ಖಾಲಿ ಚೆಕ್ ನೀಡಿ ಭತ್ತ ಖರೀದಿಸಿ ಬಳಿಕ ರೈತರಿಗೆ ಹಣ ಕೊಡದೆ ವಂಚಿಸುತ್ತಿದ್ದ ದಲ್ಲಾಳಿಯೊಬ್ಬ ಕೊನೆಗೂ ಸಿಕ್ಕಿಬಿದ್ದು ರೈತರೇ ಗ್ರಾಮದಲ್ಲಿ ಕೂಡಿಹಾಕಿರುವ ಘಟನೆ ಗಂಗಾವತಿ ತಾಲ್ಲೂಕಿನ ಭಟ್ಟನರಸಾಪುರ ಗ್ರಾಮದಲ್ಲಿ ನಡೆದಿದೆ.
ದಲ್ಲಾಳಿ ಶರಣಬಸವ, ಎರಡು ವರ್ಷಗಳಿಂದ ರೈತರಿಗೆ ಸುಮಾರು 20 ಲಕ್ಷ ರೂ ಹಣ ಕೊಡದೇ ಖಾಲಿ ಚೆಕ್ ಕೊಟ್ಟು ರೈತರನ್ನು ಯಾಮಾರಿಸುತ್ತಿದ್ದ. ಚೆಕ್ ಬೌನ್ಸ್ ಆದ್ರೂ ಕ್ಯಾರೆ ಎನ್ನದೆ ತಿರುಗಾಡುತ್ತಿದ್ದ. ಈ ಬಗ್ಗೆ ಕನಕಗಿರಿ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ದಲ್ಲಾಳಿ ಜೊತೆ ಪೊಲೀಸರು, ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯ; ಅಹೋರಾತ್ರಿ ಧರಣಿ
ಇತ್ತ ತಮಗೆ ಬರಬೇಕಾದ ಹಣ ಬರುವವರೆಗೂ ದಲ್ಲಾಳಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ರೈತರು, ಶರಣಬಸವನನ್ನು ಎರಡು ದಿನಗಳಿಂದ ಗ್ರಾಮದಲ್ಲಿಯೇ ಕೂಡಿಹಾಕಿದ್ದಾರೆ.
