ಕೊಡಗು ಜಿಲ್ಲೆಯ ಗೋಣಿಕೊಪ್ಪಲ್‌ನಲ್ಲಿ ಹೋಟೆಲ್ ಇದ್ದ ಕಟ್ಟಡವೊಂದು ದಿಢೀರನೆ ಕುಸಿತಗೊಂಡ ಘಟನೆ ಗುರುವಾರ(ಜೂನ್ 20) ಮಧ್ಯಾಹ್ನದ ವೇಳೆ ನಡೆದಿರುವುದಾಗಿ ವರದಿಯಾಗಿದೆ.
ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಅಂಬೂರ್ ಧಮ್ ಬಿರಿಯಾನಿ ಹೋಟೆಲ್ ಇದ್ದ ಕಟ್ಟಡ ಇಂದು ದಿಢೀರನೆ ಕುಸಿದು ಬಿದ್ದು ಹೋಟೆಲ್‌ನಲ್ಲಿದ್ದ ಕಾರ್ಮಿಕರು, ಊಟಕ್ಕೆ ತೆರಳಿದ್ದ ಗ್ರಾಹಕರು ಸಿಲುಕಿಕೊಂಡ ಘಟನೆ ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸರು ಧಾವಿಸಿದ್ದಾರೆ.
ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಅಂಬೂರ್ ಧಮ್ ಬಿರಿಯಾನಿ ಹೊಟೇಲ್ ಇದ್ದ ಕಟ್ಟಡ ಇಂದು ದಿಢೀರನೆ ಕುಸಿದು ಬಿದ್ದು ಹೊಟೇಲ್ನಲ್ಲಿದ್ದ ಕಾರ್ಮಿಕರು, ಊಟಕ್ಕೆ ತೆರಳಿದ್ದ ಗ್ರಾಹಕರು ಸಿಲುಕಿಕೊಂಡ ಘಟನೆ ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸರು ಧಾವಿಸಿದ್ದಾರೆ.@ASPonnanna pic.twitter.com/ee6ObpGbea
— eedina.com ಈ ದಿನ.ಕಾಮ್ (@eedinanews) June 20, 2024
ತೀರಾ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಲ್ಲಿ ಒಂದು ಭಾಗದಲ್ಲಿ ಅಂಬುರ್ ಬಿರಿಯಾನಿ ಹೋಟೆಲ್ ಮತ್ತೊಂದರಲ್ಲಿ ಮಟನ್ ಸ್ಟಾಲ್ ಅಂಗಡಿ ಇತ್ತು. ಇದೀಗ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಂಡಿದೆ. ಕಟ್ಟಡ ಕುಸಿತಗೊಂಡ ಬೆನ್ನಲ್ಲೇ ಸ್ಥಳೀಯರು ಕಾರ್ಯ ಪ್ರವೃತ್ತರಾಗಿ ಸಿಲುಕಿದ್ದವರನ್ನು ರಕ್ಷಿಸಲು ಯತ್ನಿಸಿದ್ದಾರೆ.
ಘಟನೆಯ ವೇಳೆ ಹೋಟೆಲ್‌ನಲ್ಲಿ ಗ್ರಾಹಕರ ಸಹಿತ ಸುಮಾರು 7ರಿಂದ 10 ಮಂದಿ ಕಟ್ಟಡದ ಒಳಗಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಗೋಣಿಕೊಪ್ಪಲು ಅಗ್ನಿಶಾಮಕ ದಳದ ಸಿಬ್ಬಂದಿಗಳು, ಕಾರ್ಯಾಚರಣೆ ಸಿಲುಕಿಕೊಂಡವರಲ್ಲಿ ಮೂವರನ್ನು ರಕ್ಷಿಸಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳ ವಿವರಗಳು ಇನ್ನೂ ಲಭ್ಯವಾಗಿಲ್ಲ.
ಇನ್ನೂ ಕೆಲವರು ಕಟ್ಟಡದ ಅಡಿ ಸಿಲುಕಿರುವ ಸಾಧ್ಯತೆ ಇದ್ದು, ಜೆಸಿಬಿ ಮೂಲಕ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವಲ್ಲಿ ನಿರತರಾಗಿದ್ದಾರೆ. ಕಾರ್ಯಾಚರಣೆ ಭರದಿಂದ ಸಾಗಿದೆ.
ಕೊಡಗು | ಗೋಣಿಕೊಪ್ಪಲಿನಲ್ಲಿ ದಿಡೀರ್ ಕುಸಿತಗೊಂಡ ಹೊಟೇಲ್ ಕಟ್ಟಡ
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಕುಸಿತಗೊಂಡ ಕಟ್ಟಡದ ಎದುರು ಬದಿಯಲ್ಲಿದ್ದ ಕಟ್ಟಡವೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ@KodaguConnect @ASPonnanna @SPKodagu @KodaguDC pic.twitter.com/fY4fPYj0qt
— eedina.com ಈ ದಿನ.ಕಾಮ್ (@eedinanews) June 20, 2024
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಕಟ್ಟಡ ಬೀಳುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುಸಿತಗೊಂಡ ಕಟ್ಟಡದ ಎದುರು ಬದಿಯಲ್ಲಿದ್ದ ಕಟ್ಟಡವೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಕಟ್ಟಡ ಬೀಳುತ್ತಿರುವ ದೃಶ್ಯವು ಸೆರೆಯಾಗಿದೆ.
ಕಟ್ಟಡ ಕುಸಿಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಕೆಲವರು ಪ್ರಾಣ ಉಳಿಸಿಕೊಳ್ಳಲು ಓಡುತ್ತಿದ್ದ ದೃಶ್ಯ ಸೆರೆಯಾಗಿದೆ. ಘಟನೆಯಿಂದಾಗಿ ಕಟ್ಟಡದ ಸಮೀಪ ನಿಲ್ಲಿಸಿದ್ದ ಕೆಲವು ವಾಹನಗಳು ಕೂಡ ಜಖಂ ಆಗಿದೆ.
ಗೋಣಿಕೊಪ್ಪಲು ನಗರ ಪ್ರವೇಶಿಸಲು ವಿರಾಜಪೇಟೆಯಿಂದ ಬರುವ ವಾಹನಗಳು ಹೆಚ್ ಟಿ ಪೆಟ್ರೋಲ್ ಬಂಕ್ ಮುಖಾಂತರ ಬೈಪಾಸ್ ರಸ್ತೆ ಸಂಚಾರ ಮಾಡಿ, ಮೈಸೂರು ಹಾಗೂ ಪಾಲಿಬೆಟ್ಟ ರಸ್ತೆಯಿಂದ ಬರುವ ವಾಹನಗಳು ಪೊನ್ನಂಪೇಟೆ ಜಂಕ್ಷನ್ ಗಾಗಿ ಬೈಪಾಸ್ ರಸ್ತೆ ಮುಖಾಂತರ ಸಂಚರಿಸುವಂತೆ ಪೊಲೀಸರು ಮಾಹಿತಿ ನೀಡಿದ್ದಾರೆ.
