ ಭಟ್ಕಳ ಗಲಭೆಗಳ ಪಟ್ಟಣವಾಗಿ ಉಳಿಯುತ್ತದೆಯೇ? ಅಥವಾ ಸೌಹಾರ್ದ ಮತ್ತು ಅಭಿವೃದ್ಧಿಯ ಮಾದರಿಯಾಗಿ ಹೊರಹೊಮ್ಮುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರ ನೀಡಬೇಕಿರುವುದು ಭಟ್ಕಳದ ಜನರೇ….. ಹೊರತು, ರಾಜಕೀಯ ಪಕ್ಷಗಳಲ್ಲ.

987638ca8c89079659d0147ec8165bb4e02be67aff4a7af8f502ae66e86a5a1e?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...