ಕೂಡ್ಲಿಗಿ | ಗೌರವ ಧನ ಹೆಚ್ಚಿಸುವಂತೆ ಸರ್ಕಾರಕ್ಕೆ ಅಂಗನವಾಡಿ ನೌಕರರ ಒತ್ತಾಯ: ಶಾಸಕರ ಮೂಲಕ ಪತ್ರ

Date:

Advertisements

ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ, ತಮಗೆ ಗೌರವಧನ ಹೆಚ್ಚಿಸಿ ನಿರ್ಧಾರ ಕೈಗೊಂಡು ಘೋಷಿಸಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ, ಮತ್ತು ಸಹಾಯಕಿಯರ ಫೆಡರೇಷನ್ ಎಐಟಿಯುಸಿ ನೇತೃತ್ವದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಕೂಡ್ಲಿಗಿ ಘಟಕದ ಪದಾಧಿಕಾರಿಗಳು, ಕೂಡ್ಲಿಗಿ ಶಾಸಕರಿಗೆ ತಮ್ಮ ಹಕ್ಕೊತ್ತಾಯ ಪತ್ರವನ್ನು ನೀಡಿ, ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು, ಇತ್ತೀಚೆಗೆ ನೀಡಿರುವ ಹೇಳಿಕೆಯಂತೆ ಆರನೇ ಗ್ಯಾರಂಟಿ ಎಂದು ಪರಿಗಣಿಸಬಹುದಾದ. ಅಂಗನವಾಡಿ ಕಾರ್ಯಕರ್ತರಿಗೆ, ಮತ್ತು ಸಹಾಯಕಿಯರಿಗೆ ಗೌರವ ಧನ ಹೆಚ್ಚಿಸುವಂತೆ ಕ್ರಮಕ್ಕಾಗಿ ಸದನದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು. ಈ ಬಗ್ಗೆ ಚರ್ಚಿಸುವಂತೆ ಶಾಸಕರಲ್ಲಿ ಕೋರಿದರು.

Advertisements

ಶಾಸಕರು ತಮ್ಮ ಹಕ್ಕೊತ್ತಾಯದ ಕುರಿತು ಚರ್ಚಿಸುವ ಮೂಲಕ, ಸರ್ಕಾರಕ್ಕೆ ತಮ್ಮ ಪರವಾಗಿ ಮನವಿ ಮಾಡುವುದರೊಂದಿಗೆ ಹೋರಾಟಕ್ಕೆ ಧ್ವನಿಯಾಗಬೇಕೆಂದು ಅವರು ಶಾಸಕರಲ್ಲಿ ಮನವಿ ಮಾಡಿದರು.

ಗೌರವ ಧನ ಹೆಚ್ಚಿಸಬೇಕು, ನಿವೃತ್ತರಿಗೆ ಇಡಿಗಂಟು ಧನ ನೀಡಬೇಕು, ಡಿ ದರ್ಜೆ ನೌಕರರೆಂದು ಸರ್ಕಾರ ಪರಿಗಣಿಸಿ ಘೋಷಿಸಬೇಕು ಸೇರಿದಂತೆ ತಮ್ಮ ವಿವಿಧ ಹಕ್ಕೊತ್ತಾಯಗಳನ್ನು ಮಾಡಿದ್ದು, ಅವುಗಳಿರುವ ಪತ್ರವನ್ನು ಶಾಸಕರ ಮೂಲಕ ಸರ್ಕಾರಕ್ಕೆ ನೀಡಿ ಒತ್ತಾಯಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ಎನ್.ಸುಮಾ ಹಾಗೂ ಎಐಟಿಯುಸಿ ಮುಖಂಡ ಹೆಚ್.ವೀರಣ್ಣ ನೇತೃತ್ವದಲ್ಲಿ. ಪಟ್ಟಣದಲ್ಲಿರುವ ಕ್ಷೇತ್ರದ ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ಅವರ ಕಚೇರಿಯಲ್ಲಿ, ಭೇಟಿಯಾಗಿ ತಮ್ಮ ಹಕ್ಕೊತ್ತಾಯ ಪತ್ರವನ್ನು ನೀಡಿದರು.

