ತುಮಕೂರು | ನಿಷ್ಠುರವಾದ ಪತ್ರಿಕೋದ್ಯಮ ಬೇಕು : ಕೆ. ಶಿವಕುಮಾರ್

Date:

ಪತ್ರಕರ್ತರು ಜನರ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಬೇಕು. ಸಮಾಜದ ಆಶೋತ್ತರಗಳಿಗೆ ಸ್ಪಂದಿಸಬೇಕು. ಇದನ್ನು ಮಾಧ್ಯಮ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಪತ್ರಕರ್ತ  ಕೆ.ಶಿವಕುಮಾರ್ ಹೇಳಿದರು.

- Advertisement -

ತುಮಕೂರು ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಮಾಧ್ಯಮ ಹಬ್ಬ ಸಂಭ್ರಮ- 2026’ಕ್ಕೆ  ಚಾಲನೆನೀಡಿ ಮಾತನಾಡಿದ ಅವರು, ನಿಷ್ಠುರವಾದ ಪತ್ರಿಕೋದ್ಯಮ ಬೇಕಾಗಿದೆ. ಜನರ ಸಮಸ್ಯೆಗಳನ್ನು ಮುಕ್ತವಾಗಿ ಹೇಳುವಂತಾಗಬೇಕು. ಮಾಧ್ಯಮ ವಿದ್ಯಾರ್ಥಿಗಳು ಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕಾಲೇಜು ಹಂತದಲ್ಲಿಯೇ ಸಮಾಜದ ಗಂಭೀರವಾದ ವಿಷಯಗಳ ಕುರಿತು ಪ್ರಶ್ನಿಸುವ, ವಿಮರ್ಶೆ ಮಾಡುವ ಮನೋಭಾವ ರೂಪಿಸಿಕೊಳ್ಳಬೇಕು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ  (ಎಸ್‌ಐಆರ್) ಪ್ರಕ್ರಿಯೆ ನಂತರ ದೇಶದ 1.15 ಕೋಟಿ ಜನ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ತುಂಬಾ ವ್ಯವಸ್ಥಿತವಾಗಿ ಮತದಾನದ ಹಕ್ಕು ಕಸಿಯಲಾಗುತ್ತಿದೆ. ಮಾಧ್ಯಮ ವಿದ್ಯಾರ್ಥಿಗಳು ಈ ಬಗ್ಗೆ ಗಮನ ಹರಿಸಿ, ಬರೆಯಬೇಕು ಎಂದು ತಿಳಿಸಿದರು.

ಅಂಬೇಡ್ಕರ್ ಮಾಡಿದ ಪತ್ರಿಕೆಗಕಳು ತಳ ಸಮುದಾಯಗಳ ಪರ ಧ್ವನಿ ಎತ್ತಲು. ಅಂಬೇಡ್ಕರ್ ಅವರನ್ನು ಪತ್ರಕರ್ತರಾಗಿ ಪರಿಗಣಿಸಿಲ್ಲ. 36 ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದರೂ ಅವರನ್ನು ಪತ್ರಕರ್ತರನ್ನಾಗಿ ನೋಡುತ್ತಿಲ್ಲ. ಗಾಂಧೀಜಿ, ಭಗತ್ ಸಿಂಗ್ ಕೂಡ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಇವರನ್ನು ಪತ್ರಿಕೋದ್ಯಮದ ಪಠ್ಯವಾಗಿಸಬೇಕು ಎಂದರು.

