ಕುಷ್ಟರೋಗವನ್ನು ಕಳಂಕವೆಂದು, ಆ ರೋಗಿಗಳನ್ನು ಮುಚ್ಚಿಸಿಕೊಳ್ಳಬಾರದೆಂಬ ಮೂಡನಂಬಿಕೆ ಜನರಲ್ಲಿ ತುಂಬಿಕೊಂಡಿದೆ. ಇಂತಹ ಅಪನಂಬಿಕೆಯ ವಿರುದ್ಧ ಅರಿವು ಮೂಡಿಸಲು ಅನೌಪಚಾರಿಕ ಶಿಕ್ಷಣ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಸಂಸ್ಥೆಯ ಮುಖಂಡ ಫಾದರ್ ಟಿಯೊಲ್ ಮಚಾದೊ ಹೇಳಿದ್ದಾರೆ.
ವಿಜಯಪುರದ ಮಹಾತ್ಮ ಗಾಂಧಿ ಕಾಲೋನಿಯಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ಮತ್ತು ನವಜೀವನ್ ಒಕ್ಕೂಟ ಆಯೋಜಿಸಿದ್ದ ಕುಷ್ಠ ರೋಗ ನಿರ್ಮೂಲನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. “ಕುಷ್ಟ ರೋಗಿಗಳು ಇಚ್ಛಾಸಕ್ತಿ ಇದ್ದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಮಹಾತ್ಮ ಗಾಂಧಿ ಕಾಲೋನಿಯಲ್ಲಿದ್ದ ರೋಗಿಗಳೇ ನಿದರ್ಶನ. ಒಂದು ವರ್ಷದಲ್ಲಿ ಕುಷ್ಠ ರೋಗ ಪತ್ತೆ ಹಚ್ಚಲು 101 ಕ್ಯಾಂಪುಗಳನ್ನು ಮಾಡಿದ್ದೇವೆ. ಅದರಲ್ಲಿ ಬರಿ ಕುಷ್ಟರೋಗ ಮಾತ್ರವಲ್ಲದೆ, ಇತರ ಕಾಯಿಲೆಗಳನ್ನು ಕೂಡ ಪತ್ತೆಹಚ್ಚಲಾಗಿದೆ” ಎಂದರು.
“ಇವತ್ತಿನ ದಿನಮಾನಗಳಲ್ಲಿ ಬಿಪಿ, ಶುಗರ್ ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ನಮ್ಮ ಸಂಸ್ಥೆಯ ಸೇವಕರು ಇಂಥ ಹಲವಾರು ರೋಗಿಗಳ ಮಧ್ಯೆ ಸುಮಾರು 30 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರವು ಸಹಾಯ ಮಾಡುತ್ತಿದೆ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಬಸವರಾಜ್ ಹುಬ್ಬಳ್ಳಿ, “ನಾವು ಬರೀ ನಮ್ಮ ಆಸ್ಪತ್ರೆಗೆ ಬಂದವರಿಗೆ ಮಾತ್ರ ಚಿಕಿತ್ಸೆ ಕೊಡುತ್ತೇವೆ. ಆದರೆ, ಸಂಸ್ಥೆಯು ಹಳ್ಳಿ ಹಳ್ಳಿಗೆ ಹೋಗಿ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದೆ” ಎಂದರು.
ಕಾರ್ಯಕ್ರಮದಲ್ಲಿ ಫಾದರ್ ಫ್ಯಾನ್ಸಿಸ್ ಮೆನೆಜೆಸ್, ಡಾ. ಸಂಪತ್ ಗುಣಾರಿ, ಸಿಸ್ಟರ್ ಶಾಂತಿ, ಕರಿಷ್ಮಾ ಶಿಂದೆ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು, ಮಹಾತ್ಮ ಗಾಂಧಿ ಕಾಲೋನಿಯ ಎಲ್ಲಾ ಗಣ್ಯರು ಊರಿನ ಹಿರಿಯರು ಇತರರು ಉಪಸ್ಥಿತರಿದ್ದರು.