ಪ್ಯಾಕೇಜ್ ಟೆಂಡರ್ ರದ್ದಾಗುವವರೆಗೂ ಅರೆಬೆತ್ತಲೆ ಧರಣಿ ನಡೆಸುತ್ತೇವೆಂದು ಕೊಪ್ಪಳ ಜಿಲ್ಲಾ ಪ.ಜಾತಿ/ಪ.ಪಂಗಡ ಸಿವಿಲ್ ಗುತ್ತಿಗೆದಾರರ ಸಂಘದ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದಾರೆ.
ಕೊಪ್ಪಳ ಲೋಕೋಪಯೋಗಿ ಇಲಾಖೆಯ ಪ್ಯಾಕೇಜ್ ಟೆಂಡರ್ ವಿರೋಧಿಸಿ ಕಳೆದ ಒಂದು ವಾರದಿಂದಲೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಧರಣಿ ನಿರತರ ಅಹವಾಲಿಗೆ ಸ್ಪಂದನೆ ನೀಡದೆ, ಅವರ ಬೇಡಿಕೆಗೆ ಅಧಿಕಾರಗಳ ಮನ ಕರಗದಿರುವದನ್ನು ಕಂಡ ಹೋರಾಟಗಾರರು ನಿನ್ನೆಯಿಂದ ಸತ್ಯಾಗ್ರಹದ ಪ್ರತಿರೋಧದ ಧರಣಿ ಸ್ವರೂಪ ಬದಲಾಗಿ ಅರೆಬೆತ್ತೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಸಿದ್ದು ಮಣ್ಣಿನವರು ಮಾತನಾಡಿ, “ನಮ್ಮ ಬೇಡಿಕೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಪಂದಿಸದೇ ಹೋದರೆ ಮುಂದಿನ ದಿನಗಳಲ್ಲಿ ನಾವು ನಮ್ಮ ಮನೆಯ ಕುಟುಂಬ ಸಮೇತರಾಗಿ ಉಪವಾಸ ಸತ್ಯಾಗ್ರಹ ಕೂರುತ್ತೇವೆ. ಅದಕ್ಕೂ ಅಧಿಕಾರಿಗಳು ಸ್ಪಂದಿಸದಿದ್ದರೇ ನಾವು ಲೋಕೋಪಯೋಗಿ ಕಚೇರಿ ಎದುರು ಕುಟುಂಬ ಸಹಿತ ವಿಷ ಸೇವಿಸುತ್ತೇವೆ” ಎಂದು ಎಚ್ವರಿಕೆ ನೀಡಿದರು.
ಗುತ್ತಿಗೆದಾರ ಪ್ರಕಾಶ ಹೊಳೆಪ್ಪನವರ ಮಾತನಾಡಿ, “ಟೆಂಡರ್ ಪ್ಯಾಕೇಜ್ ಸುಮಾರು ₹495 ಲಕ್ಷ, ₹305 ಲಕ್ಷ, ₹360 ಲಕ್ಷ, ಮೂರರಿಂದ ಆರು ಕೋಟಿಯವರೆಗೂ ಟೆಂಡರ್ ಹೊರಡಿಸಿದರೆ ಈ ಬಡ, ದಲಿತ ಮತ್ತು ಹಿಂದುಳಿದ ಗುತ್ತಿಗೆದಾರರು ಯಾವ ರೀತಿ ಕಾರ್ಯನಿರ್ವಹಿಸಬೇಕು?. ಇದರ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನುಕೇಳಿದರೆ ಪ್ಯಾಕೇಜ್ ಟೆಂಡರ್ ರದ್ದುಪಡಿಸಲು ಸಾದ್ಯವಿಲ್ಲ, ನೀವು ಏನು ಮಾಡಿಕೊಳ್ಳತ್ತೀರೋ ಮಾಡಿಕೊಳ್ಳಿ ಹೋಗಿ’ ಎಂದು ತಾತ್ಸಾರ ಮಾಡಿದ್ದಲ್ಲದೆ ಉಢಾಪೆಯ ಉತ್ತರ ಕೊಡುತ್ತಾರೆ. ಅಧಿಕಾರಿಗಳು ಸಂವಿಧಾನ ಕಾನೂನು ಚೌಕಟ್ಟಿನಲ್ಲಿ ಅಧಿಕಾರ ನಿರ್ವಹಿಸುವರೋ ಅಥವಾ ರಾಜಾಧಿಕಾರದ ಆಡಳಿತದಲ್ಲಿ ಅಧಿಕಾರ ನಡೆಸುತ್ತಿರುವರೋ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ| ಪ್ರತಿಭಟನಾನಿರತ ರೈತರನ್ನು ರಾತ್ರೋರಾತ್ರಿ ವಶಕ್ಕೆ ಪಡೆದ ಪೊಲೀಸರು
“ಯಾವ ಹೋರಾಟದ ಮುಖಾಂತರ ಎಚ್ಚರಿಸಲು ಹೋದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ನಮ್ಮ ಕರೆಗೆ ಕಿವಿಗೊಡುತ್ತಿಲ್ಲ. ಹೀಗೇ ಮುಂದುವರೆದರೆ ನಮ್ಮ ಹೋರಾಟದ ಹೆಜ್ಜೆ ತೀವ್ರವಾಗುತ್ತದೆ” ಎಂದು ಎಚ್ಚರಿಸಿದರು.