ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ಪೆರಂಬಾಡಿಯ ಮಂಗೋಲಿಯ ಖಾಸಗಿ ರೆಸಾರ್ಟ್‌ನ ಕಾಫಿ ತೋಟದಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹೆಬ್ಬಾವು ಕಂಡು ಭಯಪಟ್ಟು,ರೆಸಾರ್ಟ್ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.
ತಕ್ಷಣವೇ ರೆಸಾರ್ಟ್‌ನ ವ್ಯವಸ್ಥಾಪಕರಿಗೆ ಸಿಬ್ಬಂದಿಗಳು ಮಾಹಿತಿ ನೀಡಿದ್ದರಿಂದ, ಹೆಬ್ಬಾವನ್ನು ರಕ್ಷಣೆ ಮಾಡಲು ಆಟೋ ಸ್ನೇಕ್ ಸತೀಶ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಲಾಯಿತು. ಬಳಿಕ ತೋಟದಲ್ಲಿದ್ದ 12 ಅಡಿ ಉದ್ದ 20 ಕೆಜಿ ತೂಕದ ಗಂಡು ಹೆಬ್ಬಾವನ್ನು ರಕ್ಷಣೆ ಮಾಡಿ, ಮಾಕುಟ್ಟದ ಅರಣ್ಯಕ್ಕೆ ಬಿಡಲಾಯಿತು.
ಇದನ್ನು ಓದಿದ್ದೀರಾ? ಮಂಡ್ಯ | ಕೆಆರ್‌ಎಸ್ ಅಣೆಕಟ್ಟೆಯ ಹಳೆಯ ಕ್ರಸ್ಟ್‌ಗೇಟ್ ಕಡಿಮೆ ಬೆಲೆಗೆ ಮಾರಾಟ: ರೈತ ಮುಖಂಡರ ಆರೋಪ
ಆಟೋ ಸ್ನೇಕ್ ಸತೀಶ್ ಅವರು, ವಿರಾಜಪೇಟೆ ನಗರದ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಾವುಗಳನ್ನು ರಕ್ಷಣೆ ಮಾಡಿ ಜನಮೆಚ್ಚುಗೆ ಪಡೆದ ಉರಗ ತಜ್ಞರಾಗಿದ್ದಾರೆ.
