ಬುದ್ಧಿವಂತರಾದವರು ಮಾನಸಿಕವಾಗಿ ದುರ್ಬಲರಾಗಿರುವವರನ್ನು ಶೋಷಣೆ ಮಾಡುವುದೇ ಸಮಾಜದಲ್ಲಿ ಅಸಮಾನತೆಗೆ ಮೂಲ ಕಾರಣ. ಈ ಅಸಮಾನತೆಯನ್ನ ಹೋಗಲಾಡಿಸಲು ಡಾ. ಬಾಬಾ ಸಾಹೇಬರು ಸಂವಿಧಾನವನ್ನ ನೀಡಿದ್ದಾರೆ ಎಂದು ದಲ್ಲಿ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದು ಪ್ರಕ್ರಿಯೆ ಸಂಸ್ಥೆ ಮುಖ್ಯಸ್ಥ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಮಂಜುನಾಥ್ ಬಾಗೇಪಲ್ಲಿ ಹೇಳಿದರು.
ನಗರದ ಸರಸ್ವತಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪ್ರಕ್ರಿಯೆ ಸಂಸ್ಥೆ, ದರ್ಪಣ ಹಾಗೂ ಸರಸ್ವತಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾಗರಿಕತೆ ಹುಟ್ಟಿದಾಗಿನಿಂದಲೂ ಲಿಂಗ ತಾರತಮ್ಯತೆ ನಡೆಯುತ್ತಿದೆ. ಶತಮಾನಗಳಷ್ಟು ಹಳೆಯದಾದ ಲಿಂಗ ತಾರತಮ್ಯ ಹಾಗೂ ಸಮಾಜದಲ್ಲಿರುವ ಜಾತಿ, ಧರ್ಮ, ಬಡವ ಶ್ರೀಮಂತ ಹಾಗೂ ಇತರೆ ತಾರತಮ್ಯಗಳನ್ನು ಹೋಗಲಾಡಿಸಲು ಅಂಬೇಡ್ಕರ್ ಅವರು ಸಂವಿಧಾನ ಪೀಠಿಕೆಯಲ್ಲಿ ಸಮಾನತೆಯ ಅಂಶವನ್ನು ಪ್ರಸ್ತಾಪ ಮಾಡಿದ್ದಾರೆ. ಮಕ್ಕಳು ಸಂವಿಧಾನದ ಪರಿಕಲ್ಪನೆಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಎಲ್ಲರೂ ಸಹೋದರತ್ವದ ತತ್ವದಲ್ಲಿ ಜೀವನ ಮಾಡಿದರೆ ಸಮಾಜದಲ್ಲಿ ಯಾವುದೇ ಅಶಾಂತಿ ಇಲ್ಲದೆ ಸಹಜೀವನ ಮಾಡಬಹುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಕಾಮಿನಿ ಕಾರ್ಖಾನೆಯಲ್ಲಿ ಅನಿಲ ಸೋರಿಕೆ; ಉತ್ಪಾದನೆ ಕೆಲಸ ಸ್ಥಗಿತಕ್ಕೆ ಸೂಚನೆ
ಕಾರ್ಯಕ್ರಮದಲ್ಲಿ ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್ ಎ ಗಫಾರ್, ಪ್ರಕ್ರಿಯೆ ಸಂಸ್ಥೆಯ ಕಾರ್ಯಕರ್ತ ವೀರೇಶ್ ತೆಗ್ಗಿನಮನಿ, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಮುಖ್ಯ ಶಿಕ್ಷಕಿ ರೇಣುಕಾ ಆರ್ ಹಚ್ ಅತ್ತನೂರ ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