ಮನವಿ ಸ್ವೀಕರಿಸಿ ಭರವಸೆ ನೀಡಿದ ಶಾಸಕ ಶ್ರೀನಿವಾಸ್, ಸುಮಾರು ವರ್ಷಗಳಿಂದಲೂ ಅಂಗನವಾಡಿ ಕಾರ್ಯಕರ್ತೆಯರು. ಸಮಾಜದ ಹಿತಕ್ಕಾಗಿ ಕರ್ತವ್ಯ ನಿರ್ವಹಣೆಯೊಂದಿಗೆ, ಸರ್ಕಾರದ ಇತರ ಸೇವೆಗಳನ್ನು ಪ್ರತಿ ಮನೆ ಮನೆಯ ಬಾಗಿಲಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪ್ರತಿ ಮನುಷ್ಯ ಹುಟ್ಟಿನಿಂದ ಕೊನೆಯವರೆಗೂ ಮಾತ್ರವಲ್ಲ, ಮಣ್ಣಲ್ಲಿ ಲೀನವಾದ ಮೇಲೂ ಕೂಡ ಅಂಗನವಾಡಿ ನೌಕರರ ಸೇವೆ ಅನನ್ಯವಾಗಿದೆ ಎಂದು ಉಲ್ಲೇಖಿಸಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಾಯಚೂರು ಗ್ರಾಮೀಣ ಕೂಲಿಕಾರರ ಸತ್ಯಾಗ್ರಹ; ಸ್ವಾರ್ಥರಹಿತ ಜನಹಿತದ ಬೇಡಿಕೆಗಳು ಸರ್ಕಾರದ ಕಣ್ತೆರೆಸಲಿ ‌

ಭವ್ಯ ಭಾರತದ ಭಾವೀ ಸತ್ಪ್ರಜೆಗಳನ್ನು ಹುಟ್ಟು ಹಾಕುವ, ಅಂಗನವಾಡಿ ನೌಕರರು ಮಕ್ಕಳ ಸಾಕು ತಾಯಿಯಾಗಿದ್ದಾರೆ. ಸಮಾಜದಲ್ಲಿ ಅಂಗನವಾಡಿ ನೌಕರರ ಸೇವೆಯ ಮಹತ್ವದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವೆ ಹಾಗೂ ನ್ಯಾಯಯುತವಾದ ನೆರವು ನೀಡುವಂತೆ ಸರ್ಕಾರಕ್ಕೆ ಕೋರುತ್ತೇನೆ ಮತ್ತು ಅರ್ಹ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಸದನಲ್ಲಿ ಚರ್ಚಿಸುವ ಮೂಲಕ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕ.ರಾ.ಅಂ.ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ನ ತಾಲೂಕು ಉಪಾಧ್ಯಕ್ಷರಾದ ಕೆ.ಎನ್.ಕವಿತಾ, ಮುಖಂಡರಾದ ಜಿ.ಪಾರ್ವತಮ್ಮ, ಹೆಚ್.ಅನ್ನಪೂರ್ಣ, ಎಂ.ಸುಮಂಗಳ, ಒ.ಕರಿಬಸಮ್ಮ, ಭಿ.ಮಾಂತಮ್ಮ, ಜಿ.ಟಿ.ಮೀನಾಕ್ಷಮ್ಮ, ಮತ್ತು ತಾಲೂಕು ಸಮಿತಿ ಸದಸ್ಯರಾದ ಕೆ.ಪದ್ಮಾವತಿ, ಎಸ್.ಶಕುಂತಲಾ, ಶಿವಲೀಲಾ, ಪಿ.ಇಂದ್ರಮ್ಮ, ಎಸ್.ಚೌಡಮ್ಮ, ಕೆಂಚಮ್ಮ, ಎಸ್.ಸಾಕಮ್ಮ, ಜಿ.ಗಾಯತ್ರಿ, ಹೆಚ್.ಎಸ್.ಚಂದ್ರಮ್ಮ, ಎ.ಬಿ.ಬಸಮ್ಮ, ದ್ಯಾಮಕ್ಕ, ಒ.ಸುಜಾತ, ಡಿ.ಗಂಗಮ್ಮ, ಸುಮಲತಾ, ಬಿ.ರೇಣುಕಾ, ಜೆ.ಜಯಮ್ಮ, ಲಕ್ಷ್ಮೀ, ಯು.ಸುವರ್ಣಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X