ಕೊರಟಗೆರೆ | ಕುರಂಗರಾಯನ ಕೋಟೆಯಲ್ಲಿ ಮೂರು ಕೃತಿಗಳು ಜನಾರ್ಪಣೆ

Date:

Advertisements

‘ಕತ್ತಲರಾತ್ರಿಯಲ್ಲಿ ಒಂದು ದಿನ’ ಕಾರ್ಯಕ್ರಮದಲ್ಲಿ ಮೂರು ಕೃತಿಗಳ ಜನಾರ್ಪಣೆ ಮಾಡಿದ್ದು, ಈ ಮೂಲಕ ಸಾಹಿತ್ಯ ಆಸಕ್ತರಿಗೆ ಹೊಸ ಅನುಭವ ಲೋಕವನ್ನೇ ತೆರೆದಿಟ್ಟಿದ್ದಾರೆ. ಕತ್ತಲಲ್ಲೇ ಬೆಳಕಿನ ಕಿಡಿ ಉಂಟು ಎಂದು ಲೇಖಕ ಡಾ.ಪ್ರಕಾಶ್ ಮಂಟೇದ ಹೇಳಿದರು.

ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ನೆತ್ತಿಯ ಕುರಂಗರಾಯನ ಕೋಟೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಜನಜಂಗುಳಿಯಿರುವ ನಗರ ಪ್ರದೇಶಕ್ಕಿಂತ ಬೆಟ್ಟವೊಂದರ ಮೇಲೆ 45 ಜನ ಸಾಹಿತ್ಯಾಸಕ್ತರನ್ನು ಸೇರಿಸಿ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ ಎಂದರು.

ಸಾಹಿತ್ಯಾಸಕ್ತರ ತಂಡದಿಂದ ಕುರಂಕೋಟೆಯ ದೊಡ್ಡಕಾಯಪ್ಪನ ಗುಡಿ ಬಳಿಯ ದೇವರಹೊಳೆಯಿಂದ ಚಾರಣದ ಮೂಲಕ ಬೆಟ್ಟದ ತುದಿಯಲ್ಲಿ, ನ.25, ಶನಿವಾರ ರಾತ್ರಿಯಿಡೀ, ಡಾ.ರವಿಕುಮಾರ್ ನೀಹರವರ ಪ್ರಕಟಪೂರ್ವ ಕುರಂಗರಾಯನ ಸಂಸ್ಥಾನದ ನಾಟಕದ ಓದು ಮತ್ತು ಚರ್ಚೆ ನಡೆಸಲಾಯಿತು. ನ.26, ಭಾನುವಾರ ಬೆಳಗ್ಗೆ ಕುರಂಗರಾಯನ ಕಾಲದ ಗಲ್ಲೇಬಾನಿ, ಕೋಟೆ ಮುಂತಾದ ಸ್ಮಾರಕಗಳ ವೀಕ್ಷಣೆ ಮತ್ತು ಅವುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು.

Advertisements

ಕಾಂತರಾಜು ಗುಪ್ಪಟ್ಣರವರ ‘ಅರ್ಗಂಜಿಯ ಕೊರಳು’ ಕೃತಿಯನ್ನು ಕುರಿತು ಮೋದೂರು ತೇಜ ಮಾತನಾಡಿ, ಈ ತಲೆಮಾರಿನ ಯುವ ಕವಿಗಳು ಅಂಬೇಡ್ಕರರ ಕೊಡುಗೆಯನ್ನು ಕೇವಲ ಮೀಸಲಾತಿಗಾಗಿ ಬಳಸಿಕೊಳ್ಳುತ್ತಿರುವುದು ಮತ್ತು ನೆಲಮೂಲ ಸಂಸ್ಕೃತಿಯನ್ನು ಮರೆತು ಬ್ರಾಹ್ಮಣ್ಯದತ್ತ ವಾಲಿರುವುದನ್ನು ಕವಿ ತಮ್ಮ ಕವನಗಳಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ ಎಂದರು.

