ಮಂಡ್ಯ ಹೊರವಲಯದ ಸುಂಡಹಳ್ಳಿ ಗ್ರಾಮದ ಬಳಿ ಕೇಸರಿ ಶಾಲು ಹಾಗೂ ಆರ್ ಎಸ್ ಎಸ್ -ಬಜರಂಗದಳ ಬಾವುಟ ಹಿಡಿದಿದ್ದ ಯುವಕರ ಗುಂಪು ದಾರಿಹೋಕ ಮುಸ್ಲಿಂ ಯುವಕರನ್ನು ಅಡ್ಡಹಾಕಿ ಜೈಶ್ರೀರಾಮ್ ಘೋಷಣೆ ಹಾಕುವಂತೆ ಒತ್ತಡ ಹಾಗೂ ಬೆದರಿಕೆ ಒಡ್ಡಿರುವ ಕೋಮು ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಕರ್ನಾಟಕ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿ.ಸಿ.ಬಯ್ಯಾರೆಡ್ಡಿ ಆಗ್ರಹಿಸಿದರು.
ಶ್ರೀರಂಗಪಟ್ಟಣದ ಹನುಮ ಮಾಲೆ ಹೆಸರಿನಲ್ಲಿ ಪ್ರತಿ ವರ್ಷ ಕೋಮುವಾದಿ ಮನಸ್ಥಿತಿಯನ್ನು ಪೋಷಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆಗೆ ಹಾಗೂ ಶಾಂತಿ-ಸೌಹಾರ್ದತೆಗೆ ಗಂಭೀರ ಧಕ್ಕೆ ತರುವ ಇಂತಹ ಮೆರವಣಿಗೆಗಳಿಗೆ ಅವಕಾಶ ನೀಡಿರುವುದು ಕಾಂಗ್ರೆಸ್ ಸರ್ಕಾರದ ಹೊಣೆಗೇಡಿತನಕ್ಕೆ ಹಿಡಿದ ಕನ್ನಡಿಯಾಗಿದೆ. 1991ರ ಪೂಜಾ ಸ್ಥಳ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಬೇಕಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೋಮುವಾದಿ ಚಟುವಟಿಕೆಗಳನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆರೋಪಿಸಿದೆ.
ಇದನ್ನು ಓದಿದ್ದೀರಾ? ಮಂಡ್ಯ | ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ: ಮುಂದುವರಿದ ಹಗ್ಗ-ಜಗ್ಗಾಟ
ಇದನ್ನು ಓದಿದ್ದೀರಾ? ಮುಸ್ಲಿಮರಿಗೆ ಹಿಂಸೆ ನೀಡಿ ಶ್ರೀರಾಮನಿಗೆ ಜೈ ಎನ್ನಿಸಿದರೆ ದೇವರು ಮೆಚ್ಚುವನೇ?
ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಹನುಮ ಮಾಲೆ ಎಂಬುದು ಧಾರ್ಮಿಕ ಚಟುವಟಿಕೆ ಅಲ್ಲ ಎಂಬುದು ಬಹಳ ಸ್ಪಷ್ಟ. ಬಿಜೆಪಿ-ಆರ್ಎಸ್ಎಸ್ನ ರಾಜಕೀಯ ಸಂಕುಚಿತ ದುರುದ್ದೇಶಕ್ಕಾಗಿ ನಡೆಯುತ್ತಿರುವ ಕೋಮುವಾದಿ ಚಟುವಟಿಕೆಯಾಗಿದೆ. ಇಂತಹ ಕೋಮುವಾದಿ ಚಟುವಟಿಕೆಗಳನ್ನು ರಾಜಕೀಯವಾಗಿ ಎದುರಿಸಬೇಕು ಮತ್ತು ಕೋಮು ಗಲಭೆ ಉಂಟು ಮಾಡುವ ಯಾವುದೇ ಪ್ರಯತ್ನವನ್ನು ಹಿಂಜರಿಕೆ ಇಲ್ಲದೆ ಕಠಿಣ ಕಾನೂನು ಕ್ರಮದ ಮೂಲಕ ತಡೆಗಟ್ಟಬೇಕು. ಅಲ್ಪಸಂಖ್ಯಾತರ ಆತಂಕ ಮತ್ತು ಆಭದ್ರತೆಯನ್ನು ಮುಸ್ಲಿಂ ಮೂಲಭೂತವಾದಿ ಶಕ್ತಿಗಳು ದುರುಪಯೋಗ ಮಾಡಿಕೊಳ್ಳದಂತೆ ಸೂಕ್ತ ಜಾಗೃತಿ ಉಂಟು ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದಿದ್ದಾರೆ.