ಕೊಪ್ಪಳ | ಮಾಲಿನ್ಯದ ಕತ್ತಲು ಕಳೆಯುವ ತನಕ ಚಳವಳಿ ನಿಲ್ಲಿಸಬೇಡಿ: ಮಹಿಮಾ ಪಟೇಲ್

Date:

ನಾವು ಅನಿವಾರ್ಯ ತಪ್ಪು ಮಾಡುವವರ ವ್ಯವಸ್ಥೆಯೊಳಗೆ ಸಿಕ್ಕಿ ಹಾಕಿಕೊಂಡಿದ್ದೇವೆ. ಅಂತಹ ಆಡಳಿತಗಾರರನ್ನು ತಿರಸ್ಕರಿಸುವುದೇ ಸರ್ವೋದಯ ಆಂದೋಲನದ ಮಾರ್ಗವಾಗಿದೆ. ಮಾಲಿನ್ಯದ ಕತ್ತಲು ಕಳೆಯುವ ತನಕ ಚಳವಳಿ ನಿಲ್ಲಿಸಬೇಡಿ ಎಂದು ಸರ್ವೋದಯ ಕರ್ನಾಟಕ ಸಂಸ್ಥಾಪಕ ಮಹಿಮಾ ಜೆ. ಪಟೇಲ್ ಹೇಳಿದರು.

- Advertisement -

ಕೊಪ್ಪಳದಲ್ಲಿ 312ನೇ ದಿನದ ಬುಲ್‌ಡೋಜರ್ ಹಾಗೂ ಮಾಲಿನ್ಯ ವಿರೋಧಿ ಧರಣಿ ವೇದಿಕೆಯಲ್ಲಿ ಮಾತನಾಡಿದ ಅವರು, “ಶುದ್ಧವಾದ ಗಾಳಿ, ಬೆಳಕು, ನೀರು ಬೇಕು ಎನ್ನುವುದು ನಮ್ಮ ಹಕ್ಕು. ಯಾರು ಕಾರ್ಖಾನೆ ಹಾಕುತ್ತಾರೋ ಅವರು ಅದೇ ಪ್ರದೇಶದಲ್ಲಿ ಎ.ಸಿ. ಇಲ್ಲದೆ ಮನೆ ಕಟ್ಟಿ ಬದುಕಿದರೆ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇವರಿಗೆ ಹಣವೇ ಪ್ರಧಾನವಾಗಿದೆ. ನಮ್ಮ ನದಿಗಳು ಮಲಿನವಾಗಿವೆ. ಭೂಮಿಯ ಶಾಖ ಹೆಚ್ಚಾಗುತ್ತಿದೆ. ಪರಿಸರ ನೀತಿ, ಕೃಷಿ, ಆರೋಗ್ಯ, ಶಿಕ್ಷಣ, ಆಡಳಿತ ಬದಲಾಗಬೇಕು” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ರಾಜಕಾರಣಿಗಳು, ಅಧಿಕಾರಿಗಳು, ವಕೀಲರು, ವೈದ್ಯರು ಅನಿವಾರ್ಯವಾಗಿ ತಪ್ಪು ದಾರಿಗೆ ಹೊರಟಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂಥ ಅನಿವಾರ್ಯತೆಗಳನ್ನು ಯಾರೂ ಒಪ್ಪಿಕೊಳ್ಳಬಾರದು. ಪರಿಸರ, ಜೀವ, ಆರೋಗ್ಯ ಹಾನಿ ಮಾಡಿ ಅಭಿವೃದ್ಧಿ ಅನಿವಾರ್ಯ ಎಂದು ಹೇಳುವ ಮಟ್ಟಿಗೆ ಆಡಳಿತಗಾರರು ತಲುಪಿದ್ದಾರೆ. ಇದು ಸರಿಯೇ ಎಂದು ಪ್ರಶ್ನಿಸಿದರು. ಇಲ್ಲಿ ನಡೆದಿರುವುದು ಸತ್ಯಾಗ್ರಹ, ಚಳುವಳಿ ಎಂದು ಹೇಳೋಣ. ನಿಮ್ಮ ಪರಿಸರ ಉಳಿಸುವ ಹೆಜ್ಜೆಯಲ್ಲಿ ಸರ್ವೋದಯ ಕರ್ನಾಟಕ ಜತೆಯಾಗಿ ಹೆಜ್ಜೆ ಹಾಕುತ್ತದೆ. ಮುಖ್ಯಮಂತ್ರಿಗಳ ಮುಂದೆ ನಿಯೋಗ ಕೊಂಡೊಯ್ದರಷ್ಟೇ ಸಾಲದು; ಇಲ್ಲಿನ ಮಾಲಿನ್ಯದ ಕತ್ತಲು ಕಳೆಯುವ ತನಕ ಚಳವಳಿ ನಿಲ್ಲಿಸಬೇಡಿ ಎಂದು ಧರಣಿ ಸತ್ಯಾಗ್ರಹಿಗಳಿಗೆ ಕಿವಿಮಾತು ಹೇಳಿದರು.

