ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನ ಪ್ರಸ್ತುತ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಇದರ ನಿವಾರಣೆಗೆ ಗ್ರಾಮೀಣ ಪ್ರದೇಶಗಳಲ್ಲಿನ ಇಂತಹ ಆರೋಗ್ಯ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಆನಂದ ಮಾರ್ಗ ಶಾಲೆಯ ಆಚಾರ್ಯ ಆತ್ಮಬೋದಾನಂದ ಅವದೂತ ಸ್ವಾಮೀಜಿ ತಿಳಿಸಿದರು
ತಾಲೂಕಿನ ಕಿತ್ತಂಡೂರು ಗ್ರಾಮದಲ್ಲಿ ಗುರುವಾರ ಆನಂದ ಮಾರ್ಗ ಶಾಲೆ ಹಾಗೂ ದೇವರಾಜ ಅರಸು ಮೆಡಿಕಲ್ ಕಾಲೇಜು ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು ಕಾಯಿಲೆ ಬರುವ ಮುನ್ನವೇ ಎಚ್ಚರ ವಹಿಸಿದರೆ ಆಸ್ಪತ್ರೆ, ಮಾತ್ರೆ ಮುಂತಾದ ಕಷ್ಟಗಳಿಂದ ಪಾರಾಗಬಹುದು. ಹಳ್ಳಿಗಳಲ್ಲೂ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದರು.
ಇದನ್ನು ಓದಿದ್ದೀರಾ..? ಕೋಲಾರ | ನಸೀರ್ ಅಹಮದ್ ವಜಾ ಮಾಡಿದ್ದಕ್ಕೆ ಉಲಮಾಗಳ ಆಕ್ರೋಶ
ಶಿಬಿರದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ, ಮಕ್ಕಳ ರೋಗ, ಕಣ್ಣು, ಚರ್ಮ, ಕಿವಿ, ಗಂಟಲು ಮಧುಮೇಹ, ರಕ್ತದೊತ್ತಡ , ಇಸಿಜಿ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಗಳು ನಡೆದವು ಈ ಸಂದರ್ಭದಲ್ಲಿ ಆನಂದ ಮಾರ್ಗ ಶಾಲೆಯ ಆಚಾರ್ಯ ಪುಣ್ಯಾನಂದ ಅವದೂತ ಸ್ವಾಮೀಜಿ, ಆಚಾರ್ಯ ದೀರಜಾನಂದ ಅವದೂತ ಸ್ವಾಮೀಜಿ, ಶಾಲೆಯ ಅಧ್ಯಕ್ಷ ರಾಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ಕೆಡಿಪಿ ಸದಸ್ಯ ತುರಾಂಡಹಳ್ಳಿ ಟಿ.ಎನ್ ರವಿ, ಕಿತ್ತಂಡೂರು ಅಂಬೇಡ್ಕರ್ ಸಂಘದ ಅಧ್ಯಕ್ಷ ನಾಗರಾಜ್, ಸಚಿನ್, ಗುಟ್ಟಹಳ್ಳಿ ರಮೇಶ್, ತುರಾಂಡಹಳ್ಳಿ ಎನ್ ಶ್ರೀನಿವಾಸ್, ಸೊಣ್ಣಪ್ಪ ಸೇರಿದಂತೆ ವೈದ್ಯರು, ಶಿಕ್ಷಕರು ಸಿಬ್ಬಂದಿ, ಕಿತ್ತಂಡೂರು ಗ್ರಾಮಸ್ಥರು ಮುಂತಾದವರು,





