ಅಮೇರಿಕಾದಲ್ಲಿ ನಡೆದ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಅಂತರರಾಷ್ಟ್ರೀಯ ಜಾನಪದ ಕಲಾವಿದ ಗೋ.ನಾ.ಸ್ವಾಮಿ ಅವರಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ವಿಶ್ವದ ಬಹುದೊಡ್ಡ ಕನ್ನಡ ಸಮ್ಮೇಳನವು ಇದಾಗಿದ್ದು, ಅಮೆರಿಕಾದ ರಿಚ್‌ಮಂಡ್ ನಗರದಲ್ಲಿ ಆಗಸ್ಟ್ 30, 31 ಹಾಗೂ ಸೆ 1ರಂದು ಮೂರು ದಿನಗಳ ಕಾಲ ನಡೆದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡಿಗರಾದ ಗೋ.ನಾ.ಸ್ವಾಮಿ ಅವರಿಗೆ ಈ ಗೌರವ ಸಂದಿದೆ.
ಕೋಲಾರ ಜಿಲ್ಲೆಯ ಜಾನಪದ ಕಲಾವಿದ ಗೋ ನಾ ಸ್ವಾಮಿ ಅವರ ಜಾನಪದ ಕಲೆ ಉಳಿವಿಗಾಗಿ ಮತ್ತು ಕನ್ನಡ ನಾಡು ನುಡಿಗಾಗಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಫ್ಲಾಪ್ ಶೋ; ಪರಾಮರ್ಶೆಗೆ ಇದು ಸೂಕ್ತ ಸಮಯ
ಈ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಎಂಎಲ್ಸಿ ನಾಗರಾಜ್ ಯಾದವ್, ಮಾಜಿ ಸಚಿವೆ ರಾಣಿ ಸತೀಶ್, ಯೋಗಗುರು ವಚನಾನಂದ ಸ್ವಾಮೀಜಿ, ಅಕ್ಕ ಸಮ್ಮೇಳನದ ಅಧ್ಯಕ್ಷ ರವಿಬೋರೇಗೌಡ, ಮುಖಂಡರಾದ ಸಾಗರ್, ಕಿಕ್ಕೇರಿ ಕೃಷ್ಣಮೂರ್ತಿ, ಅಕ್ಕ ಸಂಸ್ಥಾಪಕ ಅಮರನಾಥಗೌಡ ಸೇರಿದಂತೆ ಬಹುತೇಕರು ಇದ್ದರು.