2019ರಲ್ಲಿ ನಡೆದ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕಣದಲ್ಲಿ ಕಾನೂನುಬಾಹಿರವಾಗಿ ಬಾಲಕಿಯ ಫೋಟೋ ಬಳಸಿ ಸುದ್ದಿಮಾಡಿದ್ದ ಪತ್ರಕರ್ತ ಮತ್ತು ಕಾವೇರಿ ಟೈಮ್ಸ್ ಸಂಪಾದಕರಿಗೆ ಒಂದು ವರ್ಷ ಜೈಲು ಹಾಗೂ ₹25,000 ದಂಡ ವಿಧಿಸಿ ವಿರಾಜಪೇಟೆ ನ್ಯಾಯಾಲಯ ತೀರ್ಪು ನೀಡಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆಯ ಸಿದ್ದಾಪುರದ ವಸಂತ್ ಕುಮಾರ್ ಎಂಬಾತ ತಾನು ವರದಿಗಾರನಾಗಿದ್ದ ಕಾವೇರಿ ಟೈಮ್ಸ್ ಪತ್ರಿಕೆಯಲ್ಲಿ ಅಪ್ರಾಪ್ತೆಯ ಫೋಟೋ ಬಳಸಿ ಸುದ್ದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಪ್ರಾಪ್ತೆಯ ಸಹೋದರ ನೀಡಿದ ದೂರಿನ ಮೇರೆಗೆ ವಸಂತ್ ಹಾಗೂ ಕಾವೇರಿ ಟೈಮ್ಸ್ ಪತ್ರಿಕೆಯ ಮಾಲೀಕ ನಂಜಪ್ಪನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮಹಿಳೆ ವಿರುದ್ದ ಅವಹೇಳನಕಾರಿ ಕಾಮೆಂಟ್; ಚಕ್ರವರ್ತಿ ಸೂಲಿಬೆಲೆಗೆ ಪೊರಕೆ ಸ್ವಾಗತ
ಕೊಡಗು ಜಿಲ್ಲೆ ವಿರಾಜಪೇಟೆಯ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುಜಾತ ಅವರು ಪ್ರಕರಣದ ವಿಚಾರಣೆ ಮುಗಿಸಿದ್ದು, ಆರೋಪಿಗಳಾದ ವಸಂತ್ ಹಾಗೂ ನಂಜಪ್ಪ ಎಂಬುವವರಿಗೆ ಒಂದು ವರ್ಷದ ಸಜೆ ಮತ್ತು ₹25,000 ದಂಡ ವಿಧಿಸಿದ್ದಾರೆ.