ಮಾಜಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಸೋಮವಾರ ಕೋಲಾರ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ನಗರದ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಅಂಬರೀಷ್ ಮಾತನಾಡಿ ವಾಲ್ಮೀಕಿ ಸಮಾಜದ ಪ್ರಭಾವಿ ಮುಖಂಡ ಸತೀಶ್ ಜಾರಕಿಹೊಳಿ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳ ಮೂಲಕ ಹೆಸರುವಾಸಿಯಾಗಿದ್ದು ಅಹಿಂದ ಸಂಘಟನೆಯನ್ನು ಸಿದ್ದರಾಮಯ್ಯ ಜೊತೆಗೂಡಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅಂಬೇಡ್ಕರ್, ಬುದ್ದ, ಬಸವಣ್ಣ, ಪೆರಿಯಾರ್ ಅಲೋಚನೆಗಳ ಹಾದಿಯಲ್ಲಿ ಮತ್ತಷ್ಟು ಯಶಸ್ಸಿನೊಂದಿಗೆ ಅರೋಗ್ಯ ಆಯಸ್ಸು ಸಿಗುವಂತಾಗಲಿ ಎಂದು ಆಶಿಸಿದರು.
ರಾಜೇನಹಳ್ಳಿ ವಾಲ್ಮೀಕಿ ಗುರುಪೀಠದ ಸದಸ್ಯ ಮಾಲೂರು ಎನ್ ವೆಂಕಟರಾಮ್ ಮಾತನಾಡಿ ರಾಜ್ಯಾದ್ಯಂತ ಮೂಢನಂಬಿಕೆಗಳ ವಿರುದ್ದವಾಗಿ ಜನ ಜಾಗೃತಿ ಮೂಡಿಸಿರುವ ಸತೀಶ್ ಜಾರಕಿಹೊಳಿಗೆ ಮುಂದಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಸರ್ಕಾರದಲ್ಲಿ ಉನ್ನತ ಹುದ್ದೆ ಸಿಕ್ಕಿ ಸಮುದಾಯ ಅಭಿವೃದ್ಧಿಗೆ ಶ್ರಮಿಸುವಂತಾಗಲಿ ಎಂದರು.
ಇದನ್ನು ಓದಿದ್ದೀರಾ…? ಕೋಲಾರ | ಕಾರ್ಮಿಕರ ಕನಿಷ್ಠ ವೇತನ 35 ಸಾವಿರಕ್ಕಾಗಿ ಸಿಐಟಿಯು ನೇತೃತ್ವದಲ್ಲಿ ಡಿಸಿ ಕಛೇರಿ ಮುಂದೆ ಪ್ರತಿಭಟನೆ – ಈ ದಿನ.ಕಾಮ್
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಬಾಲಗೋವಿದ್, ಜಾಗೃತಿ ಸಮಿತಿ ಸದಸ್ಯ ಕುಡುವಹಳ್ಳಿ ಆನಂದ್, ಮುಖಂಡರಾದ ಹಳೇಪಾಳ್ಳ ತಿಮ್ಮರಾಮಪ್ಪ, ಗಡ್ಡೂರು ಪ್ರಕಾಶ್, ಅಡ್ಡಗಲ್ ನರೇಶ್ ಬಂಗಾರಪೇಟೆ ನಾರಾಯಣಸ್ವಾಮಿ, ಬೈರಂಡಹಳ್ಳಿ ನಾಗೇಶ್, ಟಿ.ಕೆ ನಾಗರಾಜ್, ನವೀನ್, ಚೆಲುವನಹಳ್ಳಿ ಶಿವು, ಕಲ್ಲಮಂಜಲಿ ರವಿ, ಪವನ್, ಶಿಂಗಹಳ್ಳಿ ಅನಿಲ್ ಸೀತಿಹೊಸೂರು ಮುರಳಿ, ಮುಂತಾದವರು ಇದ್ದರು.




