ನಾಯಿ ದಾಳಿಯಿಂದ ಮೂರು ಮೇಕೆಗಳು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನ ಕಿರುಗೂರು ಬಳಿಯ ಹೊನ್ನಿಕೊಪ್ಪಲಿನಲ್ಲಿ ನಡೆದಿದೆ.
ಗ್ರಾಮದ ಎಂ ಬಿ ಸಣ್ಣಪ್ಪ ಅವರಿಗೆ ಸೇರಿದ ಮೇಕೆಗಳನ್ನು ಮೇಯಲು ಗದ್ದೆ ಬಯಲಿನಲ್ಲಿ ಕಟ್ಟಿ ಹಾಕಲಾಗಿತ್ತು. ಈ ವೇಳೆಯಲ್ಲಿ ನಾಯಿಗಳು ದಾಳಿ ನಡೆಸಿರಬಹುದೆಂದು ಹೇಳಲಾಗುತ್ತಿದೆ.
ನಾಯಿಗಳು ಮೇಕೆಗಳ ಹೊಟ್ಟೆ, ಕಾಲುಗಳಿಗೆ ಕಚ್ಚಿ ತೀವ್ರ ಗಾಯಗೊಳಿಸಿವೆ. ಗಾಯಗೊಂಡಿರುವ ಮೇಕೆಗಳು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಕ್ರಮವಾಗಿ ಮಣ್ಣು ತೆರವು; ಸೂಕ್ತ ಕ್ರಮಕ್ಕೆ ತಹಶೀಲ್ದಾರ್ ಭರವಸೆ
ತಿತಿಮತಿ ಆರ್‌ಎಫ್ಒ ಗಂಗಾಧರ ಹಾಗೂ ಸಿಬ್ಬಂದಿ ವರ್ಗದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.