ನೆಲಮಂಗಲ | ಮದುವೆಯಾಗುವ ಭರವಸೆ; ಮಹಿಳಾ ಕಾನ್‌ಸ್ಟೆಬಲ್‌ಗೆ 18 ಲಕ್ಷ ರೂ. ವಂಚನೆ

Date:

ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಯಚವಾಗಿದ್ದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ, ವರದಕ್ಷಿಣೆ ಹೆಸರಿನಲ್ಲಿ 18 ಲಕ್ಷ ರೂ. ಪಡೆದು ಮಹಿಳಾ ಕಾನ್‌ಸ್ಟೆಬಲ್‌ಗೆ ವಂಚಿಸಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ಬೆಳಕಿಗೆ ಬಂದಿದೆ.

- Advertisement -

ನೆಲಮಂಗಲ ನಿವಾಸಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ (CISF) ಸೇವೆ ಸಲ್ಲಿಸುತ್ತಿದ್ದ ಯುವತಿ ವಂಚನೆಗೆ ಒಳಗಾಗಿದ್ದಾರೆ. ತೆಲಂಗಾಣ ಮೂಲದ ಅಶೋಕ್ ಮುಸ್ತಿ ಎಂಬಾತ ತಮಗೆ ವಂಚಿಸಿದ್ದಾನೆಂದು ಆರೋಪಿಸಿದ್ದಾರೆ. ದಾಬಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಸಂತ್ರಸ್ತ ಯುವತಿ ಮದುವೆಯಾಗಲು ನಿರ್ಧರಿಸಿದ್ದರು. ಜೀವನ ಸಂಗಾತಿಯ ಹುಡುಕಾಟಕ್ಕಾಗಿ ಮ್ಯಾಟ್ರಿಮೋನಿಯಲ್ ವೇದಿಕೆಗಳಲ್ಲಿ ಖಾತೆ ತೆರೆದಿದ್ದರು. ಅವರಿಗೆ ಮ್ಯಾಟ್ರಿಮೋನಿಯಲ್‌ನಲ್ಲಿ ತೆಲಂಗಾಣದ ಆಶೋಕ್ ಮುಸ್ತಿ ಪರಿಚಯವಾಗಿದ್ದಾನೆ. ತಾನು ಸರ್ಕಾರಿ ಉದ್ಯೋಗಿ ಎಂದೂ ನಂಬಿಸಿದ್ದಾನೆ.

ಮದುವೆ ಮಾತುಕತೆಯನ್ನೂ ನಡೆಸಿದ್ದ ಆರೋಪಿ ಆಶೋಕ್, ವರದಕ್ಷಿಣೆಯಾಗಿ 20 ಲಕ್ಷ ರೂ. ನೀಡಬೇಕೆಂದು ಯುವತಿಯ ಬಳಿ ಬೇಡಿಕೆ ಇಟ್ಟಿದ್ದಾನೆ. ಆತನ ಬ್ಯಾಂಕ್‌ ಖಾತೆಗೆ ಯುವತಿ 18 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.

ಹಣ ಪಡೆದ ಬಳಿಕ, ವಿವಾಹಕ್ಕೆ ಆರೋಪಿ ನಿರಾಕರಿಸಿದ್ದಾನೆ. ಹಣ ವಾಪಸ್‌ ಕೊಡುವಂತೆ ಕೇಳಿದರೂ, ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾನೆ. ಇದೀಗ, ಸಂತ್ರಸ್ತೆ ದೂರು ದಾಖಲಿಸಿದ್ದಾರೆ.

ಅವರ ದೂರಿನ ಆಧಾರದ ಮೇಲೆ ದಾಬಸ್‌ಪೇಟೆ ಪೊಲೀಸರು ಬಿಎನ್‌ಎಸ್‌ ಸೆಕ್ಷನ್ 318, 321, 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ಆಗಸ್ಟ್ 23ನ್ನು ‘ಕರ್ನಾಟಕ ಕಾಫಿ ಡೇ’ ಎಂದು ಘೋಷಿಸಲು ಪವನ್ ನಾಯ್ಕ್ ಆಗ್ರಹ

ಶಿರಸಿ: ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ...

ಭದ್ರಾವತಿಯ VISL ಎಜಿಎಂ ಗೋವಿಂದರಾಜು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, VISL ಸಂಸ್ಥೆಯಲ್ಲಿ ಎಜಿಎಂ...

ಗದಗ | ಕರ್ನಾಟಕ ಏಕೀಕರಣಕ್ಕಾಗಿ ನಾರಾಯಣರಾವ್ ಕೋಡುಗೆ ಅಪಾರ: ಹನುಮಂತಪ್ಪ ಅಬ್ಬಿಗೇರಿ

"ಕರ್ನಾಟಕ ಏಕೀಕರಣಕ್ಕಾಗಿ ಗದಗ ಜಿಲ್ಲೆಯ ಹುಯಿಲಗೋಳ ನಾರಾಯಣರಾವ್ ಅವರ ಕೊಡುಗೆ ಅಪಾರವಾಗಿದೆ....

ಕಾರವಾರ | ಚಿತ್ತಾಕುಲದಲ್ಲಿ ಆತಂಕ ಮೂಡಿಸಿದ್ದ ಚಿರತೆ ಸುರಕ್ಷಿತವಾಗಿ ಸೆರೆ

ಕಾರವಾರ: ಗೋಪಶಿಟ್ಟಾ ವಲಯದ ಚಿತ್ತಾಕುಲ ಶಹರ ಶಾಖೆಯ ಹಳೇಭಾಗ ಗ್ರಾಮದಲ್ಲಿ ಕಳೆದ...