ಪ್ರೊ. ಸಿದ್ದು ಯಾಪಲಪರ್ವಿ ಮಾತನಾಡಿ, “ಹೈದರಾಬಾದ್-ಕರ್ನಾಟಕ ಜನರು ಮೊಟ್ಟಮೊದಲ ಪ್ರಜಾಸತ್ತೆಯ ಸಂಸತ್ತು ಕೊಟ್ಟ ಶರಣರ ನೆಲದವರು. ಇಂಥ ನೆಲ ಪಾಳೆಗಾರಿಕೆ, ಆಡಳಿತಗಾರರ ಕೆಟ್ಟ ಆಳ್ವಿಕೆಗೆ ಸಿಕ್ಕಿ ನಿಸ್ಸಹಾಯಕ ಸ್ಥಿತಿಯಿಂದ ಎಲ್ಲಾ ಕೆಟ್ಟದ್ದನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಬಂದುಬಿಟ್ಟಿತು. ನಮಗೆ ಶೋಷಣೆ ಹೆಚ್ಚಾಗಿದ್ದರೆ ಪ್ರತಿರೋಧ ಮಾಡಬೇಕು. ಹಳೆ ಮೈಸೂರು, ಕರಾವಳಿ ಕರ್ನಾಟಕದ ಜನರಿಗಿರುವ ಸಾಮಾನ್ಯ ಪ್ರಜ್ಞೆ ನಮಗೇಕಿಲ್ಲ. ದೆಹಲಿ ರೂಪದ ಜಂತರ್ ಮಂತರ್ ಆಂದೋಲನ ಇಲ್ಲಿನ ಯುವಕರು ಹೋರಾಟಕ್ಕೆ ಮುಂದಾಗಬೇಕು” ಎಂದರು.

“ಮತ್ತೊಬ್ಬ ಸರ್ವೋದಯ ಕರ್ನಾಟಕ ಆಂದೋಲನದ ದಾವಣಗೆರೆಯ ಜಿ.ಸಿ. ಬಸವಲಿಂಗಪ್ಪ ಮಾತನಾಡಿ, ಸರ್ವೋದಯ ಪರಿಸರವನ್ನೇ ಮೊದಲ ಆದ್ಯತೆಯಾಗಿ ಇಟ್ಟುಕೊಂಡು ಆಂದೋಲನ ಮಾಡುತ್ತಿದೆ. ಮೊದಲು ಕೊಪ್ಪಳಕ್ಕೆ ಇದರ ಅವಶ್ಯಕತೆ ಹೆಚ್ಚಿದೆ” ಎಂದರು.

ಇದಕ್ಕೂ ಮೊದಲು ಮಹಿಮಾ ಪಟೇಲ್ ಹಾಗೂ ಸರ್ವೋದಯ ತಂಡದವರು ಬಾಧಿತ ಹಿರೇಬಗನಾಳ, ಹಾಲವರ್ತಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಜನರ ಜತೆಗೆ ಮಾತನಾಡಿ ಮಾಹಿತಿ ಪಡೆದುಕೊಂಡು ಧರಣಿ ವೇದಿಕೆಗೆ ಬಂದರು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕರಾದ ಸಂತೋಷ್ ದೇಶಪಾಂಡೆ, ರಮೇಶ್ ತುಪ್ಪದ, ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ್ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇರ, ರಾಜಶೇಖರ್ ಏಳುಭಾವಿ, ಸಾವಿತ್ರಿ ಮುಜುಮದಾರ, ಮಂಜುನಾಥ್ ಸೊರಟೂರು, ಈರಪ್ಪ ತೋಟದ, ಹನುಮೇಶ್ ಕಲಮಂಗಿ, ಪಂಪಣ್ಣ ಚಿಂತಪಲ್ಲಿ, ಮುರಡಪ್ಪ ಗುಂಡೂರ, ಡಾ. ಬಸವರಾಜ್ ಪೂಜಾರ್, ಮಲ್ಲಪ್ಪ ಮಾದಿನೂರ, ಶಿವಪ್ಪ ಬನಪ್ಪನವರ, ವೆಂಕಣ್ಣಾಚಾರ್ ಕಟ್ಟಿ, ಸದಾಶಿವ ಪಾಟೀಲ್, ಭೀಮಸೇನ ಕಲಕೇರಿ, ಬಿ.ಜಿ. ಕರಿಗಾರ, ಗಂಗಪ್ಪ ಡಂಫಳ ಮುಂತಾದವರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಡಿಗೆ ಕಾರು, ಇನ್‌ಸ್ಟಾಗ್ರಾಮ್ ಬಿಲ್ಡಪ್: ಉದ್ಯಮಿ ಸೋಗಿನಲ್ಲಿ ಮಹಿಳಾ ಪೊಲೀಸರಿಗೆ 24 ಲಕ್ಷ ರೂ. ವಂಚನೆ

ಮದುವೆಯಾಗುವ ಆಮಿಷವೊಡ್ಡಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳಿಂದ ಬರೋಬ್ಬರಿ 24 ಲಕ್ಷ ರೂಪಾಯಿ...

ಬೆಂಗಳೂರಿನ ಶೇ. 63ರಷ್ಟು ಪಿಜಿಗಳು ಅನಧಿಕೃತ: ಜಿಬಿಎ ಆಡಿಟ್ ವರದಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗಳ ಪೈಕಿ...

ಬಾಗಲಕೋಟೆ | ಸಿದ್ದರಾಮಯ್ಯ ವಿರುದ್ಧದ ಆರೋಪಗಳಿಗೆ ಕಾಶಪ್ಪನವರ ತಿರುಗೇಟು; ಯತ್ನಾಳರ ‘ಜೆಸಿಬಿ’ ಬಗ್ಗೆಯೂ ವ್ಯಂಗ್ಯ!

ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯ...

ಶೇರುಪೇಟೆ- ಈ ವಾರದ ನಷ್ಟ 20 ಲಕ್ಷ ಕೋಟಿ! ತೈಲ ಬೆಲೆಗಳ ‘ಕರಡಿ ಕುಣಿತ’ವೇ ಕಾರಣ

ಹಬ್ಬದ ಸಂಭ್ರಮದ ಸಮಯದಲ್ಲಿ ಶೇರುಪೇಟೆಯಲ್ಲಿ ಬಂಡವಾಳ ಹೂಡಿಕೆ ಮಾಡಿದವರು ತೀವ್ರ ನಿರಾಸೆಯನ್ನು...