1003181779

 ಅಕ್ರಮ ಆಸ್ತಿ ಸಂಪದಾನೆಗೆ ಎಲ್ಲ ರಾಜಕಾರಣಿಗಳು ಪತ್ರಿಕೆ, ಟಿ.ವಿ ಶುರು ಮಾಡಿದ್ದಾರೆ.  ಪತ್ರಕರ್ತರಿಗೆ ಪಿ.ಎಫ್, ಇ.ಎಸ್ ಇಲ್ಲ. ಕಾರ್ಪೊರೇಟ್‌ಗೆ ಅನುಕೂಲ ಮಾಡಿಕೊಡುವ ಪತ್ರಕರ್ತರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಇತ್ತೀಚಿಗೆ ಪತ್ರಕರ್ತರು, ಪತ್ರಿಕೆಗಳು ಸಾಮಾಜಿಕವಾಗಿ ನಂಬಿಕೆ ಕಳೆದುಕೊಳ್ಳುತ್ತಿವೆ. ನಂಬಿಕೆ ಬುಲೆಟ್ ಪ್ರೂಫ್ ಜಾಕೆಟ್ ಇದ್ದಂತೆ. ಈಗ ಅದು ಕ್ಷೀಣಿಸುತ್ತಿದೆ. ಅದನ್ನು ಉಳಿಸಿಕೊಳ್ಳಲು ಪತ್ರಕರ್ತರು ನೈತಿಕತೆಯಿಂದ ಕೆಲಸ ಮಾಡಬೇಕು.ಯಾವುದೇ ಆಮಿಷಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು ಎಂದರು.

ಎ.ಐ. ಎಲ್ಲೆಡೆ ವ್ಯಾಪಕವಾಗಿದೆ. ಟೆಲಿವಿಷನ್ ನೋಡಿಕೊಂಡು ಬರೆಯುವಂತೆ ಮಾಧ್ಯಮದಲ್ಲಿ ಅನಾರೋಗ್ಯ ಸ್ಪರ್ಧೆ ಹೆಚ್ಚಾಗಿದೆ. ನೆಗೆಟಿವ್ ಹುಡುಕುವುದು ಕೆಲಸವಾಗಿದೆ. ಮಾಧ್ಯಮದ ಮುಂದೆ ಬಹಳ ದೊಡ್ಡ ಸವಾಲು ಇದೆ. ರೋಬೊಟಿಕ್, ಪ್ರಾಮಾಣಿಕವಾಗಿದ್ದರೆ ಅದರಿಂದ ಸಿಗುವ. ಬೆೆಂಗಳೂರು- ತುಮಕೂರು ರಸ್ತೆ 20 ವರ್ಷ ಕಳೆದರೂ ಅಭಿವೃದ್ಧಿ ಆಗಿಲ್ಲ. 60-70 ಕಿಲೊ ಮೀಟರ್ ಸಂಚರಿಸಲು 2 ಗಂಟೆ ಬೇಕಾಗುತ್ತದೆ. ಜನರ ಸಮಸ್ಯೆಗಳ ಕುರಿತು ಅಭಿಯಾನ ನಡೆಸಬೇಕು ಎಂದರು.

1003181780

ಭ್ರಷ್ಟಾಚಾರ, ಜಾತಿ ವ್ಯವಸ್ಥೆ, ನಾಲ್ಕು ಸಾವಿರ ಮಠಗಳು ಇರುವ ರಾಜ್ಯದಲ್ಲಿ ಇಂತಹ ವ್ಯವಸ್ಥೆ ಇದೆ. ಇದು ಮಠಗಳ ವೈಫಲ್ಯವೇ?, ಜನರಿಗೆ ತಲುಪಿಸುವಲ್ಲಿ ಸಾಮಾಜಿಕ ಜಾಲತಾಣ, ಪೇಯ್ಡ್ ನ್ಯೂಸ್, ಎ.ಐ, ಸಿಟಿಜನ್ ಜರ್ನಲಿಸ್ಟ್ ಈ ಎಲ್ಲ ಸವಾಲುಗಳನ್ನು ಮಾಧ್ಯಮ ವಿದ್ಯಾರ್ಥಿಗಳು ಎದುರಿಸಿ ನಿಲ್ಲಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಿ ಎಲ್ಲವೂ ನಿಮ್ಮನ್ನು ಹುಡುಕಿಕೊಂಡು ಬರಲಿದೆ ಎಂದು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ, ಪೌರ ಕಾರ್ಮಿಕರ ಋಣ ನಾಗರಿಕರ ಮೇಲಿದೆ. ಸ್ವಚ್ಛ ಸಮಾಜದ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದು, ರೈತರ ಮಕ್ಕಳು ಉನ್ನತ ಹುದ್ದೆ ಅಲಂಕರಿಸಬೇಕು. ಹಳ್ಳಿಗಾಡಿನಿಂದ ಬಂದವರು ರಾಜ್ಯ, ರಾಷ್ಟ್ರೀಯ ಪತ್ರಿಕೆಗಳ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆಯಬೇಕು ಎಂದು ಸಲಹೆ ಮಾಡಿದರು.