ಲಕ್ಷ್ಮೀಶ ದುರ್ಗದಳ್ಳಿಯ ‘ಕುಳಮೆತ್ತಿದ ಮಣ್ಣು’ ಕೃತಿಯನ್ನು ಕುರಿತು ಡಾ. ಮಂಜುನಾಥ ಬುಡಸನಹಳ್ಳಿ ಬಿಡುಗಡೆ ಮಾಡಿ, ತನ್ನ ಸುತ್ತಲಿನ ಘಟನೆ, ಸನ್ನಿವೇಶ, ದಾಂಪತ್ಯ, ಸ್ನೇಹ, ಪ್ರೀತಿಯನ್ನು ಕಾವ್ಯದ ವಸ್ತುವಾಗಿ ಹೆಣೆಯಲಾಗಿದೆ ಎಂದು ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪ್ರಶಸ್ತಿ ಪಡೆದ ಬಾಲಸುಧಾಕರ್ ಮೌಳಿಯವರ ‘ಭೂಮಿ ಪೆದಾಲ್ ಪೈ’ ಎಂಬ ತೆಲುಗು ಕೃತಿಯನ್ನು, ಅಶೋಕ್ ಅಗಿಲ್ ಅನುವಾದಿಸಿರುವ ‘ನದಿಯ ಹುಡುಕಾಟ’ ಕುರಿತು ಡಾ. ಮೂರ್ತಿ ತಿಮ್ಮನಳ್ಳಿ ಮಾತನಾಡಿ, ಇಲ್ಲಿನ ಕವಿತೆಗಳು ಯಾವುದೇ ಒಂದು ತತ್ವದಡಿಯಲ್ಲಿ ರಚನೆಯಾಗದೇ ಎಲ್ಲಾ ದಿಕ್ಕಿನೆಡೆಗು ಕಣ್ಣು ಹಾಯಿಸಿವೆ. ಪದವಿ ಓದುತ್ತಿರುವ ವಿದ್ಯಾರ್ಥಿಗಳು ಆಧುನೀಕರಣದತ್ತ ಹೊರಳಿಕೊಂಡಿರುವಾಗ ಅಶೋಕ್ ಸಾಹಿತ್ಯದತ್ತ ಹೆಜ್ಜೆ ಹಾಕಿರುವುದು ಮಾದರಿಯಾಗಿದೆ ಎಂದರು.

ಕಥೆಗಾರ ಡಾ. ರವಿಕುಮಾರ್ ನೀಹ ಮಾತನಾಡಿ ಪ್ರಾಗೈತಿಹಾಸಕಾಲದಿಂದ 18ನೇ ಶತಮಾನದವರೆಗೂ ಹಲವು ಕಾಲಘಟ್ಟಗಳಲ್ಲಿ ವೈಭವಯುತವಾಗಿ ಮೆರೆದು, ಅಳಿವಿನಂಚಿನಲ್ಲಿರುವ ಸಿದ್ದರಬೆಟ್ಟ ಮತ್ತು ಕುರಂಗರಾಯನ ಕೋಟೆ ಆವರಣದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಕವಿಗಳಾದ ದುಡ್ಡನಹಳ್ಳಿ ಮಂಜುನಾಥ್, ಬಿದಲೋಟಿ ರಂಗನಾಥ್, ಶಿವಶಂಕರ್ ಶೀಗೆಹಟ್ಟಿ, ಮಧುಸೂದನ್ ಬೈಚೇನಳ್ಳಿ, ಡಾ. ಎ.ಒ. ನರಸಿಂಹಮೂರ್ತಿ, ಡಾ. ಮಹೇಶ್ ಕುಮಾರ್, ಮುನಿರಾಜು, ಲಿಂಗರಾಜು, ಫಕ್ಕೀರೇಶ್, ನವೀನ್ ಕುಮಾರ್ ಸೇರಿದಂತೆ 40ಕ್ಕೂ ಅಧಿಕ ಮಂದಿ  ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X