ಕೊಡಗು ಜಿಲ್ಲೆ ವಿರಾಜಪೇಟೆಯ ಮುಖ್ಯರಸ್ತೆ, ಮಲಬಾರ್ ರಸ್ತೆ ಹಾಗೂ ಮಹಿಳಾ ಸಮಾಜ ರಸ್ತೆಯ ಅಗಲೀಕರಣಕ್ಕೆ ಸರ್ವೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪುರಸಭೆ ಮುಖ್ಯ ಅಧಿಕಾರಿಗಳು ಖುದ್ದು ಹಾಜರಿದ್ದು ಅಳತೆ ಪ್ರಕ್ರಿಯೆ ನಡೆಸಿದರು.
ಮುಖ್ಯ ರಸ್ತೆಯ ಮಧ್ಯಭಾಗದಿಂದ ಎರಡೂ ಕಡೆ 10 ಮೀಟರ್ ಅಳತೆ ಮಾಡಿ ಗುರುತು ಹಾಕಲಾಗಿದೆ. ಬಹುತೇಕ ವರ್ಷಗಳಿಂದ ರಸ್ತೆ ಅಗಲೀಕರಣಕ್ಕೆ ಹೆಜ್ಜೆ ಹಾಕಿದರೂ ಕೂಡ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಅಡೆತಡೆಯಿಂದ ತೀವ್ರ ಕಿರಿದಾಗಿರುವ ವಿರಾಜಪೇಟೆ ನಗರದ ರಸ್ತೆಗಳ ಅಗಲೀಕರಣಕ್ಕೆ ಅಡ್ಡಿ ಉಂಟಾಗಿತ್ತು.
ರಸ್ತೆ ಅಗಲೀಕರಣದ ವಿರುದ್ಧ ಕೆಲವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆಯನ್ನೂ ತಂದಿದ್ದರು. ತಡೆಯಾಜ್ಞೆ ತೆರವುಗೊಳಿಸಲು ಕೆಲವರು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಈವರೆಗೆ ಅಸಾಧ್ಯವಾಗಿದ್ದರಿಂದ ರಸ್ತೆ ಅಗಲೀಕರಣ ನೆನೆಗುದ್ದಿಗೆ ಬಿದ್ದಿತ್ತು. ಇದೀಗ ಶಾಸಕ ಎ ಎಸ್ ಪೊನ್ನಣ್ಣನವರ ಆಸಕ್ತಿಯಿಂದ ತೀವ್ರ ಕಿರಿದಾಗಿರುವ ವಿರಾಜಪೇಟೆ ರಸ್ತೆಗೆ ಮುಕ್ತಿ ದೊರಕಿಸಲು ಸರ್ವೆ ಕಾರ್ಯ ನಡೆಯುತ್ತಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಕೆಎಸ್‌ಆರ್‌ಟಿಸಿ ಬಸ್ ಮರಕ್ಕೆ ಢಿಕ್ಕಿ; ತಪ್ಪಿದ ಅನಾಹುತ
ಜಿಲ್ಲಾಧಿಕಾರಿ ವೆಂಕಟರಾಜ್, ತಹಶೀಲ್ದಾರ್ ಅವರು ಮಹಿಳಾ ಸಮಾಜ ರಸ್ತೆಯ ಅಗಲೀಕರಣ ಸರ್ವೆ ಸಂದರ್ಭದಲ್ಲಿ ಖುದ್ದು ಹಾಜರಿದ್ದು ಪರಿಶೀಲಿಸಿದರು.