ಬೀದರ್‌ | ಸೃಜನಶೀಲತೆ ಹಾಗೂ ವೈಚಾರಿಕ ಚಿಂತನೆ ಕಟ್ಟಿಕೊಟ್ಟ ಲೇಖಕ ಕುವೆಂಪು

Date:

Advertisements

ಕುವೆಂಪು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಲ್ಲರನ್ನೂ ಪ್ರಭಾವಿಸಿದ ಕವಿ ಹಾಗೂ ಚಿಂತಕ. ಸೃಜನಶೀಲತೆಯ ಜೊತೆಗೆ ವೈಚಾರಿಕ ಚಿಂತನೆಯನ್ನು ಕಟ್ಟಿಕೊಟ್ಟ ಲೇಖಕ ಎಂದು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ರವೀಂದ್ರನಾಥ ನಾರಾಯಣಪುರ ಅಭಿಪ್ರಾಯಪಟ್ಟರು.

ಬಸವಕಲ್ಯಾಣ ನಗರದ ಎಸ್.ಎಸ್.ಕೆ. ಬಸವೇಶ್ವರ ಪದವಿ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ‘ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ’ ಲೇಖನದ ಕುರಿತ ಉಪನ್ಯಾಸ ಹಾಗೂ ಸಂವಾದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

“ಎದೆಯ ದನಿಗೂ ಮಿಗಿಲಾದ ಆಲೋಚನೆ ಮತ್ತೊಂದ ಇಲ್ಲವೇ ಇಲ್ಲ ಎಂಬ ಕುವೆಂಪು ಚಿಂತನೆ ಮಾನವೀಯತೆಗೆ ಆದ್ಯತೆ ನೀಡಿದೆ. ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಅವರು ಸೃಷ್ಠಿಸಿದ ಪಾತ್ರಗಳು ಅನನ್ಯವಾಗಿವೆ. ಹಲವು ಹೊಸ ಪದಗಳನ್ನು ಸೃಷ್ಠಿಸಿದ ಕುವೆಂಪು ಅವರು ನಮ್ಮ ಕಾಲದ ಯುಗದ ಕವಿ. ಅವರು ಎರಡು ಬೃಹತ್ ಕಾದಂಬರಿಗಳು ಮಲೆನಾಡಿನ ಹಾಗೂ ಜನಜೀವನದ ದರ್ಶನ ಮಾಡಿಸುತ್ತವೆ” ಎಂದರು.

Advertisements

ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿ, “50 ವರುಷಗಳ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಕುವೆಂಪು ಅವರು ಮಾಡಿದ ಭಾಷಣ ‘ವಿಚಾರ ಕ್ರಾಂತಿಗೆ ಆಹ್ವಾನ’ ಲೇಖನ ಇಂದಿಗೂ ಪ್ರಸ್ತುತವಾಗಿದೆ. ಕುವೆಂಪು ಅವರು ಬಸವ ಸಿದ್ಧಾಂತದ ಮುಂದುವರಿಕೆಯ ಚಿಂತಕ. ಮೌಢ್ಯ, ಕಂದಾಚಾರ ವಿರೋಧಿಸಿದ ಕುವೆಂಪು ಸಮಾಜವಾದದ ನಿಲುವು ಪ್ರತಿಪಾದಿಸಿದರು” ಎಂದರು.

ಹಳ್ಳಿಯ ಸಂಗತಿ, ಬಡತನ, ಶ್ರಮಿಕರ ಕಾಳಜಿ, ಚುನಾವಣೆ, ರಾಜಕಾರಣಿಗಳ ಹುಸಿ ಭರವಸೆ, ಸಾಮಾಜಿಕ ವಾಸ್ತವದ ಬಗೆಗೆ ಆಳವಾಗಿ ಈ ಲೇಖನದಲ್ಲಿ ಕುವೆಂಪು ಚರ್ಚಿಸಿದ್ದಾರೆ. ಅಂದು ಅವರು ಮಂಡಿಸಿದ ಆಲೋಚನೆ ವರ್ತಮಾನದ ಬಿಂಬವಾಗಿದೆ. ಕನ್ನಡಕ್ಕೆ ವೈಚಾರಿಕ ಸಾಹಿತ್ಯ ನೀಡಿದವರಲ್ಲಿ ಕುವೆಂಪು ಅಗ್ರಗಣ್ಯರು” ಎಂದರು.

ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, “ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ವಚನಕಾರರ ನಂತರ ಕುವೆಂಪು ಬಹುದೊಡ್ಡ ವೈಚಾರಿಕ ಚಿಂತಕರು. ಅವರ ಸೃಜನಶೀಲ ಮತ್ತು ಸೃಜನೇತರ ಬರಹಗಳಲ್ಲಿ ಸಮಕಾಲೀನ ಸ್ಪಂದನೆಯ ಗುಣವಿದೆ. ವಿಚಾರ ಕ್ರಾಂತಿಗೆ ಆಹ್ವಾನದಲ್ಲಿ ಹೊಸ ಆಲೋಚನೆಗಳಿಂದಲೇ ಬದುಕು ಹೊಸ ಹೊಳಪು ಪಡೆದು ಹೊಸ ಜೀವನಕ್ಕೆ ಹಾತೊರೆಯಬೇಕಾದ ಯುವ ಸಮುದಾಯ ಮೌಢ್ಯ, ಕಂದಾಚಾರ, ಭ್ರಷ್ಟಾಚಾರಗಳಲ್ಲಿ ಸಿಲುಕಿದ್ದನ್ನು ಖಂಡಿಸಿದ್ದರು” ಎಂದು ನುಡಿದರು.

“ಅಧಿಕಾರಶಾಹಿಗಳ ಅಧಿನತೆಯಿಂದ ಬಿಡುಗಡೆಯಾಗುವ ಅಗತ್ಯತೆ, ಪ್ರಭುತ್ವದ ಹಾಗೂ ಅಧಿಕಾರದ ಸ್ವಾರ್ಥಕ್ಕೆ ಚುನಾವಣೆಗಳು ಹಿಡಿದ ಹಾದಿ, ಪ್ರಜಾಪ್ರಭುತ್ವದ ಪರಿಕಲ್ಪನೆ, ಚಳುವಳಿಗಳ ಸಾಧ್ಯತೆ, ರಾಜಕಾರಣದ ಸಾಧ್ಯತೆ ಮತ್ತು ಸವಕಲುತನ, ಸಾಮಾಜಿಕ ವಾಸ್ತವದ ಸತ್ಯವನ್ನು ‘ವಿಚಾರ ಕ್ರಾಂತಿಗೆ ಆಹ್ವಾನ’ ಲೇಖನ ಕಥನಿಸುತ್ತದೆ. ಕುವೆಂಪು ಅವರು ಯುವಕರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬೆಳೆಸಿದ ಬಹುದೊಡ್ಡ ಲೇಖಕ” ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಬಸವರಾಜ ಎವಲೆ ಮಾತನಾಡಿ, “ಕುವೆಂಪುರವರ ವೈಚಾರಿಕ ಚಿಂತನೆಗಳು ಈ ಕಾಲದ ಎಲ್ಲ ವಿದ್ಯಾರ್ಥಿಗಳ ಓದಿನ ವ್ಯಾಪ್ತಿಗೆ ಬರಬೇಕು. 50 ವರ್ಷಗಳ ಹಿಂದೆ ಅವರು ಮಾಡಿದ ಭಾಷಣ ಇಂದಿಗೂ ಚರ್ಚೆಗೆ ಒಳಗಾಗುತ್ತದೆ ಎಂದರೆ ಅವರ ವೈಚಾರಿಕತೆಯ, ಪ್ರಖರ ಚಿಂತನೆಯ ಚಲನಶೀಲತೆಯನ್ನು ಸಾಕ್ಷಿಕರಿಸುತ್ತದೆ. ‘ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ ಎಂದು ಕರೆ ನೀಡಿದ್ದರ ಹಿಂದೆ ಯುವ ಸಮುದಾಯ ಸ್ವತಂತ್ರ ಚಿಂತನೆ ಬೆಳೆಸಿಕೊಳ್ಳುವ ಆಶಯ ಕುವೆಂಪು ಅವರದಾಗಿತ್ತು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ರಾಜ್ಯ ಸರ್ಕಾರ

