ಬಾಗೇಪಲ್ಲಿ | ಎಸ್. ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟ ರಾಜ್ಯಕ್ಕೆ 4ನೇ ಟಾಪರ್ ಆದ ಬಾಗೇಪಲ್ಲಿ ಯಶಸ್ವಿನಿ

Date:

ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದ್ದು, ಬಾಗೇಪಲ್ಲಿ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ
ಬಾಗೇಪಲ್ಲಿ ಬಿ.ಜಿ.ಎಸ್.ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಗ್ರಾಮೀಣ ಭಾಗದ ಪ್ರತಿಭೆ ಯಶಸ್ವಿನಿ 625ಕ್ಕೆ 622 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದು ಬಾಗೇಪಲ್ಲಿ ತಾಲ್ಲೂಕು ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದಾರೆ.
ಅದೇರೀತಿಯಲ್ಲಿ ಇನ್ನೊಬ್ಬ ಗ್ರಾಮೀಣ ಪ್ರತಿಭೆ ಶ್ರೀನಿಧಿ 625/619 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 7 ನೇ ಸ್ಥಾನ ಪಡೆದಿದ್ದಾರೆ.

- Advertisement -

ಯಶಸ್ವಿನಿ ಕನ್ನಡ ವಿಷಯದಲ್ಲಿ 125 ಅಂಕ,ಹಿಂದಿ ವಿಷಯದಲ್ಲಿ 100,ಗಣಿತ 100,ಸಮಾಜ ವಿಜ್ಞಾನ 100 , ಇಂಗ್ಲಿಷ್ ಭಾಷೆಯಲ್ಲಿ 99,ವಿಜ್ಞಾನ 98 ಅಂಕಗಳನ್ನು ಗಳಿಸಿದ್ದಾರೆ. ಈ ಸಾಧನೆ ವಿದ್ಯಾರ್ಥಿಗಳ, ಪೋಷಕರು ಹಾಗೂ ಶಾಲೆಯ ಆಡಳಿತ ಮಂಡಳಿಯ ಸಿ.ಇ.ಓ ಡಾ.ಶಿವರಾಮ ರೆಡ್ಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಮುನಿರಾಜು ವಿಧ್ಯಾರ್ಥಿಗಳ ಸಾಧನೆಗೆ
ಅಪಾರ ಹರ್ಷ ವ್ಯಕ್ತಪಡಿಸಿ ಆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸನ್ಮಾಸಿ ಗೌರವಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

ತಮ್ಮ ಈ ಯಶಸ್ಸಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಯಶಸ್ವಿನಿ “ಈ ಯಶಸ್ಸು ಕೇವಲ ನನ್ನೊಬ್ಬಳದ್ದಲ್ಲ. ನನ್ನ ಕಠಿಣ ಪರಿಶ್ರಮದ ಜೊತೆಗೆ ತಂದೆ-ತಾಯಿ, ಹಾಗೂ ಶಾಲಾ ಶಿಕ್ಷಕರ ನಿರಂತರ ಪ್ರೋತ್ಸಾಹವೇ ಈ ಸಾಧನೆಗೆ ಮೂಲ ಕಾರಣ. ಕಷ್ಟದ ವಿಷಯಗಳನ್ನು ಹೆಚ್ಚು ಗಮನವಿಟ್ಟು ಓದುತ್ತಿದ್ದೆ. ಎಲ್ಲಾ ಆರು ವಿಷಯಗಳಿಗೂ ಸಮಾನ ಪ್ರಾಶಸ್ತ್ಯ ನೀಡಿ, ದಿನನಿತ್ಯದ ಗುರಿಯನ್ನು ಇಟ್ಟುಕೊಂಡು ಓದುತ್ತಿದ್ದೆ. ಶಾಲೆಯಲ್ಲಿ ಶಿಕ್ಷಕರು ನೀಡುತ್ತಿದ್ದ ವಿಶೇಷ ತರಬೇತಿ ಹಾಗೂ ಸ್ಟಡಿ ಮೆಟೀರಿಯಲ್ಸ್‌ಗಳು ಕಲಿಕೆಗೆ ಬಹಳಷ್ಟು ಸಹಾಯ ಮಾಡಿದವು,” ಎಂದು ಹೇಳಿದರು. ಶ್ರೀನಿಧಿ ಅವರು ಪಠ್ಯವನ್ನು ಕೇವಲ ಬಾಯಿಪಾಠ ಮಾಡದೆ, ಪ್ರತಿಯೊಂದನ್ನೂ ಆಳವಾಗಿ ಅರ್ಥೈಸಿಕೊಂಡು ಓದುವ ಅಭ್ಯಾಸ ಬೆಳೆಸಿಕೊಂಡಿದ್ದರು. ಯಾವುದೇ ಸಮಯದಲ್ಲಿ ಸಂದೇಹಗಳು ಬಂದರೂ ಶಿಕ್ಷಕರು ಅದನ್ನು ಬಗೆಹರಿಸುತ್ತಿದ್ದರು ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿರುವ ಬೃಂದಾ ಅವರಿಗೆ ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಇದ್ದು, ಮುಂದಿನ ದಿನಗಳಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು, ಬಳಿಕ ಮುಂದಿನ ವ್ಯಾಸಂಗ ಮಾಡಿ ಪ್ರಾಧ್ಯಾಪಕರಾಗುವ ಆಸಕ್ತಿಯನ್ನು ವ್ಯಕ್ತಪಡಿಸಿದರು.

