ಈ ಮೊದಲು ಹಣದ ವ್ಯವಹಾರ ಮಾಡಲು ಗ್ರಾಹಕ ಬ್ಯಾಂಕ್‌ಗೆ ತೆರಳಬೇಕಿತ್ತು. ಈಗ ಬ್ಯಾಂಕಿಂಗ್ ಉದ್ದಿಮೆಯಲ್ಲಿ ಸಾಕಷ್ಟು ಪ್ರಗತಿ ಕಾಣಬಹುದಾಗಿದೆ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಶ್ರಫ್ ಅಲ್ಲಳ್ಳಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಬಿಎ ವಿಭಾಗದಲ್ಲಿ ಬುಧವಾರ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ನಿರ್ವಹಣಾಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ವಿದ್ಯಾರ್ಥಿಗಳಿಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“1990-2000ಕ್ಕಿಂತ ಮುಂಚೆ ಎಟಿಎಂಗಳಿರಲಿಲ್ಲ. ಮೊಬೈಲ್‌ಗಳಿರಲಿಲ್ಲ. ಆಗ ಹಣದ ವ್ಯವಹಾರಕ್ಕಾಗಿ ಬ್ಯಾಂಕ್‌ಗಳಿಗೆ ತೆರಳಬೇಕಿತ್ತು. ಆಧುನಿಕ ತಂತ್ರಜ್ಞಾನದ ಬೆಳವಣಿಗೆಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡಿರುವ ಬ್ಯಾಂಕಿಂಗ್ ಕ್ಷೇತ್ರ ಇಂದು ಅಗಾಧ ಅಭಿವೃದ್ಧಿ ಸಾಧಿಸಿದೆ. ಬರುವ ದಿನಗಳಲ್ಲಿ ರೋಬೋಟ್‌ಗಳು ಈ ಉದ್ದಿಮೆಯಲ್ಲಿ ಕಾಣಸಿಗುವ ಕಾಲ ದೂರವಿಲ್ಲ” ಎಂದರು.
ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕರು ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ ವಿ ವಾರುಣಿ ಮಾತನಾಡಿ, “ವಿದ್ಯಾರ್ಥಿಗಳಿಗೆ ಇಂಥ ಕಾರ್ಯಕ್ರಮಗಳು ಉಪಯುಕ್ತವಾಗಿದ್ದು, ಪ್ರಯೋಜನ ಪಡೆಯುಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ವಿದ್ಯುತ್ ತಂತಿಯಿಂದ ಬೆಂಕಿ; ನಾಲ್ಕು ರಾಸು, ಹುಲ್ಲಿನ ಬಣವೆ ಭಸ್ಮ
ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಶಿವನಾಥ ಈ ಜಿ ಅತಿಥಿಗಳ ಪರಿಚಯದ ಜತೆಗೆ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಡಿ ಎಚ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ನಿರ್ವಹಣಾಶಾಸ್ತ್ರ ವಿಭಾಗದ ಬೋಧಕ ಸಿಬ್ಬಂದಿ ಶಂಕರಾನಂದ, ಶಾಹಿನಾ, ವಿದ್ಯಾರ್ಥಿಗಳಾದ ಸುಷ್ಮಿತಾ ಮತ್ತು ಪವಿತ್ರ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಎಸ್ ಬಾಲಾಜಿ, ಶಂಕರಾನಂದ ವೈ ಎಂ ಸೇರಿದಂತೆ ಇತರರು ಇದ್ದರು.