ದೋಸೆಯನ್ನು ಪಾರ್ಸಲ್ ಕಟ್ಟಿಕೊಡಲು ಆರ್ಡರ್ ಮಾಡಿದ್ದ ಗ್ರಾಹಕನಿಗೆ ಹೋಟೆಲ್ ಮಾಲೀಕ ದೋಸೆ ಬದಲು ಹಣದ ಬಂಡಲ್‌ಅನ್ನೇ ಕಟ್ಟಿಕೊಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಶನಿವಾರ ನಡೆದಿದೆ.
ಹೋಟೆಲ್ ಮಾಲೀಕರೊಬ್ಬರು ಗ್ರಾಹಕರಿಗೆ ಆಹಾರ ಪಾರ್ಸೆಲ್ ಕಟ್ಟುವ ಭರದಲ್ಲಿ ದೋಸೆ ಬದಲಿಗೆ, ಬ್ಯಾಂಕಿಗೆ ಕಟ್ಟಲು ಕೂಡಿಸಿಟ್ಟಿದ್ದ 49,625 ರೂ.ದ ಚೀಲವನ್ನು ಕೊಟ್ಟು ಕಳಿಸಿದ್ದಾರೆ. ಮನೆಯಲ್ಲಿ ಚೀಲವನ್ನು ತೆರೆದು ನೋಡಿದಾಗ, ಹಣವಿರುವುದನ್ನು ಕಂಡ ಗ್ರಾಹಕ ಶ್ರೀನಿವಾಸ ಎನ್.ದೇಸಾಯಿ ಎಂಬವರು ಹಣವನ್ನು ಹೋಟೆಲ್ ಮಾಲೀಕನಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಇದನ್ನು ಓದಿದ್ದೀರಾ? ಅಂಕೋಲಾ ಗುಡ್ಡ ಕುಸಿತ | ಮುಂದುವರಿದ ರಕ್ಷಣಾ ಕಾರ್ಯಾಚರಣೆ; ಲಾರಿ ಚಾಲಕ ಜೀವಂತ ಮರಳಲು ಜನರ ಪ್ರಾರ್ಥನೆ
ಶಿಕ್ಷಕನಾಗಿರುವ ದೇಸಾಯಿ ಶನಿವಾರ ಬೆಳಗ್ಗೆ ಶಾಲೆಗೆ ಹೋಗುವ ಗಡಿಬಿಡಿಯಲ್ಲಿ, ತಮ್ಮ ಮಗಳಿಗಾಗಿ ಹೋಟೆಲ್‌ನಲ್ಲಿ ದೋಸೆ ಕಟ್ಟಿಸಿಕೊಂಡು ಬಂದಿದ್ದರು. ಆದರೆ, ಹೋಟೆಲ್ ಮಾಲೀಕ ರಸೂಲ್ ಖಾನ್ ಅವರು ದೋಸೆ ಪಾರ್ಸೆಲ್ ಕಟ್ಟಿದ್ದ ಚೀಲ ಕೊಡುವ ಬದಲು, ಬ್ಯಾಂಕಿಗೆ ಕಟ್ಟಲು ಇಟ್ಟುಕೊಂಡಿದ್ದ 49,625 ರೂ ಹಣದ ಬಂಡಲ್ ಅನ್ನು ಕೊಟ್ಟಿದ್ದರು ಎಂದು ವರದಿಯಾಗಿದೆ.