ಮಗಳ ಸಾಧನೆಯಿಂದ ಅತೀವ ಸಂತಸಗೊಂಡಿರುವ ಬಾಗೇಪಲ್ಲಿ ತಾಲ್ಲೂಕು ಶಾಖೆ ಅಂಚೆ ಮಾಸ್ಟರ್ ನಾರಾಯಣ ಸ್ವಾಮಿ ತಮ್ಮ ಮಗಳ ಪರಿಶ್ರಮದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. “ನಮ್ಮ ಮಗಳು ಎಲ್.ಕೆ.ಜಿ ಯಿಂದಲೂ ಓದಿನಲ್ಲಿ ಸದಾ ಮುಂದಿದ್ದಳು. ಅವಳು ಟಾಪರ್ ಆಗಬೇಕು ಎಂಬುದು ನಮ್ಮ ಮತ್ತು ಶಾಲೆಯ ಶಿಕ್ಷಕರ ಬಹುದಿನಗಳ ಕನಸಾಗಿತ್ತು. ಇಂದು ಆ ಕನಸು ನನಸಾಗಿದೆ. ಶಾಲೆ ಮುಗಿದ ನಂತರವೂ ಸಂಜೆ 6 ಗಂಟೆಯವರೆಗೆ ಶಾಲೆಯಲ್ಲೇ ಶಿಕ್ಷಕರು ವಿಶೇಷ ತರಬೇತಿ ನೀಡುತ್ತಿದ್ದರು. ಮನೆಗೆ ಬಂದ ನಂತರವೂ ರಾತ್ರಿ 12 ಗಂಟೆಯವರೆಗೆ ಓದುತ್ತಿದ್ದಳು. ಪರೀಕ್ಷೆಯ ಸಮಯದಲ್ಲಿ ಬೆಳಿಗ್ಗೆ 4 ಗಂಟೆಗೆ ಎದ್ದು ಏಕಾಗ್ರತೆಯಿಂದ ಓದುತ್ತಿದ್ದಳು. ಅವಳ ಈ ಕಠಿಣ ಪರಿಶ್ರಮಕ್ಕೆ ಇಂದು ತಕ್ಕ ಪ್ರತಿಫಲ ದೊರೆತಿದೆ,” ಎಂದು ಭಾವುಕರಾಗಿ ನುಡಿದರು.

ಇದನ್ನು ಓದಿದ್ದೀರಾ..?ಕೋಲಾರ | ನಸೀರ್ ವಿರುದ್ಧ ಕ್ರಮ ಕಾಂಗ್ರೆಸ್‌ಗೆ ಮುಳುವಾಗಲಿದೆ, ವಾಪಸ್‌ ಸ್ಥಾನಮಾನ ನೀಡಿ: ಕಾಂಗ್ರೆಸ್‌ ಮುಖಂಡ ಚಂದ್ರಮೌಳಿ ಆಗ್ರಹ – ಈ ದಿನ.ಕಾಮ್

ಶಾಲೆಯ ಮುಖ್ಯಸ್ಥರಾದ ಮುನಿರಾಜು ಅವರು ಕೂಡ ವಿದ್ಯಾರ್ಥಿಗಳ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಶಾಲೆಯ ಇಡೀ ತಂಡದ ಪರಿಶ್ರಮಕ್ಕೆ ಉತ್ತಮ ಫಲ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ, ಗ್ರಾಮೀಣ ಭಾಗದ ಯಶಸ್ವಿನಿ ಹಾಗೂ ಶ್ರೀನಿಧಿ ಅವರ ಈ ಅಪ್ರತಿಮ ಸಾಧನೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ದ್ವೇಷ ಭಾಷಣ, ಕೋಮುವಾದಿ ಪ್ರಚೋದನೆ ತಡೆಗೆ ಸಮಗ್ರ ನೀತಿ ರೂಪಿಸಿ

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣಾ ಕಾಯ್ದೆ–2022 (ಮತಾಂತರ ನಿಷೇಧ ಕಾಯ್ದೆ)...

ಕಲಬುರಗಿ | ಕನ್ನಡ ರಾಜ್ಯೋತ್ಸವ ಅಂಗವಾಗಿ; ಸಸಿ ನೆಡುವ ಮೂಲಕ ಕನ್ನಡ ಜಾಗೃತಿ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು, ನುಡಿಯ ಅಭಿಮಾನದ ಜೊತೆಗೆ ಪರಿಸರ...

ಕ್ರೈಸ್ತ ಅಭಿವೃದ್ಧಿ ನಿಗಮದ ನಿಯೋಗದಿಂದ ಸಚಿವ ಯು.ಟಿ. ಖಾದರ್ ಭೇಟಿ: ಮತಾಂತರ ನಿಷೇಧ ಕಾಯ್ದೆಯ ಕುರಿತು ಚರ್ಚೆ

ಕರ್ನಾಟಕ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ನಿರ್ದೇಶಕರನ್ನೊಳಗೊಂಡ ನಿಯೋಗವು...