1003181934

ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಟೂಡಾ ಶಶಿಧರ್ ಮಾತನಾಡಿ, ಪೌರ ಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ಮನೆಗಳಲ್ಲಿ ಕುಡಿಯಲು ನೀರು ಸಹ ಕೊಡುವುದಿಲ್ಲ. ನಗರದಲ್ಲಿ ಶೌಚಾಲಯಗಳಿಲ್ಲದೆ ಪೌರ ಕಾರ್ಮಿಕರು ಪರದಾಡುತ್ತಿದ್ದಾರೆ. ನಾವು ಚಂದ್ರಲೋಕಕ್ಕೆ ಹೋಗಲು ಸಿದ್ಧತೆಗಳು ನಡೆಯುತ್ತಿವೆ. ಆದರೆ ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಬೇಕಾದ ಪರಿಕರವೇ ಇಲ್ಲ. ಮನುಷ್ಯನೇ ಇಳಿದು ಸ್ವಚ್ಛಗೊಳಿಸಬೇಕಾದ ಸ್ಥಿತಿ ಇದೆ ಎಂದು ವಿಷಾದಿಸಿದರು.

ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ.ನಡಕಟ್ಟಿ ಮಾತನಾಡಿ, ಸಂಭ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸುತ್ತಿರುವುದು ಉತ್ತಮ ಆಯ್ಕೆ. ಸಿದ್ಧಾರ್ಥ ಕಾಲೇಜಿನಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ ನಡಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಟ್ಟರು. ಲೇಖಕರಾದ ಮಲ್ಲಿಕಾರ್ಜುನ ಹೊಸಪಾಳ್ಯ, ಡಾ. ಅಮ್ಮಸಂದ್ರ ಸುರೇಶ್ ಮಾತನಾಡಿದರು. ಈ ಬಾರಿ ಸಂಭ್ರಮ -2026 “ಪರಿಸರ ಪತ್ರಿಕೋದ್ಯಮ” ಥೀಮ್ ಹೊಂದಿದ್ದು, 35 ಪೌರಕಾರ್ಮಿಕರಿಗೆ ‘ಸಿದ್ಧಾರ್ಥ ಮಾಧ್ಯಮ ಪ್ರಶಸ್ತಿ’ ನೀಡಿ ಗೌರವಿಸಲಾಯಿತು

1003181777

ಇದೇ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳು ಹೊರ ತರುವ ಸಿದ್ಧಾರ್ಥ ಸಂಪದ ಪತ್ರಿಕೆಯನ್ನು ಹೊರ ತಂದರು.  ಮಾಧ್ಯಮೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸುಮಾರು  150ಕ್ಕೂ ಹೆಚ್ಚು ಸ್ಪರ್ಧಿಗಳಲ್ಲಿ ಪಾಲ್ಗೊಂಡಿದ್ದರು. 

ಎರಡು ದಿನದ ಈ ಕಾರ್ಯಕ್ರಮದಲ್ಲಿ ಒಟ್ಟು ಎಂಟು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರೇಡಿಯೋ ಜಾಕಿ, ಪಿಟಿಸಿ, ಫೋಟೋಗ್ರಫಿ, ವೈರಲ್ ಅಡ್ಡ (ರೀಲ್ಸ್), ವರದಿಗಾರಿಕೆ, ಟೆಲಿವಿಷನ್ ಸುದ್ದಿ ವಾಚನ (ನ್ಯೂಸ್ ರೀಡಿಂಗ್), ಕೊಲೇಜ್ ಮೇಕಿಂಗ್, ಮ್ಯಾಡ್ ಆಡ್ಸ್  ಸ್ಪರ್ಧೆಗಳು ನಡೆಸಲಾಯಿತು. 

