ಬಸವಣ್ಣ ನವರು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸಮಾನತೆ ಕೊಡಿಸಲು ಜೊತೆಗೆ ಸಾಮಾಜಿಕ ಸಮಾನತೆಗೆ ಶ್ರಮಿಸಿದ ಮಹಾಚೇತನ . ಹಸಿವನ್ನು ನೀಗಿಸುವ ಸಲುವಾಗಿ ಪ್ರತಿಯೊಬ್ಬರಿಗೂ ದಾಸೋಹ ಪರಿಕಲ್ಪನೆ ನೀಡಿದ ದಾರ್ಶನಿಕ ಎಂದು ತಹಶೀಲ್ದಾರ್ ಕೆ. ಮಂಜುನಾಥ್ ತಿಳಿಸಿದರು.
ಕೊರಟಗೆರೆ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವ ಜ್ಞಾನಿ ಜಗಜ್ಯೋತಿ ಬಸವಣ್ಣರವರ 892ನೇಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ ನವರು ಸಮಾಜವನ್ನು ಸರಿದಾರಿಗೆ ತರಲು, ಅಂಕುಡೊಂಕುಗಳನ್ನು ತಿದ್ದಲು ವಚನಸಾಹಿತ್ಯವನ್ನು ರೂಪಿಸಿದರು. ಒಂದು ಆತ್ಮಶುದ್ಧಿಗಾಗಿ ಪರಿಕಲ್ಪನೆಗೆ ಲಿಂಗ ಪೂಜೆ ಮಾಡಿದ್ದರು ಅಷ್ಟೇ, ಯಾವುದೇ ಜಾತಿ ಧರ್ಮಕ್ಕೆ ಸೀಮಿತರಾದವರಲ್ಲ ಎಂದರು.
ಸುಮಾರು 300ಕ್ಕೂ ಹೆಚ್ಚು ವಚನಕಾರರನ್ನು ಒಳಗೊಂಡ ಜಗದ್ಗುರು ಬಸವಣ್ಣನವರ ಅನುಭವ ಮಂಟಪದಲ್ಲಿ ಸುಮಾರು 23 ಸಾವಿರ ವಚನಗಳನ್ನು ಸಾಮಾಜಿಕ ನ್ಯಾಯ, ಲಿಂಗ ಬೇಧ, ಅಸ್ಪೃಶ್ಯತೆ ನಿವಾರಣೆಗೆ ರಚಿಸಿದ್ದರು ಎಂದು ನುಡಿದರು.
ನನ್ನಲ್ಲಿಯೇ ದೇವರಿದ್ದಾರೆ ಅದನ್ನು ಭಕ್ತಿಯಿಂದ ಪೂಜಿಸಬೇಕು ಅದುವೇ ನಾವು ಮಾಡುವ ಕಾಯಕ ಎಂದವರು ಬಸವಣ್ಣರವರು,ಜಾತಿ ಧರ್ಮ ಎಂಬ ವಿಷ ಬೀಜ ಬಿತ್ತುವುದನ್ನು ಬಿಟ್ಟು ಮಹಾನ್ ನಾಯಕರು ನೀಡಿದ ತತ್ವ-ಸಿದ್ದಾಂತ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು.
ನಮ್ಮ ನೆರೆ ರಾಷ್ಟ್ರಗಳಾದ ಜರ್ಮನಿ, ಇಟಲಿ ಸೇರಿದಂತೆ ಅನೇಕರು ವಚನಸಾಹಿತ್ಯವನ್ನು ಅಧ್ಯಯನ ಮಾಡುತ್ತಿದ್ದಾರೆ. ಇಂದಿಗೂ ಅವರ ಸಾಮರಸ್ಯ, ಸಾಮಾಜಿಕ ನ್ಯಾಯ ಮತ್ತು ಕೆಲಸದ ಮೇಲಿನ ಭಕ್ತಿಯ ಸಂದೇಶವು ಭಾರತದಾದ್ಯಂತ ಜನರನ್ನು ಪ್ರೇರೇಪಿಸುತ್ತಿದೆ ಎಂದರು
ಸಿಪಿಐ ಅನಿಲ್ ಮಾತನಾಡಿ, ಬಸವಣ್ಣ ನವರು ಮಹಾನ್ ಕವಿ, ಸಮಾಜ ಸುಧಾರಕ ಮತ್ತು ದಾರ್ಶನಿಕರಾಗಿ ಹೆಸರನ್ನು ಗಳಿಸಿದ ಇವರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ತಲೆ ಎತ್ತಿ ನಿಂತಿದ್ದ ಪಿಡುಗುಗಳನ್ನು ತೊಡೆದು ಹಾಕಲು ಸಾಮಾಜಿಕ ಜಾಗೃತಿಯನ್ನು ಪಸರಿಸಲು ಆರಂಭಿಸಿದರು. ಜಾತಿ, ಬಣ್ಣ, ಅಂತಸ್ತಿನಲ್ಲಿ ವ್ಯತ್ಯಾಸವಿದ್ದರೂ ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಸಾರಿದ ಬಸವಣ್ಣನವರು ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಕೊರಟಗೆರೆ ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಎಂ ಶಿವಾನಂದ್ ಮಾತನಾಡಿ ಬಸವ ಜಯಂತಿ ಒಂದು ಪ್ರಾಚೀನ ಹಬ್ಬವಾಗಿದ್ದು, ಇದು ಭಾರತೀಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ವೈವಿಧ್ಯಮಯವನ್ನು ಪ್ರತಿನಿಧಿಸುತ್ತದೆ. ಮೊದಲ ಬಾರಿಗೆ ನೂತನ ಸಂಸತ್ ಭವನದ ಆವರಣದಲ್ಲಿ ಜಗದ್ಗುರು ಬಸವೇಶ್ವರರ ಜಯಂತಿಯನ್ನು ಆಚರಿಸಲಾಗಿದೆ.
ಇಡೀ ಪ್ರಪಂಚದಲ್ಲಿ ಎಲ್ಲಾರೂ ಬಸವಣ್ಣರವರ ಅನುಯಾಯಿಗಳಾಗಿದ್ದರು.ಎಲ್ಲಾ ಜಾತಿ ಒಂದೇ ಯಾವುದೇ ಜಾತಿಯು ಇಲ್ಲಿಲ್ಲ ಎಂದು ಕೂಡಲಸಂಗಮ ದೇವ ಎನ್ನುವ ಸಮಾನತೆ, ಲಿಂಗಾತಾರತಮ್ಯದ ವಿರುದ್ದ ಹೋರಾಡ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದವರು. ಸಮಾಜದ ಸರ್ವಧರ್ಮದವರು ಬಸವಣ್ಣರವರ ತತ್ತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅವರ ಮಾರ್ಗದರ್ಶನದಂತೆ ನಡೆಯಬೇಕು.
ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಶೀಲ್ದಾರ್ ರಾಮ್‌ಪ್ರಸಾದ್, ವೀರಶೈವ ಸಮಾಜದ ಉಪಾಧ್ಯಕ್ಷ ವಿನಯ್‌ಕುಮಾರ್, ಕಾರ್ಯದರ್ಶಿ ಚೆನ್ನಬಸಪ್ಪ, ಖಚಾಂಚಿ ಶಿವಾನಂದ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ಮುಖಂಡರಾದ ಎಲ್.ಸಿ ರಾಜಣ್ಣ, ಪರ್ವತಯ್ಯ, ಸುರೇಶ್, ಚಂದ್ರಶೇಖರ್, ಪವನ್‌ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.