ಕೊಪ್ಪಳ ಜಿಲ್ಲೆಯ ಕನಕಗಿರಿಯ ಶಾಸಕರ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಪದಾರ್ಥವಾಗಿ ಕಳಪೆ ಪಡಿತರ ವಿತರಣೆ ಮಾಡಿದ್ದು, ಬೇಳೆ, ಗೋದಿ ಅಕ್ಕಿಯಂತಹ ಪದಾರ್ಥಗಳು ಜಡೆಗಟ್ಟಿವೆ. ಕಳೆದ ಎರಡರಿಂದ ಮೂರು ತಿಂಗಳ ಹಿಂದೆ ಪೂರೈಸಿರುವ ಆಹಾರ ಸಾಮಗ್ರಿಗಳಲ್ಲಿ ಹುಳುಗಳು ಪಿತಗುಡುತ್ತಿವೆ.
ಕಳಪೆ ಪದಾರ್ಥಗಳಿಂದಲೇ ಆಹಾರ ತಯಾರಿಸಿ ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದಾರೆ. ಈ ಕುರಿತು ಮುಖ್ಯೋಪಾಧ್ಯಾಯ ಸಂಗಮೇಶ್ ಹಿರೇಮಠ್ ಅವರನ್ನು ಕೇಳಿದರೆ ‘ಬಿಸಿಯೂಟದ ಅಧಿಕಾರಿಗಳು ಇವನ್ನೇ ಕಳುಸಿದ್ದಾರೆ. ನಾವೂ ಇದನ್ನೇ ಬೇಯಿಸಿ ಊಟಕ್ಕೆ ಬಡಿಸುತ್ತೇವೆʼ ಎಂದು ಬೇಜವಾಬ್ದಾರಿ ಮಾತು ಹೇಳಿದ್ದಾರೆ.
ಬಿಸಿಯೂಟದ ಅಧಿಕಾರಿಗಳು ಸಂಪರ್ಕಕ್ಕೆ ಹೋದರೆ ‘ಕೊಪ್ಪಳ ಜಿಲ್ಲಾಧಿಕಾರಿ ಆಫೀಸ್‌ನಲ್ಲಿ ಮೀಟಿಂಗ್ ಇರುತ್ತದೆ ನಮಗೆ ಬರಲು ಆಗುವುದಿಲ್ಲ. ಬೇರೆ ಅಧಿಕಾರಿಗಳನ್ನು ಕಳುಹಿಸಿಕೊಡುತ್ತೇವೆʼ ಎಂದು ಹೇಳುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮಾದಕ ವಸ್ತು ಸೇವನೆ ದುಷ್ಪರಿಣಾಮಗಳ ಜಾಗೃತಿ ಅಗತ್ಯ: ಡಿಸಿ ಶಿಲ್ಪಾ ನಾಗ್
“ತಾಲೂಕಿನ ಎಲ್ಲ ಶಾಲೆಗಳಲ್ಲಿ ಇದೇ ರೀತಿ ಕಳಪೆ ಆಹಾರ ಪೂರೈಕೆಯಾಗುತ್ತಿದ್ದು, ಇದನ್ನು ಅರಿತು ಮೇಲಧಿಕಾರಿಗಳು ಮುಖ್ಯ ಉಪಾಧ್ಯಾಯರು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪಾಮಣ್ಣ ಅರಳಿಗನೂರ ಒತ್ತಾಯಿಸಿದರು.

ಪಟ್ಟಣ ಪಂಚಾಯತ್ ಸದಸ್ಯ ಶೇಷಪ್ಪ ಪೂಜಾರ್, ಎಸ್‌ಡಿಎಂಸಿ ಸದಸ್ಯರಾದ ವೆಂಕಟೇಶ್ ನೀರ್ಲೂಟಿ ಹನುಮಂತ್ ರೆಡ್ಡಿ, ಭೀಮೇಶ್ ಇದ್ದರು.