ಎಸ್‌ಎಸ್‌ಎಸ್‌ಇ ಪ್ರಾಂಶುಪಾಲರಾದ ಡಾ.ಸಂಜೀವ್ ಕುಮಾರ್ ಎಲ್, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಆಡಳಿತಾಧಿಕಾರಿ ಖಲಂದರ್ ಪಾಷ ಕೆ.ಎಚ್, ನಿರ್ದೇಶಕರಾದ ಬಿ.ಟಿ.ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ  ಡಾ. ಜ್ಯೋತಿ ಸಿ, ಶ್ವೇತಾ ಎಂ.ಪಿ, ನವೀನ್ ಎನ್ ಜಿ, ರೇಡಿಯೋ ಸಿದ್ಧಾರ್ಥ ಸಿಬ್ಬಂದಿ ಗೌತಮ್ ಎ.ವಿ, ರವಿಕುಮಾರ್, ಮಧುಶ್ರೀ, ಹರೀಶ್ ಕುಮಾರ್, ಟೆಲಿವಿಷನ್ ನಿರ್ವಾಹಕರಾದ ಎಸ್ ರಾಘವ್, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಮಣಿ ಎಚ್.ಜಿ, ಎಸ್‌ಎಸ್‌ಸಿಎಂಎಸ್‌ನ ಬೋಧಕೇತರ ಸಿಬ್ಬಂದಿಗಳಾದ ಮಂಜುಳಾ ಟಿ ವಿ, ಶಿಲ್ಪ ಜಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವರ್ಷಿತ ಮತ್ತು ಕಿರ್ತನ ಕಾರ್ಯಕ್ರಮ ನಿರೂಪಣೆ ಮಾಡಿದರು. 

ಪೂಜಾ ಮತ್ತು ದರ್ಶನ್ ತಂಡದಿಂದ ಗೀತ ಗಾಯನ ನಡೆಸಿಕೊಟ್ಟರು.

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ದಸರಾ: ವಿಐಪಿಗಳಿಗೆ ರಾಜಮರ್ಯಾದೆ, ಸಾಮಾನ್ಯರ ಮೇಲೆ ಪೊಲೀಸ್ ದರ್ಪ!

 ಅಧಿಕಾರಿಗಳ ಕುಟುಂಬಸ್ಥರಿಗೆ ವಿಶೇಷ ಆತಿಥ್ಯ, ಜನ ಸಾಮಾನ್ಯರು ನಿಂತುಕೊಂಡು ಕಾರ್ಯಕ್ರಮ ನೋಡಲು...

ತುಮಕೂರು | ಬಣ್ಣದ ಚಿತ್ತಾರದಲ್ಲಿ ಅರಳಿದ ಮಹಿಳೆಯರ ಸೃಜನಶೀಲತೆ ; ಮಹಿಳಾ ದಸರಾಗೆ ಡಾ.ಜಿ.ಪರಮೇಶ್ವರ್ ಚಾಲನೆ

 ಬಣ್ಣಬಣ್ಣದ ರಂಗೋಲಿ ಚಿತ್ತಾರ, ಕ್ರೀಡಾ ಸ್ಪರ್ಧೆಗಳ ಸಂಭ್ರಮ, ಮಹಿಳೆಯರ ಉತ್ಸಾಹದ ಪಾಲ್ಗೊಳ್ಳುವಿಕೆ....

ತುಮಕೂರು | ಕವಿಗಳು ಸಮಾಜವನ್ನು ತಿದ್ದುವ ಕೆಲಸ ಮಾಡಲಿ: ಮುಕುಂದರಾಜ್

 ಕವಿಗಳು ಸಮಾಜದ ನೋವು, ನಲಿವು, ಸಂಘರ್ಷ ಹಾಗೂ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ...

ತುಮಕೂರು | ಪತ್ರಿಕೋದ್ಯಮದಲ್ಲಿ ಸತ್ಯನಿಷ್ಠೆಯೇ ಅಡಿಪಾಯ: ಕಾವ್ಯ ಎನ್

 ಪತ್ರಿಕೋದ್ಯಮದಲ್ಲಿ ಯಶಸ್ಸು ಸಾಧಿಸಲು ಭಾಷೆಯ ಮೇಲಿನ ಹಿಡಿತ, ಪರಿಣಾಮಕಾರಿ ಬರವಣಿಗೆ ಹಾಗೂ...