ಕಾರ್ಯಕ್ರಮದಲ್ಲಿ ಡಾ. ಲಕ್ಮಿಬಾಯಿ ಭಂಕೂರ, ಕಲ್ಯಾಣಪ್ಪ ನಾವದಗಿ, ಸೂರ್ಯಕಾಂತ ನಾಸೆ, ಶಿವಕುಮಾರ ಕೊಲ್ಲೆ, ಭಾರತಿ ಮಠ, ರತ್ನಸಾಗರ ರಗಟೆ, ಅಶ್ವಿನಿ ಜಲಾದೆ, ಚನ್ನಮ್ಮ ದಾಮಾ, ಶಿವಾನಂದ ಬಿರಾದಾರ, ಸಂದೀಪ ಮುಕಿಂದೆ, ಪ್ರತಿಷಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ, ನಿರ್ದೇಶಕ ಡಾ. ಶಿವಾಜಿ ಮೇತ್ರೆ ಸಂದೀಪ ಸೇರಿದಂತೆ ಹಲವರಿದ್ದರು. ಪ್ರೊ. ವಿಠೋಬಾ ಡೊಣ್ಣೆಗೌಡರ್ ಸ್ವಾಗತಿಸಿದರು. ನೇತ್ರಾ ಕಳಮಾಸೆ ನಿರೂಪಿಸಿದರು. ಡಾ. ಶಿವಕುಮಾರ ಪಾಟೀಲ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸೈಬರ್ ವಂಚನೆ, ಜೂಜಾಟ, ವ್ಯಸನದ ವಿರುದ್ಧ ಸಾಲಿಡಾರಿಟಿ ಜಾಗೃತಿ ಅಭಿಯಾನ : ಸೈಯದ್ ತನ್ವೀರ್

ಯುವ ಪೀಳಿಗೆಯನ್ನು ಸೈಬರ್ ವಂಚನೆ, ಆನ್‌ಲೈನ್ ಜೂಜಾಟ ಹಾಗೂ ಗೇಮಿಂಗ್ ವ್ಯಸನದ...

ಹಾವೇರಿ | ಕಾನೂನು ಸುವ್ಯವಸ್ಥೆ ಕಾಪಾಡಿ: ಡಿವೈಎಸ್ಪಿ ಗುರುಶಾಂತಪ್ಪ

"ಗೌರಿ ಗಣೇಶ ಹಬ್ಬ ಹಾಗೂ ಈದ್‌ ಮಿಲಾದ್ ಹಬ್ಬವನ್ನು ಹಿಂದೂ–ಮುಸ್ಲಿಂ ಸಮುದಾಯದವರು...

ಶಿರಸಿ | 35 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಕೊನೆಗೂ ಬಂಧನ

ಹಳೆಯ ಪ್ರಕರಣವೊಂದರಲ್ಲಿ ಸುಮಾರು 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಉತ್ತರ ಕನ್ನಡ...

ಹಾವೇರಿ | ಗುಣಾತ್ಮಕ ಶಿಕ್ಷಣಕ್ಕಾಗಿ ಕಲಿಕೆ: ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಮಸುಂದರ ಅಡಿಗ

"ಎಲ್. ಬಿ.ಎ.ಫ್.ಲ್ ಎನ್ ಕಾರ್ಯಕ್ರಮಗಳ ಪರಿಣಾಮ ಮುಂದಿನ ದಿಗಳಲ್ಲಿ ಕಾಣಬಹುದು. ಆಂಗ್ಲ...

Download Eedina App Android / iOS

X