ಹಲವಾರು ವರ್ಷಗಳ ತಿಕ್ಕಾಟದ ತರುವಾಯ ಕೊನೆಗೂ ಮಂಗಳೂರಿನಿಂದ ಮೂಡಬಿದ್ರೆ ಮಾರ್ಗವಾಗಿ ಕಾರ್ಕಳಕ್ಕೆ ಕೆಎಸ್‌ಆರ್‌ಟಿಸಿ ಬಸ್ಸು ಸಂಚರಿಸಲು ಪ್ರಾರಂಭವಾಗಿದೆ.
ಮಂಗಳೂರಿನಿಂದ ಪ್ರಾರಂಭವಾದ ಬಸ್ಸು ಈಗಾಗಲೇ ಪ್ರತಿದಿನವೂ ಐದು ಟ್ರಿಪ್‌ಗಳನ್ನು ಮುಗಿಸುತ್ತಿದ್ದು, ಸಾರ್ವಜನಿಕರ ಸ್ಪಂದನೆಯೂ ಕೂಡ ಉತ್ತಮವಾಗಿದೆ ಎಂದು ಚಾಲಕ-ನಿರ್ವಾಹಕರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಮಾಧ್ಯಮದಲ್ಲಿ ಪ್ರಕಟಿಸಿರುವಂತೆ ರಸ್ತೆ ಸಾರಿಗೆ ಬಸ್ಸುಗಳು ರಾಜ್ಯ ಹೆದ್ದಾರಿಯ ಬದಿಯಲ್ಲಿಯೇ ನಿಲ್ಲಿಸಿ ಮುಂದುವರೆಯುತ್ತಿರುವುದು ಪ್ರಯಾಣಿಕರಿಗೆ ಬಹಳ ತೊಂದರೆದಾಯಕವಾಗಿದೆ. ಆದುದರಿಂದ ರಾಜ್ಯ ರಸ್ತೆ ಸಾರಿಗೆಯ ಎಲ್ಲ ಬಸ್ವನ್ ಅವರು ಕೂಡ ಮೂಡುಬಿದಿರೆಯ ರಾಜೀವ್ ಗಾಂಧಿ ಕಾಂಪ್ಲೆಕ್ಸ್‌ನ ಒಳಗೆ ನಿಲ್ಲಿಸಿ ನಿಯಂತ್ರಣ ಕಚೇರಿಯ ಉಪಯೋಗವನ್ನು ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ.

ಮೂಡುಬಿದಿರೆ ಪುರಸಭೆ ಹಾಗೂ ಪೊಲೀಸ್ ಇಲಾಖೆಯವರು ಅಲ್ಲಿರುವ ಇತರ ವಾಹನಗಳನ್ನು ನಿವಾರಿಸಿ ರಾಜ್ಯ ರಸ್ತೆ ಸಾರಿಗೆ ಹಾಗೂ ಹೊರ ರಾಜ್ಯದ ಬಸ್ಸುಗಳಿಗಾಗಿಯೇ ಇರುವ ಸ್ಥಳವನ್ನು ಒದಗಿಸಿಕೊಡುವುದು ಯೋಗ್ಯ ಎಂದು ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ.
ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾ ಸ್ವಾಗತ
ಮಂಗಳೂರು-ಮೂಡಬಿದ್ರಿ-ಕಾರ್ಕಳ ಮಾರ್ಗದಲ್ಲಿ 4 ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಮಂಗಳೂರು ಕೆ ಎಸ್ ಆರ್ ಟಿ ಸಿ ವಿಭಾಗ ನಿರ್ಧಾರಕ್ಕೆ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜ ಅವರು ಸ್ವಾಗತಿಸಿದ್ದಾರೆ.
ಮಂಗಳೂರು-ಮೂಡಬಿದ್ರಿ-ಕಾರ್ಕಳ ಮಾರ್ಗದಲ್ಲಿ ಶಕ್ತಿ ಯೋಜನೆಗಳ ಫಲಾನುಭವಿಗಳಿಗೆ ಯಾವುದೇ ಬಸ್ ಸಂಚಾರ ಇಲ್ಲದೇ ತೊಂದರೆ ಉಂಟಾಗಿದ ಬಗ್ಗೆ ಕಳೆದ ಕೆ ಡಿ ಪಿ ಸಭೆಯಲ್ಲಿ ಪ್ರಸ್ತಾಪಿಸಿ, ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಚುಕ್ಕಗುರುತಿನ ಪ್ರಶ್ನೆ ಮತ್ತು ಗಮನ ಸೆಳೆಯುವ ಪ್ರಶ್ನೆ ಹಾಕಿರುವ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಿ ದಿ 9/12/2024 ರಂದು ಪ್ರಾದೇಶಿಕ ಆಯುಕ್ತರು 4 ಪರ್ಮಿಟ್‌ಗಳನ್ನು ನೀಡಿ, ಬಸ್ ಪ್ರಾರಂಭಿಸುವುದಾಗಿ ತಿಳಿಸಿದರು.
ಆದರೆ ಬಸ್ ಮತ್ತು ಚಾಲಕರ ಲಭ್ಯತೆ ಇಲ್ಲದೆ ಕಾರಣಕ್ಕಾಗಿ ಶುಕ್ರವಾರ ಬೆಳಗ್ಗೆಯಿಂದ 4 ಬಸ್ ಸಂಚಾರ ಪ್ರಾರಂಭಿಸಲಾಗುವುದು ಮತ್ತು ಹೆಚ್ಚಿನ ಬಸ್ ಗಳನ್ನು ಮಂಗಳೂರು ನಗರದಲ್ಲಿ ಮೂಡಬಿದ್ರೆ-ಕಾರ್ಕಳ ಮಾರ್ಗದಲ್ಲಿ ಸಂಚರಿಸಲಾಗುವುದು ಎಂದು ಸಾರಿಗೆ ಇಲಾಖೆ ಅನುಮತಿ ನೀಡಲಾಗಿದೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ತಿಳಿಸಿದ್ದಾರೆ ಮತ್ತು ಸಾರಿಗೆ ಸಚಿವರಿಗೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


ಹತ್ತಿರದ ಜಿಲ್ಲೆಗಳಾದ ಕೊಡಗು ಶಿವಮೊಗ್ಗ ಚಿಕ್ಕಮಗಳೂರಿಗೂ ಮೂಡುಬಿದಿರೆಯಿಂದ ಸಾರಿಗೆ ಬಸ್ಸು ಸಂಚಾರ ಆರಂಭವಾಗಲಿ