ಕೊಡಗು | ಭೂಮಿಯಿಂದ ಮೊಳೆತು ಬಂದ ಪಾಟ್ ಕಥೆಗಳು ಕೃತಿ ಬಿಡುಗಡೆ

Date:

Advertisements

ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಡಾ ಕೆ ಕಮಲಾಕ್ಷ ಅವರ ವಿನೂತನ ಕೃತಿ “ಭೂಮಿಯಿಂದ ಮೊಳೆತು ಬಂದ ಪಾಟ್ ಕಥೆಗಳು” ಕೃತಿಯನ್ನು ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್ ಬಿಡುಗಡೆ ಮಾಡಿದರು.

ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಬಳಿಯ ಅರವತೊಕ್ಲು ಗ್ರಾಮದ ಲಕ್ಷ್ಮೇಶ್ವರ ಎಸ್ಟೇಟ್‌ನ ಬೆಳದಿಂಗಳಿನಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಗೋಣಿಕೊಪ್ಪಲಿನ ಜಾನಪದ, ಕಲೆ, ಸಂಸ್ಕೃತಿ ತುಂಬಾ ಅನನ್ಯವಾದದ್ದು. ಪ್ರಾಚೀನ ಜಾನಪದ ಬದುಕಿನ ಆಳಕ್ಕಿಳಿದು ಅಧ್ಯಯನ ಮಾಡಿದರೆ ಅನೇಕ ಮಹತ್ವದ ವಿಚಾರಗಳು ನಮ್ಮ ಅರಿವಿಗೆ ದಕ್ಕುತ್ತದೆ. ವಿವಿಧ ಪ್ರದೇಶಗಳ ಜಾನಪದೀಯ ಅಂಶಗಳನ್ನು ಕಲೆಹಾಕಿ ಪ್ರಸ್ತುತ ಕಾಲಘಟ್ಟಕ್ಕೆ ಇವುಗಳನ್ನು ಸಮನ್ವಯ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಾ ಕೆ ಕಮಲಾಕ್ಷ ಅವರ ಕಾರ್ಯ ಅಭಿನಂದನೀಯ” ಎಂದರು.

“ಡಾ ಕೆ ಕಮಲಾಕ್ಷ ಈ ಹಿಂದೆ ಬರೆದ ʼಕೇರಳದ ಜನಪದ ವೀರ ತಚ್ಚೋಳಿ ಒದೆನನ್ʼ ಹಾಗೂ ʼಅಂಕ ಕಲಿಗಳ ವೀರಗಾಥೆʼ ಅನುವಾದಿತ ಕಲಾಕೃತಿಗಳು ಸಹ ಸಂಗ್ರಹ ಯೋಗ್ಯ ಪುಸ್ತಕಗಳಾಗಿವೆ. ಸಾಹಿತ್ಯ ಕೃತಿಗಳ ಅನುವಾದ ಸುಲಭ ಸಾಧುವಲ್ಲ. ಎರಡು ಭಾಷೆಗಳ ಹಿಡಿತ, ಜತೆಗೆ ಮೂಲ ಕೃತಿ ರಚನಕಾರರ ರಚನೆ ಕುರಿತ ಮನಸ್ಥಿತಿ, ಇವೆಲ್ಲದರ ಮೇಲೆ ಹಿಡಿತ ಹೊಂದಿ ಕೃತಿ ರಚನೆ ಮಾಡಿದ್ದಾರೆ” ಎಂದರು.

Advertisements

ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂಗಳೂರಿನ ‘ದೃಶ್ಯ’ ರಂಗತಂಡದ ಸಂಸ್ಥಾಪಕಿ ಹಾಗೂ ನಿರ್ದೇಶಕಿ ಡಾ ದಾಕ್ಷಾಯಿಣಿ ಭಟ್ ತೃತೀಯ ಕುರಿತು ಒಳನೋಟ ಬೀರಿದರು. ರಂಗಕಲೆಯಲ್ಲಿ ಜಾನಪದ ಕಥೆಗಳನ್ನು ಬಳಸಿಕೊಳ್ಳುವಲ್ಲಿನ ಅಗತ್ಯತೆಗಳನ್ನು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು ನಗರದಲ್ಲಿ ಅ. 22 ರಿಂದ ಮೈಸೂರು ಸ್ಯಾಂಡಲ್ ಸಾಬೂನು ಮೇಳ : ಕೆ. ಎಸ್. ಗಂಗಪ್ಪ

ಕೇಂದ್ರ ಸಾಹಿತ್ಯ ಅಕಾಡೆಮಿಯ ಬೆಂಗಳೂರು ವಲಯ ನಿವೃತ್ತ ಕಾರ್ಯದರ್ಶಿ ಮಹಾಲಿಂಗೇಶ್ವರ ಎಸ್ ಪಿ ಲೇಖಕರ ಬರವಣಿಗೆಗಳ ಕುರಿತು ಮಾತನಾಡಿ ಶುಭ ಹಾರೈಸಿದರು.

ಸುಳ್ಯದ ಉಪನ್ಯಾಸಕ ಲೇಖಕ ಡಾ ಸುಂದರ ಕೆನಾಜೆ ಜಾನಪದ ವೈವಿಧ್ಯ, ಭಾಷಾ ವೈವಿಧ್ಯ, ವಿವಿಧ ಸಾಂಸ್ಕೃತಿಕ ಮಜಲುಗಳು ಎಲ್ಲವೂ ಸೇರಿ ಹೇಗೆ ನಮ್ಮ ಸಮಾಜವನ್ನು ಆರೋಗ್ಯವಂತವಾಗಿಡಲು ಸಾಧ್ಯ ಎಂಬುದರ ಕುರಿತು ಸವಿವರವಾಗಿ ತಿಳಿಸಿದರು.

ಲಕ್ಷ್ಮೇಶ್ವರ ಎಸ್ಟೇಟ್ ಮಾಲೀಕ ಹಾಗೂ ಕೃತಿಗೆ ಆರ್ಥಿಕ ಸಹಾಯ ನೀಡಿದ್ದ ಪಿ ಆರ್ ಗಾಂಧಿರಾವ್, ಸುಭಾಷ್ ಕಾರೇಕಾಡ್,
ಸಾಹಿತಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X